Mahindra Thar: ಶಕ್ತಿಶಾಲಿ ಮಹೀಂದ್ರಾ ಥಾರ್ 5 - ಡೋರ್‌ಗೆ ಈ ಹೆಸರು? ಎದುರಾಳಿಗಳಿಗೆ ಶುರುವಾಯ್ತು ನಡುಕ!
ಮಹೀಂದ್ರಾ ಥಾರ್ (Mahindra Thar) ಜನಪ್ರಿಯ ಆಫ್-ರೋಡ್ ಎಸ್‌ಯುವಿಯಾಗಿದೆ. 3 - ಡೋರ್ ಆಯ್ಕೆಯಲ್ಲಿ ಖರೀದಿಗೆ ದೊರೆಯುವ ಈ ಕಾರು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹವನ್ನು ಸೆಳೆದಿದೆ. ಮುಂದಿನ ವರ್ಷ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಲು ಥಾರ್‌ನ್ನು 5 - ಡೋರ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಲು ಕಂಪನಿ ತಯಾರಿ ನಡೆಸಿದೆ.
ಮುಂಬರಲಿರುವ 5 - ಡೋರ್ ಮಹೀಂದ್ರಾ ಥಾರ್ (5 - Door Mahindra Thar), 3 - ಡೋರ್ ಥಾರ್‌ಗೆ ಹೋಲಿಸಿದರೆ ವೀಲ್‌ಬೇಸ್, ವಿನ್ಯಾಸ ಹಾಗೂ ವೈಶಿಷ್ಟ್ಯದ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಪಡೆದಿರಲಿದೆ. ಸದ್ಯ ದೊರೆತ್ತಿರುವ ಮಾಹಿತಿ ಪ್ರಕಾರ, ಕಂಪನಿಯು ಥಾರ್‌ಗಾಗಿ 7 ಹೆಸರನ್ನು ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಲ್ಲಿ ನೋಂದಾಯಿಸಿದೆ.

ಥಾರ್ ಅರ್ಮಡಾ (Thar Armada), ಕಲ್ಟ್ (Cult), ರೆಕ್ಸ್ (Rex), ಸವನ್ನಾ (Savannah), ರೋಕ್ಸ್ (Roxx), ಗ್ಲಾಡಿಯಸ್ (Gladius) ಮತ್ತು ಸೆಂಚುರಿಯನ್ (Centurion) ಹೆಸರುಗಳನ್ನು ರಿಜಿಸ್ಟರ್ ಮಾಡಲಾಗಿದೆ. ಈಗಾಗಲೇ, ನೂತನ 5 - ಡೋರ್ ಮಹೀಂದ್ರಾ ಥಾರ್ ಹಲವು ಬಾರಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದ್ದು, ವಿವಿಧ ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.
ಈ ನೂತನ ಮಹೀಂದ್ರಾ ಥಾರ್ 5 - ಡೋರ್ (Mahindra Thar 5 - Door) ಎಸ್‌ಯುವಿ, ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಪಡೆದಿರಲಿದೆ. ಮುಖ್ಯವಾಗಿ ನವೀನವಾದ ಗ್ರಿಲ್, ಹೊಸದಾದ ಎಲ್ಇಡಿ ಹೈಡ್ ಲೈಟ್, ಆಕರ್ಷಕ ಅಲಾಯ್ ವೀಲ್ಸ್, ಎಲ್ಇಡಿ ಟೈಲ್ ಲೈಟ್, ಪರಿಷ್ಕೃತ ಬಂಪರ್ ಹಾಗೂ ಹೊಸ ಬಣ್ಣದ ಆಯ್ಕೆಯನ್ನು ಹೊಂದಿರಲಿದೆ.

3 - ಡೋರ್ ಆಯ್ಕೆಯ ಥಾರ್‌ಗೆ ಹೋಲಿಸಿದರೆ ಹೊಸ 5 - ಡೋರ್ ಮಹೀಂದ್ರಾ ಥಾರ್, ವೈಶಿಷ್ಟ್ಯಗಳಲ್ಲಿ ಹಲವು ಬದಲಾವಣೆಗಳನ್ನು ಒಳಗೊಂಡಿರಲಿದೆ. ಇದು ಸನ್‌ರೂಫ್, ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫ್ರಂಟ್ ಆರ್ಮ್ ರೆಸ್ಟ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಪಿಲ್ಲರ್ - ಮೌಂಟೆಡ್ ಗ್ರಾಬ್ ಹ್ಯಾಂಡಲ್ ಫೀಚರ್ಸ್ ಹೊಂದಿರಲಿದೆ. ಸುರಕ್ಷತೆಯ ದೃಷ್ಟಿಯಿಂದ ADAS (ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ) ತಂತ್ರಜ್ಞಾನ ಪಡೆದಿರುವ ನೀರಿಕ್ಷೆಯಿದೆ.
ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ 3 - ಡೋರ್ ಮಹೀಂದ್ರಾ ಥಾರ್, ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಎಕ್ಸ್ (ಒ), ಎಲ್ಎಕ್ಸ್ ರೂಪಾಂತರದೊಂದಿಗೆ ಎವರೆಸ್ಟ್ ವೈಟ್, ಅಕ್ವಾಮರೀನ್, ರೆಡ್ ರೇಜ್, ನಪೋಲಿ ಬ್ಲಾಕ್ ಸೇರಿದಂತೆ ಆರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಮಹೀಂದ್ರಾ ಥಾರ್ 3 ಪವರ್ ಟ್ರೈನ್ ಆಯ್ಕೆಯಲ್ಲಿ ದೊರೆಯುತ್ತದೆ. 1.5 ಲೀಟರ್ ಡೀಸೆಲ್ ಎಂಜಿನ್ 117 hp ಪವರ್ ಮತ್ತು 300 Nm ಪೀಕ್ ಟಾರ್ಕ್, 2.2 - ಲೀಟರ್ ಡೀಸೆಲ್ ಎಂಜಿನ್ 128 hp ಗರಿಷ್ಠ ಪವರ್, 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಮತ್ತೊಂದು, 2.0 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 150 hp ಪವರ್ ಹಾಗೂ 320 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 6 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಸಿಗಲಿದ್ದು, 4WD (ಫೋರ್ ವೀಲ್ ಡ್ರೈವ್), RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ. 15.2 kmpl ಮೈಲೇಜ್ ನೀಡುತ್ತದೆ.
ವೈಶಿಷ್ಟ್ಯದ ವಿಚಾರವಾಗಿ ಮಾತನಾಡುವುದಾದರೆ, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಕೂಡ ಥಾರ್ ಅತ್ಯುತ್ತಮವಾಗಿದ್ದು, ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಹೊಂದಿದೆ.


Click it and Unblock the Notifications








