ರೋಡ್ ಟೆಸ್ಟ್ ನಡೆಸಿದ 500 ಕಿ.ಮೀ ರೇಂಜ್‌ನ ಮಾರುತಿ ಎಲೆಕ್ಟ್ರಿಕ್ ಕಾರು: ಟಾಟಾಗೆ ನಡುಕ ಶುರು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಹೆಚ್ಚಾಗುತ್ತಿದೆ. ಪ್ರಪಂಚದ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳ ರೀತಿಯಲ್ಲೇ ಭಾರತದಲ್ಲೂ ಐಷಾರಾಮಿ ಕಾರು ಬ್ರಾಂಡ್‌ಗಳು ತಮ್ಮ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಂಪನಿಯು 2025ರ ವೇಳೆಗೆ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಪ್ರಾರಂಭಿಸಲು ಯೋಜಿಸುತ್ತಿದೆ.

ಮಾರುತಿ ಸುಜುಕಿಯಿಂದ ಮುಂಬರುವ ಈ ಎಲೆಕ್ಟ್ರಿಕ್ ವಾಹನವು ಎಸ್‍ಯುವಿ ಮಾದರಿಯಾಗಿರುತ್ತದೆ. ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯನ್ನು eVX ಎಂದು ಕರೆಯಲಾಗುತ್ತದೆ. ಸುಜುಕಿ eVX (Suzuki eVX) ಕಾನ್ಸೆಪ್ಟ್ ಮಾದರಿಯನ್ನು ಸುಜುಕಿ ಕಂಪನಿಯು 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಈ ಹೊಸ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಈ ವರ್ಷದ ಆರಂಭದಲ್ಲಿ ಪೋಲೆಂಡ್‌ನಲ್ಲಿ ರೋಡ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ.

Maruti Suzuki EVX

ಇದೀಗ ಭಾರತದಲ್ಲಿ ಮಾರುತಿ ಸುಜುಕಿ EVX (Maruti Suzuki EVX) ಎಲೆಕ್ಟ್ರಿಕ್ ಎಸ್‍ಯುವಿಯು ರೋಡ್ ಟೆಸ್ಟ್ ನಡೆಸುವುದು ಕಾಣಿಸಿಕೊಂಡಿದೆ. ಇದರ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಎಲೆಕ್ಟ್ರಿಕ್ ಎಸ್‌ಯುವಿಯನ್ನು ಗುರ್‌ಗಾಂವ್‌ನಲ್ಲಿ ಕಂಪನಿಯ ಸ್ಥಾವರದ ಬಳಿ ಪರೀಕ್ಷೆ ನಡೆಸಲಾಯಿತು. ಸುಜುಕಿ eVX ಕಾನ್ಸೆಪ್ಟ್ ಮಾದರಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಮಾದರಿಯು ಹೊಸದಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಲ್ಯಾಂಪ್ ಗಳೊಂದಿಗೆ ಬರುತ್ತದ. ಇದು ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ.

ಕೆಳಗಿನ ಬಂಪರ್ ಅನ್ನು ಸಹ ನವೀಕರಿಸಲಾಗಿದೆ. ಆದರೆ ಇದು ಕಾನ್ಸೆಪೃ ಮಾದರಿಯಂತಹ ಫಾಗ್ ಲ್ಯಾಂಪ್ ಗಳು ಮತ್ತು ಕೆಳಗಿನ ಭಾಗದಲ್ಲಿ ಸಿಲ್ವಾರ್ ಟ್ರಿಟ್ ಮೆಂಟ್ ಅನ್ನು ಹೊಂದಿದೆ. ಈ ಮಾದರಿಯ ಪ್ರೊಡಕ್ಷನ್-ಸ್ಪೆಕ್ ಔಟ್ ರಿಯರ್ ವ್ಯೂ ಮಿರರ್‌ಗಳನ್ನು ಸ್ಲಿಮ್ ಎಲ್ಇಡಿ ಲೈಟ್ ಗಳೊಂದಿಗೆ ಪಡೆಯುತ್ತದೆ. ಮುಂಭಾಗದಲ್ಲಿ ಸುಜುಕಿ ಲೋಗೋ ಮೊದಲಿಗಿಂತ ಸ್ವಲ್ಪ ಎತ್ತರದಲ್ಲಿದೆ. ಹಿಂದಿನ ಪ್ರೊಫೈಲ್ ಕಾನ್ಸೆಪ್ಟ್ ಮಾದರಿಗೆ ಹೋಲುತ್ತದೆ. ಇದು ಈಗ ಉತ್ಪಾದನೆಗೆ ಸಿದ್ಧವಾದ ಟೈಲ್-ಲೈಟ್‌ಗಳನ್ನು ಹೊಂದಿದೆ.

