ಶಬರಿಯಂತೆ ಕಾಯುವುದು ಮುಂದುವರಿಕೆ: ಆ.15ಕ್ಕೆ ಇಲ್ಲ ಮಹೀಂದ್ರಾ ಥಾರ್ 5-ಡೋರ್ ಅನಾವರಣ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಜಿಮ್ನಿ 5-ಡೋ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಈ ಎಸ್‍ಯುವಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಮಾರುತಿ ಜಿಮ್ನಿ ನಿರಿಕ್ಷಿಗೂ ಮಿರಿ ಭಾರೀ ಸಂಚಲನವನ್ನು ಮಾಡುತ್ತಿದ್ದರೆ, ಅದರ ಎದುರಾಳಿ ಮಹೀಂದ್ರಾ ಥಾರ್ (Mahindra Thar) ಎಸ್‍ಯುವಿಗೆ ಆತಂಕ ಪ್ರಾರಂಭವಾಗಿದೆ.

ಈ ನಡುವೆ, ಕಳೆದ ವಾರ, ಮಹೀಂದ್ರಾ ಆಗಸ್ಟ್ 15 ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಸಮಾರಂಭದಲ್ಲಿ ಥಾರ್ 5-ಡೋರ್ ಅನಾವರಣಗೊಳಿಸಲಿದೆ ಎಂದು ವರದಿಗಳಾಗಿತ್ತು. ಆದರೆ ಥಾರ್ 5-ಡೋರ್ ಮಾದರಿಯು ಜಾಗತಿಕ ಅನಾವರಣದ ಬಗ್ಗೆ ಎಲ್ಲಾ ವದಂತಿಗಳನ್ನು ನಿರಾಕರಿಸುವ ಮೂಲಕ ಕಾರು ತಯಾರಕರು ಈಗ ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ. ಮಹೀಂದ್ರಾ ಥಾರ್ 5-ಡೋರ್ ಎಸ್‌ಯುವಿಗಾಗಿ ಮತ್ತಷ್ಟು ಕಾಯಬೇಕಾಗುತ್ತದೆ. ಇದು ಬಹುನಿರೀಕ್ಷೆಯಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಬೇಸರ ಮೂಡಿಸಬಹುದು.

Mahindra Thar 5-door

ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ, ಈ ವರ್ಷಕ್ಕೆ ಬಿಡುಗಡೆಯನ್ನು ನಿಗದಿಪಡಿಸಲಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ಕ್ವಾರ್ಟರ್ ಫಲಿತಾಂಶಗಳ ಮಾಧ್ಯಮ ಸಂವಾದದ ಸಮಯದಲ್ಲಿ, ಥಾರ್ 5-ಡೋರ್‌ನ ಬಿಡುಗಡೆಯನ್ನು ಭಾರತದಲ್ಲಿ 2024 ಕ್ಕೆ ನಿಗದಿಪಡಿಸಲಾಗಿದೆ ಎಂದು ನಾವು ದೃಢಪಡಿಸಿದ್ದೇವೆ ಎಂದು ಮತ್ತೊಮ್ಮೆ ತಿಳಿಸಿದೆ. 2024ರಲ್ಲಿ ಈ ಹೊಸ 5-ಡೊರಿನ ಮಹೀಂದ್ರಾ ಬಿಡುಗಡೆಯಾಗಲಿದೆ.

ಇದರಿಂದ ಮಾರುತಿ ಸುಜುಕಿಗೆ ಪ್ರಯೋಜನವನ್ನು ನೀಡುತ್ತದೆ ಏಕೆಂದರೆ ಜಿಮ್ನಿ ಎಸ್‍ಯುವಿ ಮಾರಾಟದ ದೃಷ್ಟಿಕೋನದಿಂದ ಸ್ವಲ್ಪ ಉತ್ತಮ ಸ್ಟಾರ್ಟ್ ಸಿಗಲಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್ ರೋಡರ್ ಎಸ್‍ಯುವಿಯಾಗಿದ್ದು, ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ.

Mahindra Thar 5-door

ಬೇಡಿಕೆ ಹೆಚ್ಚಾಗಿರುವುದರಿಂದ ಈ ಮಹೀಂದ್ರಾ ಥಾರ್ ಎಸ್‍ಯುವಿಯ ಕಾಯುವ ಅವಧಿಯು ಕೂಡ ಹೆಚ್ಚಿದೆ. ಇದೀಗ ಮಹಿಂದ್ರಾ ಕಂಪನಿಯು ಬಹುಬೇಡಿಕೆಯ ಥಾರ್ ಎಸ್‍ಯುವಿಯ 5-ಡೊರಿನ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹೀಂದ್ರಾ ಥಾರ್ 5-ಡೊರಿನ ಆವೃತ್ತಿಯು ಕಳೆದ ಕೆಲವು ತಿಂಗಳುಗಳಿಂದ ಅಗಾಗ ರೋಡ್ ಟೆಸ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಇನ್ನಷ್ಟು ಆಕರ್ಷಕವಾಗಿಸಲು ಸಿದ್ಧವಾಗಿದೆ. ಥಾರ್ ಅನ್ನು ಪ್ರಸ್ತುತ 3-ಡೋರಿನ ಲೇಔಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಇತ್ತೀಚೆಗೆ ಮಹಿಂದ್ರಾ ಥಾರ್‌ ಎಸ್‍ಯುವಿಯು 5-ಡೋರ್ ಆವೃತ್ತಿಯಾಗಿ ಬರಲು ಸಜ್ಜಾಗಿದೆ. ಈ ಮಹೀಂದ್ರಾ ಥಾರ್ 5-ಡೋರಿನ ಎಸ್‍ಯುವಿಯು ಇತ್ತೀಚೆಗೆ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ. ಈ 5-ಡೋರಿನ ಆವೃತ್ತಿಯು 3-ಡೋರಿನ ಥಾರ್‌ಗೆ ಹೋಲುತ್ತದೆ. ಈ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯು ಉದ್ದವಾದ ವೀಲ್‌ಬೇಸ್ ಮತ್ತು ಹಿಂಭಾಗದ ಡೋರುಗಳನ್ನು ಹೊಂದಿವೆ.

ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಭಾರವಾದ ಮತ್ತು ಕಾರ್ಯವನ್ನು ನಿರ್ವಹಿಸುವ ಕಾರಣ, 5-ಡೋರ್ ಥಾರ್ 2-0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಬಹುದು.ಇನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ 370 ಎನ್ಎಂ ಮತ್ತು 6-ಸ್ಪೀಡ್ ಎಟಿಯೊಂದಿಗೆ 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ 130 ಎಚ್‌ಪಿ ಮತ್ತು 172 ಎಚ್‌ಪಿ ಎಂಬ ಎರಡು ಸ್ಥಿತಿಗಳಲ್ಲಿ ನೀಡಲಾಗುತ್ತದೆ.

ಮೊದಲನೆಯದು ಕೇವಲ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಲಭ್ಯವಿದೆ ಮತ್ತು 300 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಟ್ಯೂನ್‌ನ ಉನ್ನತ ಸ್ಥಿತಿಯಲ್ಲಿ, ಟಾರ್ಕ್ ಔಟ್‌ಪುಟ್ ಮ್ಯಾನುಯಲ್‌ನೊಂದಿಗೆ 370 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಮಹೀಂದ್ರಾ ಥಾರ್ ಡೀಸೆಲ್ 130 ಬಿಹೆಚ್‍ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Article Published On: Wednesday, June 28, 2023, 16:48 [IST]
English summary
New mahindra thar 5 door will not unveil on august 15 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+