ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ಮಾರುತಿ ಸುಜುಕಿ: ಇವಿ ಕಾರು ವಿಭಾಗದ ಕಿಂಗ್ ಟಾಟಾಗೆ ಆತಂಕ ಶುರು
ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಹೆಚ್ಚಾಗುತ್ತಿದೆ. ಪ್ರಪಂಚದ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳ ರೀತಿಯಲ್ಲೇ ಭಾರತದಲ್ಲೂ ಐಷಾರಾಮಿ ಕಾರು ಬ್ರಾಂಡ್‌ಗಳು ತಮ್ಮ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಸದ್ಯ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಕಂಪನಿ ಪಾರುಪತ್ಯ ಸಾಧಿಸುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ನೆಕ್ಸಾನ್, ಟಿಗೋರ್ ಇವಿ ಮತ್ತು ಟಿಯಾಗೋ ಇವಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲಿ ಟಾಟಾ ನೆಕ್ಸಾನ್ ಮಾದರಿಯು ಅತಿ ಹೆಚ್ಚು ಮಾರಾಟವಾಗುತ್ತಿದೆ. ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಇದರಿಂದ ದೇಶದ ನಂ.1 ಕಾರು ತಯಾರಕರು ಕೂಡ ಮಾರುತಿ ಸುಜುಕಿ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಭಾರತದಲ್ಲಿ ಮೂರು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದ ನಂತರ, ಟಾಟಾ ಮೋಟಾರ್ಸ್ ಮತ್ತೊಂದು ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂದು ನಿರೀಕ್ಷಿಸುತ್ತೇವೆ. ಇನ್ನು ಮತ್ತೊಂದೆಡೆ, ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಲಾದ ಮಾರುತಿ ಸುಜುಕಿ ಇವಿಎಕ್ಸ್ ಕಾನ್ಸೆಪ್ಟ್ ಹೆಚ್ಚಿನ ಗಮನವನ್ನು ಸೆಳೆಯಿತು. ಇದು ಭಾರತದಲ್ಲಿ ವಾಹನ ತಯಾರಕರ ಮೊದಲ ಎಲೆಕ್ಟ್ರಿಕ್ ಕಾರನ್ನು ಪೂರ್ವವೀಕ್ಷಣೆಯಾಗಿದೆ.
ಹೊಸ ವರದಿಯ ಪ್ರಕಾರ, ಭಾರತದ ಅತಿದೊಡ್ಡ ಕಾರು ತಯಾರಕರಿಂದ ಮೊದಲ ಎಲೆಕ್ಟ್ರಿಕ್ ವಾಹನವು ಅಕ್ಟೋಬರ್ 2024 ರಲ್ಲಿ ಪಾದಾರ್ಪಣೆ ಮಾಡಲಿದೆ. ಈ ಕಾರ್ಯಕ್ರಮದಲ್ಲಿ ಮಾರುತಿ ಸುಜುಕಿಯು ಉತ್ಪಾದನಾ ಇವಿಎಕ್ಸ್‌ಗೆ ಬೆಲೆಗಳನ್ನು ಘೋಷಿಸಲಿದೆ. ಇದು ಎಲೆಕ್ಟ್ರಿಕ್ ಎಸ್‌ಯುವಿಯ ಜಾಗತಿಕ ಚೊಚ್ಚಲ ಕಾರ್ಯಕ್ರಮವಾಗಿದೆ. ಟೊಯೊಟಾದ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ಫಾರ್ಮ್‌ನ ಬಳಕೆ ಮಾಡುತ್ತದೆ.

ಇನ್ನು ಟೊಯೊಟಾ ಬ್ಯಾಡ್ಜ್ ಹೊಂದಿರುವ ಆವೃತ್ತಿಯು ಮಾರುತಿ ಸುಜುಕಿ EVX (Maruti Suzuki EVX) ನಂತರ ಸ್ವಲ್ಪಮಟ್ಟಿಗೆ ಬರುವ ನಿರೀಕ್ಷೆಯಿದೆ. ಈ EVX ಎಲೆಕ್ಟ್ರಿಕ್ ಎಸ್‍ಯುವಿಯ ಎರಡೂ ಆವೃತ್ತಿಗಳು ಗುಜರಾತ್‌ನಲ್ಲಿರುವ ಸುಜುಕಿಯ ಸೌಲಭ್ಯದಲ್ಲಿ ತಯಾರಿಸಲ್ಪಡುತ್ತವೆ. ಪ್ರಸ್ತುತ ಸುಜುಕಿ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲು ಮಾತ್ರ ಬಳಸುತ್ತಿರುವ ಗುಜರಾತ್‌ನಲ್ಲಿರುವ ಸ್ಥಾವರವನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಬಳಸಲಾಗುತ್ತದೆ.
2023 ರಲ್ಲಿ ತೋರಿಸಲಾದ ಕಾನ್ಸೆಪ್ಟ್ ಕಾರು 2,700 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಈ ಮಾರುತಿ ಇವಿ 4,300 mm ಉದ್ದ, 1,800 mm ಅಗಲ ಮತ್ತು 1,600 mm ಎತ್ತರವನ್ನು ಹೊಂದಿದೆ. ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಎಸ್‍ಯುವಿಯ ಕಾನ್ಸೆಪ್ಟ್ ಆವೃತ್ತಿಯು 60kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ.
ಈ ಕಾರು 550 ಕಿಲೋಮೀಟರ್‌ಗಳ ರೇಂಜ್ ಅನ್ನು ನೀಡುತ್ತದೆ. ಚಿಕ್ಕದಾದ 48kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ ಎಂದು ವರದಿ ಹೇಳುತ್ತದೆ. ಇನ್ನು ಬ್ಲೇಡ್ ಸೆಲ್ ತಂತ್ರಜ್ಞಾನದೊಂದಿಗೆ, ಕಾರು ತಯಾರಕರು ಅತ್ಯುತ್ತಮ ಪ್ಯಾಕೇಜಿಂಗ್, ಹೆಚ್ಚಿನ ರೇಂಜ್ ಮತ್ತು ಸ್ಪರ್ಧಾತ್ಮಕ ಬೆಲೆಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದನ್ನು 2WD (ಟೂ-ವೀಲ್ ಡ್ರೈವ್) ಮತ್ತು AWD (ಆಲ್-ವೀಲ್ ಡ್ರೈವ್) ಸಿಸ್ಟಂಗಳ ನೀಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಹೊಸ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್, ರಿವ್ಯೂ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications