ಸೂಪರ್ ಮೈಲೇಜ್‌ನ ಮಾರುತಿ ಫ್ರಾಂಕ್ಸ್ ಸಿಎನ್‌ಜಿ ಬಿಡುಗಡೆ
ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ಪಾರುಪತ್ಯ ಸಾಧಿಸುತ್ತಿದೆ. ಮಾರುತಿ ಸುಜುಕಿ ತನ್ನ ಪಾರುಪತ್ಯಯವನ್ನು ಮುಂದುವರೆಸಲು ಹೊಸ ಕಾರುಗಳನ್ನು ಪರಿಚಯಿಸುತ್ತಿವೆ. ಇದರೊಂದಿಗೆ ತನ್ನ ಸಿಎನ್‌ಜಿ ಕಾರು ವಿಭಾಗವನ್ನು ವಿಸ್ತರಿಸುತ್ತಿದೆ.
ಇದೀಗ ಮಾರುತಿ ಸುಜುಕಿ ತನ್ನ ಫ್ರಾಂಕ್ಸ್ ಎಸ್‍ಯುವಿಯನ್ನು S-CNG ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ S-CNG (Maruti Suzuki Fronx CNG) ಎಸ್‍ಯುವಿಯ ಬೆಲೆಯು ರೂ.8.41 ಲಕ್ಷವಾಗಿದೆ. ಈ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯು ಸಿಗ್ಮಾ ಮತ್ತು ಡೆಲ್ಟಾ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯ ಸಿಗ್ಮಾ ರೂಪಾಂತರದ ಬೆಲೆಯು ರೂ.8.41 ಲಕ್ಷವಾದರೆ, ಡೆಲ್ಟಾ ರೂಪಾಂತರದ ಬೆಲೆಯು ರೂ.9.27 ಲಕ್ಷವಾಗಿದೆ. ಮಾರುತಿ ಸುಜುಕಿ ಫ್ರಾಂಕ್ಸ್ S-CNG ಎಸ್‍ಯುವಿಯ 28.51 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಮಾರುತಿ ಸುಜುಕಿ ಫ್ರಾಂಕ್ಸ್ S-CNG ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿ ಮಾದರಿಗೆ ಪೈಪೋಟಿ ನೀಡುತ್ತದೆ.
ಮಾರುತಿ ಸುಜುಕಿ ಪ್ರಸ್ತುತ ಸಿಎನ್‌ಜಿ ವಾಹನಗಳ ಅತಿದೊಡ್ಡ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಅವರು ಭಾರತೀಯ ಮಾರುಕಟ್ಟೆಯಲ್ಲಿ 1.4 ಮಿಲಿಯನ್‌ಗಿಂತಲೂ ಹೆಚ್ಚು S-CNG ವಾಹನಗಳನ್ನು ಮಾರಾಟ ಮಾಡಿದ್ದಾರೆ. ಸದ್ಯಕ್ಕೆ, ಅವರು 15 ಸಿಎನ್‌ಜಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಡೀಸೆಲ್ ಎಂಜಿನ್‌ಗಳನ್ನು ಕೈಬಿಟ್ಟು CNG ಪವರ್‌ಟ್ರೇನ್ ಅನ್ನು ವಿಸ್ತರಿಸಲು ನಿರ್ಧರಿಸಿದರು.
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯಲ್ಲಿ 1.2-ಲೀಟರ್, ನಾಲ್ಕು ಸಿಲಿಂಡರ್, ನ್ಯಾಚುರಲ್ ಆಸ್ಪರ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 rpm ನಲ್ಲಿ 88.50 bhp ಪವರ್ ಮತ್ತು 4,400 rpm ನಲ್ಲಿ 113 Nm ಟಾರ್ಕ್ ಅನ್ನು ಉತ್ಪಾದಿಸಿದರೆ, ಹೊಸ CNG ಆವೃತ್ತಿಯಲ್ಲಿ 6,000 rpm ನಲ್ಲಿ 76 bhp ಪವರ್ ಮತ್ತು 4,300 rpm ನಲ್ಲಿ 98.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಮಾತ್ರ ಜೋಡಿಸಲಾಗಿದೆ. ಪೆಟ್ರೋಲ್-ಮಾತ್ರ ಫ್ರಾಂಕ್ಸ್ ಮಾದರಿಯಲ್ಲಿ 1.2-ಲೀಟರ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ ಹೊರತಾಗಿ 5-ಸ್ಪೀಡ್ AMT ಅನ್ನು ಸಹ ಪಡೆಯುತ್ತದೆ. ಇನ್ನು ಮಾರುತಿ ಸುಜುಕಿ ಫ್ರಾಂಕ್ಸ್ ಸಿಎನ್‌ಜಿ ಹೊಸ ಎಸ್‍ಯುವಿಯು ಭಾರತದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದೆ.
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಅವರು ಮಾತನಾಡಿ, ಮಾರುತಿ ಸುಜುಕಿ ಫ್ರಾಂಕ್ಸ್ ಎಸ್-ಸಿಎನ್‌ಜಿ, ತನ್ನ ಹೊಸ-ಯುಗದ ಆಕರ್ಷಣೆ ಮತ್ತು ಕ್ರಿಯಾತ್ಮಕ ರಸ್ತೆ ಉಪಸ್ಥಿತಿಯೊಂದಿಗೆ, ಹೃದಯದಲ್ಲಿ ಟ್ರಯಲ್‌ಬ್ಲೇಜರ್‌ಗಳಾಗಿರುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ.
ಈ ವರ್ಷದ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಿದಾಗಿನಿಂದ, FRONX ಅದರ ಸ್ಪೋರ್ಟಿ ವಿನ್ಯಾಸ ಭಾಷೆ, ಸುಧಾರಿತ ಪವರ್‌ಟ್ರೇನ್ ಮತ್ತು ಪ್ರೀಮಿಯಂ ತಂತ್ರಜ್ಞಾನದಿಂದಾಗಿ ಅಗಾಧ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. 2010 ರಲ್ಲಿ, ನಾವು ನಮ್ಮ ಮೊದಲ CNG-ಸಜ್ಜಿತ ಮಾದರಿಯನ್ನು ಪರಿಚಯಿಸಿದ್ದೇವೆ ಮತ್ತು ಅಂದಿನಿಂದ, ನಾವು ದೇಶದಲ್ಲಿ 1.4 ಮಿಲಿಯನ್ S-CNG ವಾಹನಗಳನ್ನು ಮಾರಾಟ ಮಾಡಿದ್ದೇವೆ, ನಮ್ಮ ಗ್ರಾಹಕರ ನಂಬಿಕೆ ಮತ್ತು ನಮ್ಮ ತಂತ್ರಜ್ಞಾನದ ಮೇಲಿನ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.


Click it and Unblock the Notifications