ಎಲೆಕ್ಟ್ರಿಕ್ ರೂಪದಲ್ಲೂ ಧೂಳೆಬ್ಬಿಸಲು ಹೊಸ ಅವತಾರದಲ್ಲಿ ಬರಲಿದೆ ಮಹೀಂದ್ರಾ ಥಾರ್

ಆಫ್-ರೋಡ್ ಎಸ್‍ಯುವಿ ಅಂದರೆ ನಮ್ಮ ಮನಸ್ಸಿಗೆ ಬರುವುದು ಮಹೀಂದ್ರಾ ಥಾರ್ (Mahindra Thar). ಈ ಜನಪ್ರಿಯ ಮಹಿಂದ್ರಾ ಥಾರ್ ಆಗಸ್ಟ್ 15 ರಂದು ದಕ್ಷಿಣ ಆಫ್ರಿಕಾದಲ್ಲಿ ತನ್ನ ಚೊಚ್ಚಲ ಪ್ರವೇಶಕ್ಕೆ ಮುಂಚಿತವಾಗಿ ಥಾರ್ ಎಲೆಕ್ಟ್ರಿಕ್ ಎಸ್‍ಯುವಿಯ ಟೀಸರ್ ಬಿಡುಗಡೆಯಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಬಿಡುಗಡೆಗೊಂಡ ಟೀಸರ್ ಪ್ರಕಾರ, ಮುಂಬರುವ ಈ ಕಾನ್ಸೆಪ್ಟ್ ಮಾದರಿಯನ್ನು ಥಾರ್.ಇ ಎಂದು ಕರೆಯಲಾಗುತ್ತದೆ.

ಟೀಸರ್ ಅನ್ನು ವಿಶ್ಲೇಷಿಸಿದರೆ, ಮುಂಬರುವ ಮಹೀಂದ್ರ ಥಾರ್.ಇ ಸ್ಕ್ವಾರಿಶ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳನ್ನು 3D ಸ್ಟೈಲಿಂಗ್‌ನೊಂದಿಗೆ ಹೊಂದಿದೆ. ಅಲ್ಲದೆ, ಮಾದರಿಯು ಬೋಲ್ಡ್-ಲುಕಿಂಗ್ ಫ್ರಂಟ್ ಮತ್ತು ರಿಯರ್ ಬಂಪರ್‌ಗಳೊಂದಿಗೆ ಪ್ರಮುಖವಾಗಿ ಕಾಣುವ ಟೋ ಹುಕ್‌ಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸುವುದು ಸುರಕ್ಷಿತವಾಗಿದೆ. ಥಾರ್.ಇ ಕಾನ್ಸೆಪ್ಟ್ ಕ್ವಾಡ್-ಮೋಟಾರ್ ಸೆಟಪ್‌ನೊಂದಿಗೆ ಪ್ರತಿ ಚಕ್ರವನ್ನು ಚಾಲನೆ ಮಾಡುವ ಪ್ರತಿ ಮೋಟಾರ್‌ನೊಂದಿಗೆ ಬರುತ್ತದೆ ಎಂದು ಹಲವರು ಹೇಳಲಾಗುತ್ತಿದೆ.

Mahindra Thar.e Concep

ಇದು ನಿಜವಾಗಿದ್ದರೆ, ಈ ಸೆಟಪ್ ಮುಂಬರುವ ಮಹೀಂದ್ರ ಥಾರ್.ಇ ಕಾನ್ಸೆಪ್ಟ್ ಹಲವು ಸಂದರ್ಭಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ಈ ಸೆಟಪ್ ಮಾದರಿಯನ್ನು 'ಕ್ರ್ಯಾಬ್ ವಾಕ್' ಗೆ ಸಕ್ರಿಯಗೊಳಿಸುತ್ತದೆ, ಅಲ್ಲಿ ಪ್ರತಿ ಚಕ್ರಗಳ ಲನೆಗಾಗಿ ಒಂದೇ ದಿಕ್ಕಿನಲ್ಲಿ ತಿರುಗುತ್ತವೆ. ಮಹೀಂದ್ರಾ ಒಡೆತನದ ಪಿನಿನ್‌ಫರಿನಾ ಬಟಿಸ್ಟಾ ಹೈಪರ್‌ಕಾರ್ ರಿಮ್ಯಾಕ್ ನೆವೆರಾ ಹೈಪರ್‌ಕಾರ್‌ನಂತೆಯೇ ಇದು ಕೂಡ ಅದೇ ಪವರ್‌ಟ್ರೇನ್ ಅನ್ನು ಬಳಸುತ್ತದೆ

ಹೊಸ ವರದಿಗಳ ಪ್ರಕಾರ, ಮಹೀಂದ್ರಾ ತನ್ನ ಜನಪ್ರಿಯ ಲೈಫ್ಟ್ ಸ್ಟೈಲ್ ಆಫ್-ರೋಡರ್ ಥಾರ್‌ನ ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಲು ಸಿದ್ಧವಾಗಿದೆ. ಜನಪ್ರಿಯ ಸ್ಕಾರ್ಪಿಯೊ-ಎನ್ ಎಸ್‌ಯುವಿ ಆಧಾರಿತ ಡಬಲ್-ಕ್ಯಾಬ್ ಪಿಕಪ್ ಕಾನ್ಸೆಪ್ಟ್ ಅನುಸರಿಸಿ ಇದು ಮಹೀಂದ್ರಾದಿಂದ ಎರಡನೇ ಕಾನ್ಸೆಪ್ಟ್ ಮಾದರಿಯಾಗಿರುತ್ತದೆ. ಎಲೆಕ್ಟ್ರಿಕ್ ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಮಹೀಂದ್ರಾ ಥಾರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕ್ವಾಡ್ ಮೋಟಾರ್ ಸೆಟಪ್ ಅನ್ನು ಅಳವಡಿಸಿಕೊಳ್ಳಬಹುದು.