Maruti Suzuki EVX

ಸುಜುಕಿ ಲೋಗೋವನ್ನು ಅಳವಡಿಸುವ ಡಾರ್ಕ್ ಕ್ರೋಮ್ ಬಾರ್ ಅನ್ನು ಹೊಂದಿದೆ. ಇದು ರೂಫ್-ಇಂಟಿಗ್ರೇಟೆಡ್ ಸ್ಪಾಯ್ಲರ್ ಮತ್ತು ಡ್ಯುಯಲ್-ಟೋನ್ ಲೋವರ್ ಬಂಪರ್ ಅನ್ನು ಉಳಿಸಿಕೊಂಡಿದೆ. ಹೊರಭಾಗಕ್ಕಿಂತ ಭಿನ್ನವಾಗಿ, ಮಾರುತಿ ಸುಜುಕಿ EVX ಮಾದರಿಯ ಒಳಭಾಗವು ಫ್ಯೂಚರಿಸ್ಟಿಕ್ ಆಗಿ ಕಾಣುತ್ತದೆ. ಒಳಭಾಗದಲ್ಲಿ, ಸುಜುಕಿ eVX ಹೊಸ ಬಿಎಂಡಬ್ಲ್ಯು ಕಾರುಗಳಂತೆಯೇ ವಿಶಾಲವಾದ ಡ್ಯುಯಲ್-ಸ್ಕ್ರೀನ್ ಸೆಟಪ್ ಮತ್ತು ಫ್ಲೋಟಿಂಗ್ ಸೆಂಟರ್ ಕನ್ಸೋಲ್ ಅನ್ನು ಹೊಂದಿದೆ.

ಇದರೊಂದಿಗೆ ಟಚ್-ಸೆನ್ಸಿಟಿವ್ ಬಟನ್‌ಗಳು, ಎರಡು-ಸ್ಪೋಕ್ ಸ್ಟೀರಿಂಗ್ ವೀಲ್, ಸ್ಪೋರ್ಟಿ ಸೀಟ್‌ಗಳು, ದೊಡ್ಡ ಪನೋರಮಿಕ್ ಸನ್‌ರೂಫ್ ಮತ್ತು ರೋಟರಿ ಡ್ರೈವ್ ಅನ್ನು ಒಳಗೊಂಡಿದೆ. ಈ ಸುಜುಕಿ ಇವಿಎಕ್ಸ್ ಮಾದರಿಯು ಟೊಯೊಟಾಡ 27ಪಿಎಲ್ ಮೀಸಲಾದ ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್ ಅನ್ನು ಬಳಸಿಕೊಳ್ಳುತ್ತದೆ. ಈ ಮಾದರಿಯು ಸಿಂಗಲ್-ಮೋಟರ್ ಮತ್ತು ಡ್ಯುಯಲ್-ಮೋಟಾರ್ (ಆಲ್-ವೀಲ್ ಡ್ರೈವ್) ಸೆಟಪ್‌ಗಳಲ್ಲಿ ಬರುವ ನಿರೀಕ್ಷೆಯಿದೆ.

Maruti Suzuki EVX

ಬ್ಯಾಟರಿಯ ಪ್ರಕಾರ, ಸುಜುಕಿ eVX ಎಲೆಕ್ಟ್ರಿಕ್ ಎಸ್‍ಯುವಿ 60kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ದೊಡ್ಡ ಬ್ಯಾಟರಿ ಪ್ಯಾಕ್‌ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿ ಪ್ಯಾಕ್‌ನಲ್ಲಿ ಸುಮಾರು 500 ಕಿಲೋಮೀಟರ್ ರೇಂಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಮುಂಬರುವ ಎಲೆಕ್ಟ್ರಿಕ್ ಎಸ್‌ಯುವಿಗಳಾದ ಟಾಟಾ ಕರ್ವ್ವ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ ಇ.8 ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಈ ಮಾರುತಿ ಎಲೆಕ್ಟ್ರಿಕ್ಕ್ ಕಾರಿನ ಮುಂಭಾಗ ಮತ್ತು ಹಿಂಭಾಗದ ಸೀಟುಗಳು ಹೊಂದಾಣಿಕೆಯ ಹೆಡ್‌ರೆಸ್ಟ್‌ಗಳೊಂದಿಗೆ ಬರುತ್ತವೆ. ಉತ್ಪಾದನೆಗೆ ಸಿದ್ಧವಾಗಿರುವ ಮಾದರಿಯು ವಿವಿಧ ಸೀಟುಗಳೊಂದಿಗೆ ಬರಲಿದೆ. ಹೊಸ EVX ಕಾನ್ಸೆಪ್ಟ್ ಮಾದರಿಯು ಎಲೆಕ್ಟ್ರಾನಿಕ್-ಕಂಟ್ರೋಲ್ 4×4 ತಂತ್ರಜ್ಞಾನಗಳೊಂದಿಗೆ ಬರಲಿದೆ ಎಂದು ಸುಜುಕಿ ದೃಢಪಡಿಸಿದೆ. ಅನುಪಾತದಲ್ಲಿ, ಹೊಸ ಸುಜುಕಿ EVX ಉದ್ದ 4300mm, ಅಗಲ 1800mm ಮತ್ತು ಎತ್ತರ 1600mm ಆಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

Article Published On: Saturday, November 11, 2023, 17:24 [IST]
English summary
New maruti suzuki evx electric suv spied testing details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+