ಬುಕ್ಕಿಂಗ್‌ನಲ್ಲಿ ಸುನಾಮಿ: 2-3 ಕಾರಿದ್ರು ಈ ಮಾರುತಿ ಎಸ್‍ಯುವಿ ಖರೀದಿಸುತ್ತಾರೆ!
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಇದೀಗ ಜನಪ್ರಿಯ ಜಿಮ್ನಿ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲೂ ಕೂಡ ಬಾರೀ ಬೇಡಿಕೆಯನ್ನು ಪಡೆದುಕೊಂಡಿದೆ. 2023ರ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ.
ಈ ಹೊಸ ಮಾರುತಿ ಜಿಮ್ನಿ (Maruti Jimny) ಎಸ್‍ಯುವಿಯು ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾಗೆ ಭಾರೀ ಪೈಪೋಟಿ ನೀಡುತ್ತಿದೆ. ಅದರಲ್ಲಿಯೂ ಆಫ್-ರೋಡ್ ಎಸ್‍ಯುವಿ ಎಂದಾಗ ಹಲವರಿಗೆ ಮೊದಲು ಮನಸ್ಸಿಗೆ ಬರುವುದು ಮಹೀಂದ್ರಾ ಥಾರ್ ಆಗಿದೆ. ಜಿಪ್ಸಿ ಒಂದು ಕಾಲದ ಆಫ್-ರೋಡ್ ಕಿಂಗ್ ಆದರೂ ಹೊಸ ತಲೆಮಾರಿಗೆ ಮಹೀಂದ್ರಾ ಥಾರ್ ಹೆಚ್ಚು ತಿಳಿದಿದೆ.

ಸದ್ಯ ಒಂದು ಕಾಲದ ಕಿಂಗ್ ಜಿಪ್ಸಿ ಉತ್ತರಾಧಿಕಾರಿಯಾಗಿ ಬಂದ ಜಿಮ್ನಿ ಮತ್ತೆ ಅದೇ ರೀತಿಯ ಸಂಚಲನ ಸೃಷ್ಟಿಸಿ. ಮಹೀಂದ್ರಾ ಥಾರ್ ಎಸ್‍ಯುವಿಗೆ ತೀವ್ರ ಪೈಪೋಟಿಯನ್ನು ನೀಡುತ್ತಿದೆ. ಮಾರುತಿ ಸುಜುಕಿಯು ಜಿಮ್ನಿ 5-ಡೋರಿನ ಲೈಫ್‌ಸ್ಟೈಲ್ ಎಸ್‌ಯುವಿಗಾಗಿ ಜನವರಿಯಲ್ಲಿ ಪ್ರಿ-ಬುಕಿಂಗ್ ಅನ್ನು ಪ್ರಾರಂಭಿಸಿತು. ಈ ಜಿಮ್ನಿ ಎಸ್‍ಯುವಿಯನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತು. ಇದೀಗ ಜಿಮ್ನಿ ಎಸ್‍ಯುವಿಗಾಗಿ 31,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸ್ವೀಕರಿಸಿದೆ.
ಜಿಮ್ನಿ ಎಸ್‍ಯುವಿಗೆ ಅಷ್ಟು ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿರುವುದರಿಂದ ಇದರ ಕಾಯುವ ಅವಧಿಯು 8 ತಿಂಗಳವರೆಗೆ ವಿಸ್ತರಿಸಿದೆ. ಈ ಜಿಮ್ನಿ ಎಸ್‍ಯುವಿಯ ಮೂಲ ರೂಪಾಂತರದ ಬೆಲೆ ರೂ 12.74 ಲಕ್ಷವಾಗಿದೆ. ರೆಟ್ರೊ-ಶೈಲಿಯ ಆಫ್-ರೋಡರ್‌ಗೆ ಬೇಡಿಕೆಯು ಸ್ಥಿರವಾಗಿ ಏರುತ್ತಿದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ.

