ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್‌ಯುವಿ700 ಬಿಡುಗಡೆ
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಹೊಸ XUV700 ಮಿಡ್ ಸೈಜ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿ ನೇಪಾಳದಲ್ಲಿ ತನ್ನ ಪ್ರಯಾಣಿಕ ವಾಹನ ಪೋರ್ಟ್ಫೋಲಿಯೊವನ್ನು ವಿಸ್ತರಿಸಿದೆ. ನೇಪಾಳದಲ್ಲಿ ಅಧಿಕೃತ ಮಹೀಂದ್ರಾ ಡೀಲರ್ ಆಗಿರುವ ಅಗ್ನಿ ಗ್ರೂಪ್‌ನಿಂದ ಸೇಲ್ ಮತ್ತು ಸರ್ವಿಸ್ ಅನ್ನು ಒದಗಿಸುತ್ತದೆ.
ಮಹೀಂದ್ರಾ ವಾಹನಗಳು ನೇಪಾಳದಲ್ಲಿ ಸಾಕಷ್ಟು ಜನಪ್ರಿಯವಾಗಿವೆ, ಏಕೆಂದರೆ ಅಲ್ಲಿಯ ಪರ್ವತ ಭೂಪ್ರದೇಶಕ್ಕೆ ಗಟ್ಟಿಮುಟ್ಟದ ಮಹೀಂದ್ರಾ ಸೂಕ್ತವಾಗಿವೆ. ಈ XUV700 ಎಸ್‍ಯುವಿ ಸೇರ್ಪಡೆಯೊಂದಿಗೆ, ಮಹೀಂದ್ರಾ ನೇಪಾಳ ಪೋರ್ಟ್ಫೋಲಿಯೊ ಈಗ ಒಟ್ಟು ನಾಲ್ಕು ಪ್ರಯಾಣಿಕ ವಾಹನಗಳನ್ನು ಹೊಂದಿದೆ. ಮಹೀಂದ್ರಾ ಕಂಪನಿಯು ಈಗಾಗಲೇ ನೇಪಾಳದಲ್ಲಿ ಸ್ಕಾರ್ಪಿಯೊ ಕ್ಲಾಸಿಕ್, ಎಕ್ಸ್‌ಯುವಿ300 ಮತ್ತು ಬೊಲೆರೊ ಪವರ್ ಪ್ಲಸ್ ವಾಹನಗಳನ್ನು ಮಾರಾಟ ಮಾಡುತ್ತಿದೆ. ಇನ್ನು ಸ್ಕಾರ್ಪಿಯೋ-ಎನ್ ಎಸ್‍ಯುವ್ಯನ್ನು ಕೂಡ ನೇಪಾಳದಲ್ಲಿ ಬಿಡುಗಡೆಗೊಳಿಸಲು ಯೋಜಿಸಿದೆ.

ಮಹೀಂದ್ರಾ ನೇಪಾಳದಲ್ಲಿ ಬೊಲೆರೊ ಮ್ಯಾಕ್ಸಿಟ್ರಕ್ ಪ್ಲಸ್, ಬೊಲೆರೊ ಪಿಕ್ ಅಪ್, ಸ್ಕಾರ್ಪಿಯೋ ಪಿಕ್ ಅಪ್ ಮತ್ತು ಬೊಲೆರೊ ಕ್ಯಾಂಪರ್‌ನಂತಹ ವಾಣಿಜ್ಯ ವಾಹನಗಳನ್ನು ಸಹ ಮಾರಾಟ ಮಾಡುತ್ತಿದೆ. ಮಹೀಂದ್ರಾ ಕಂಪನಿಯು ನೇಪಾಳದಲ್ಲಿ XUV700 ಎಸ್‍ಯುವಿಯನ್ನು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ನೀಡಲಾಗುತ್ತದೆ. ನೇಪಾಳದಲ್ಲಿ ಮಹೀಂದ್ರಾ XUV700 ಎಸ್‍ಯುವಿಯ ಪ್ರಾರಂಭಿಕ ಬೆಲೆ NR 74 ಲಕ್ಷವಾಗಿದೆ. ಇನ್ನು ಇದರ ಟಾಂಪ್ ಎಂಡ್ AT ರೂಪಾಂತರದ ಬೆಲೆಯು NR 1.10 ಕೋಟಿ (ಅಂದಾಜು ರೂ.68.5 ಲಕ್ಷ) ಆಗಿದೆ,
ಬೃಹತ್ ಆಮದು ಸುಂಕಗಳು ಮತ್ತು ತೆರಿಗೆಗಳಿಂದಾಗಿ ನೇಪಾಳದಲ್ಲಿ ಕಾರು ಬೆಲೆಗಳು ಭಾರೀ ದುಬಾರಿಯಾಗಿದೆ, ನೇಪಾಳದಲ್ಲಿ ಪ್ಯಾಸೆಂಜರ್ ಕಾರುಗಳನ್ನು ಕೂಡ ಅಲ್ಲಿ ಐಷಾರಾಮಿ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ. ನೇಪಾಳದಲ್ಲಿ ಆಮದು ಮಾಡಿಕೊಂಡ ಪ್ರಯಾಣಿಕ ಕಾರುಗಳಿಗೆ ಪ್ರಸ್ತುತ ಅನ್ವಯವಾಗುವ ತೆರಿಗೆ ದರವು ಬರೊಬ್ಬರಿ 250% ರಿಂದ 350% ವ್ಯಾಪ್ತಿಯಲ್ಲಿದೆ. ನೇಪಾಳದಲ್ಲಿ ಬಿಡುಗಡೆಗೊಂಡ ಮಹೀಂದ್ರಾ XUV700 ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವಂತೆಯೇ ಇದೆ.
ರೂಪಾಂತರಗಳಿಗೆ ಸಂಬಂಧಿಸಿದಂತೆ, XUV700 AX5, AX7 ಮತ್ತು AX7L ರೂಪಾಂತರಗಳಲ್ಲಿ ಲಭ್ಯವಿದೆ. ಈ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್ ಮತ್ತು 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಹೊಂದಿದೆ. ಭಾರತಕ್ಕಿಂತ ಭಿನ್ನವಾಗಿ, ನೇಪಾಳದಲ್ಲಿ ಕೇವಲ ಪೆಟ್ರೋಲ್ ಎಂಜಿನ್ ಮಾತ್ರ ಲಭ್ಯವಿದೆ. ಇದರಲ್ಲಿ 2.0-ಲೀಟರ್ ಎಂಸ್ಟಾಲಿಯನ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.
ಈ ಎಂಜಿನ್ ಅನ್ನು 197 ಬಿಹೆಚ್‍ಪಿ ಪವರ್ ಮತ್ತು 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸ್ಪೀಡ್ MT ಮತ್ತು AT ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಹೊಂದಿದೆ.
ಈ XUV700 ಎಸ್‍ಯುವಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ ಮತ್ತು ರೂಫ್ ಸ್ಪಾಯ್ಲರ್ ಅನ್ನು ಒಳಗೊಂಡಿದೆ. ಈ ಎಕ್ಸ್‌ಯುವಿ700 ಎಸ್‍ಯುವಿಯಲ್ಲಿ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇಯನ್ನು ಹೊಂದಿದೆ.
ಈ XUV700 ಎಸ್‍ಯುವಿಯಲ್ಲಿ ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಅನ್ನು ಹೊಂದಿದೆ. ಇದರೊಂದಿಗೆ ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂನಂತಹ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ.


Click it and Unblock the Notifications