Mahindra Thar.e Concep

ಪ್ರತಿ ಚಕ್ರದಲ್ಲಿ ಒಂದು ಮೋಟರ್ ಅನ್ನು ಹೊಂದಿದ್ದು, ಹಮ್ಮರ್ ಇವಿಯಂತೆಯೇ ಸಾಮರ್ಥ್ಯದಂತಹ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸುತ್ತದೆ. ಪವರ್‌ಟ್ರೇನ್ ಕುರಿತು ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಮಹೀಂದ್ರಾ ಕಳೆದ ವರ್ಷ ಐದು ವಿಭಿನ್ನ ಎಲೆಕ್ಟ್ರಿಕ್ ಕಾನ್ಸೆಪ್ಟ್ ಗಳನ್ನು ಪ್ರದರ್ಶಿಸಿತು. ಅವುಗಳಲ್ಲಿ ಯಾವುದೂ ಲ್ಯಾಡರ್-ಆನ್-ಫ್ರೇಮ್ ನಿರ್ಮಾಣವನ್ನು ಒಳಗೊಂಡಿಲ್ಲ. ಮಹೀಂದ್ರಾ ಥಾರ್‌ನ ಒರಟುತನವು ಅದರ ಬಲವಾದ ಲ್ಯಾಡರ್-ಆನ್-ಫ್ರೇಮ್ ಚಾಸಿಸ್‌ಗೆ ಕಾರಣವಾಗಿದೆ.

ಇದು ಅದೇ ಗಾತ್ರದ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಕಂಡುಬರುವ ಮೊನೊಕಾಕ್ ಫ್ರೇಮ್‌ಗಿಂತ ಭಾರವಾಗಿರುತ್ತದೆ. ಹಿಂದೆ, ಲ್ಯಾಡರ್-ಆನ್-ಫ್ರೇಮ್ ಎಸ್‍ಯುವಿಗಳಿಗೆ ಬ್ಯಾಟರಿ ಪ್ಯಾಕೇಜಿಂಗ್ ಮತ್ತು ಪ್ಲೇಸ್‌ಮೆಂಟ್ ಒಂದು ಸಮಸ್ಯೆ ಎಂದು ಪರಿಗಣಿಸಲಾಗಿತ್ತು. ಇನ್ನು ಮಹಿಂದ್ರಾ ಕಂಪನಿಯು ಬಹುಬೇಡಿಕೆಯ ಥಾರ್ ಎಸ್‍ಯುವಿಯ 5-ಡೊರಿನ ಆವೃತ್ತಿಯನ್ನು ಬಿಡುಗಡೆಗೊಳಿಸಲು ಕಾರ್ಯನಿರ್ವಹಿಸುತ್ತಿದೆ.

Mahindra Thar.e Concep

ಮಹೀಂದ್ರಾ ಥಾರ್ 5-ಡೊರಿನ ಆವೃತ್ತಿಯು ಕಳೆದ ಕೆಲವು ತಿಂಗಳುಗಳಿಂದ ಅಗಾಗ ರೋಡ್ ಟೆಸ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಇನ್ನಷ್ಟು ಆಕರ್ಷಕವಾಗಿಸಲು ಸಿದ್ಧವಾಗಿದೆ. ಥಾರ್ ಅನ್ನು ಪ್ರಸ್ತುತ 3-ಡೋರಿನ ಲೇಔಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೀಗ ಮಹಿಂದ್ರಾ ಥಾರ್‌ ಎಸ್‍ಯುವಿಯು 5-ಡೋರ್ ಆವೃತ್ತಿಯಾಗಿ ಬರಲು ಸಜ್ಜಾಗಿದೆ. ಈ ಮಹೀಂದ್ರಾ ಥಾರ್ 5-ಡೋರಿನ ಎಸ್‍ಯುವಿಯು ಇತ್ತೀಚೆಗೆ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ.

ಈ 5-ಡೋರಿನ ಆವೃತ್ತಿಯು 3-ಡೋರಿನ ಥಾರ್‌ಗೆ ಹೋಲುತ್ತದೆ. ಈ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯು ಉದ್ದವಾದ ವೀಲ್‌ಬೇಸ್ ಮತ್ತು ಹಿಂಭಾಗದ ಡೋರುಗಳನ್ನು ಹೊಂದಿವೆ. 3-ಡೋರಿನ ಥಾರ್‌ನಂತೆಯೇ ಥಾರ್ 5-ಡೋರ್ ಆವೃತ್ತಿಯು ಆಗಸ್ಟ್ 15 ರಂದು ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈ ಹೊಸ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು ಎಂದು ಹೇಳಲಾಗುತ್ತಿದೆ.

ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಭಾರವಾದ ಮತ್ತು ಕಾರ್ಯವನ್ನು ನಿರ್ವಹಿಸುವ ಕಾರಣ, 5-ಡೋರ್ ಮಹೀಂದ್ರಾ ಥಾರ್ 2-0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಬಹುದು.ಇನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ 370 ಎನ್ಎಂ ಮತ್ತು 6-ಸ್ಪೀಡ್ ಎಟಿಯೊಂದಿಗೆ 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ 130 ಎಚ್‌ಪಿ ಮತ್ತು 172 ಬಿಹೆಚ್‍ಪಿ ಎಂಬ ಎರಡು ಸ್ಥಿತಿಗಳಲ್ಲಿ ನೀಡಲಾಗುತ್ತದೆ.

Article Published On: Sunday, August 6, 2023, 13:00 [IST]
English summary
New mahindra thar e concept teased details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+