ಮಾರುತಿ ಸುಜುಕಿ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಅವರ ಪ್ರಕಾರ, ಬೆಲೆಗಳನ್ನು ಘೋಷಿಸುವ ಮೊದಲು ಜಿಮ್ನಿ ದಿನಕ್ಕೆ ಸುಮಾರು 92 ಬುಕಿಂಗ್‌ಗಳನ್ನು ಮಾಡುತ್ತಿತ್ತು. ಇನ್ನು ಬಿಡುಗಡೆಯಾದಾಗಿನಿಂದ ಎಸ್‍ಯುವಿಗೆ ಪ್ರತಿದಿನ ಸುಮಾರು 151 ಬುಕಿಂಗ್‌ಗಳನ್ನು ಪಡೆಯುತ್ತಿದೆ. ಈ ಹೊಸ ಆಫ್-ರೋಡರ್ ಸ್ವೀಕಾರಾರ್ಹತೆ ಹೆಚ್ಚಾಗಿದೆ.
ರೂ.12.74 ಲಕ್ಷದ ಆರಂಭಿಕ ಬೆಲೆಯಲ್ಲಿಯೂ ಸಹ, ಜಿಮ್ನಿಯು ಮಹೀಂದ್ರ ಥಾರ್ 4X4 ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಇದು ರೂ.13.87 ಲಕ್ಷದಿಂದ ಪ್ರಾರಂಭವಾಗುತ್ತದೆ ಎಂದು ಶ್ರೀವಾಸ್ತವ ಹೇಳಿದರು.ಜಿಮ್ನಿ ಎಲ್ಲಾ ರೂಪಾಂತರಗಳಲ್ಲಿ 4WD ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ ಮತ್ತು ಇದು ಪ್ರಸ್ತುತ ಥಾರ್‌ನಲ್ಲಿರುವ ಮೂರು ಡೋರುಗಳಿಗೆ ಬದಲಿಗೆ ಐದು-ಡೋರುಗಳಿಗೆ ಹೊಂದಿದೆ.

ಹೆಚ್ಚುವರಿಯಾಗಿ, ಜಿಮ್ನಿ ಆರು ಏರ್‌ಬ್ಯಾಗ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಇನ್ನೂ ಥಾರ್‌ನ ಎಲ್ಲಾ ರೂಪಾಂತರಗಳು ಎರಡು ಏರ್‌ಬ್ಯಾಗ್‌ಗಳನ್ನು ಮಾತ್ರ ಪಡೆಯುತ್ತವೆ. ಇನ್ನು 14.89 ಲಕ್ಷ ರೂಪಾಯಿಗಳಲ್ಲಿ, ಜಿಮ್ನಿ ಪೆಟ್ರೋಲ್ ಆಟೋಮ್ಯಾಟಿಕ್ 4WD ಥಾರ್ LX 4WD ಆಟೋಮ್ಯಾಟಿಕ್‌ಗಿಂತ ಸುಮಾರು 1.3 ಲಕ್ಷ ಅಗ್ಗವಾಗಿದೆ. ಇದರ ಬೆಲೆ 16.10 ಲಕ್ಷ ರೂಪಾಯಿಗಳು. ಹೆಚ್ಚಿನ ಖರೀದಿದಾರರು ಜಿಮ್ನಿಯನ್ನು ಪ್ರಾಥಮಿಕವಾಗಿ ಎರಡನೇ ಅಥವಾ ಮೂರನೇ ವಾಹನವಾಗಿ ನೋಡುತ್ತಿದ್ದಾರೆ.
ಇನ್ನು ಹೆಚ್ಚಿನವರು ಎಸ್‌ಯುವಿಯನ್ನು ತಮ್ಮ ಪ್ರಾಥಮಿಕ ವಾಹನವಾಗಿ ಖರೀದಿಸುತ್ತಿಲ್ಲ ಎಂದು ಶ್ರೀವಾಸ್ತವ ಹೇಳಿದರು. ಈ ಹೊಸ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯಲ್ಲಿ K15B 1.5-ಲೀಟರ್ ನ್ಯಾಚುರಲ್-ಆಸ್ಪರ್ಡ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000rpm ನಲ್ಲಿ 103.4bhp ಮತ್ತು 4,000rpm ನಲ್ಲಿ 134.2Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಳೆಯ ಜಿಪ್ಸಿಯಂತೆಯೇ, ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಬಳಸುತ್ತದೆ.


Click it and Unblock the Notifications