ಮಾರುತಿ ಜಿಮ್ನಿ ಬಿಡುಗಡೆ ದಿನಾಂಕ ಬಹಿರಂಗ: ಮಹೀಂದ್ರಾ ಥಾರ್‌ಗೆ ಶುರುವಾಗಿದೆ ನಡುಕ
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಇದೀಗ ಜನಪ್ರಿಯ ಜಿಮ್ನಿ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲೂ ಕೂಡ ಬಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಬಹುನಿರೀಕ್ಷಿತ 2023ರ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.
ಹೊಸ ಜಿಮ್ನಿಯನ್ನು ಅನಾವರಣಗೊಳಿಸಿದ ನಂತರ, ಮಾರುತಿ ಸುಜುಕಿ ತನ್ನ ಎಲ್ಲಾ ಅಧಿಕೃತ ಡೀಲರ್ ಔಟ್‌ಲೆಟ್‌ಗಳಲ್ಲಿ ಮತ್ತು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲೈಫ್‌ಸ್ಟೈಲ್ ಆಫ್-ರೋಡರ್‌ಗಾಗಿ ಬುಕಿಂಗ್‌ಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಈ ಎಸ್‍ಯುವಿಗಾಗಿ 30,000 ಬುಕಿಂಗ್‌ಗಳನ್ನು ಸ್ವೀಕರಿಸಿದೆ. ಇನ್ನು ಗ್ರಾಹಕರು ಆರರಿಂದ ಎಂಟು ತಿಂಗಳವರೆಗೆ ಕಾಯುವ ಅವಧಿಯನ್ನು ನಿರೀಕ್ಷಿಸಬಹುದು. ಈ ಹೊಸ ಮಾರುತಿ ಜಿಮ್ನಿ ಎಸ್‍ಯುವಿಯು ಜೂನ್ 7 ರಂದು ಬಿಡುಗಡೆಯಾಗಲಿದೆ.

ಮಾರುತಿ ಸುಜುಕಿಯು ಹೊಸ 5-ಡೋರ್ ಜಿಮ್ನಿಯ ಆಗಮನವನ್ನು 2023ರ ಜನವರಿ ತಿಂಗಳಿನಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸುವ ಮೂಲಕ ಘೋಷಿಸಿತು. ಈ ಹೊಸ ಜಿಮ್ನಿಯು ವಿದೇಶದಲ್ಲಿ ಮಾರಾಟವಾಗುವ ಮೂರು-ಡೋರಿನ ಜಿಮ್ನಿಯ ಕ್ಲಾಸಿಕ್ ನಿಯೋ-ರೆಟ್ರೊ ವಿನ್ಯಾಸವನ್ನು ಉಳಿಸಿಕೊಂಡಿದೆ, ಉದ್ದವಾದ ವೀಲ್‌ಬೇಸ್ ಮತ್ತು ಎರಡನೇ ಸಾಲಿಗೆ ಎರಡು ಹೆಚ್ಚುವರಿ ಡೋರುಗಳನ್ನು ಹೊಂದಿದೆ.
ಬಿಡುಗಡೆಯಾಗಲಿರುವ ಹೊಸ ಮಾರುತಿ ಜಿಮ್ನಿ 5-ಡೋರಿನ ಎಸ್‍ಯುವಿ 1.5 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಬಹುದು. ಗ್ಯಾಸೋಲಿನ್ ಮೋಟಾರ್ 6,000 rpm ನಲ್ಲಿ 102 ಬಿಹೆಚ್‍ಪಿ ಪವರ್ ಮತ್ತು 4,400rpm ನಲ್ಲಿ 138 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಮಾರುತಿ ಜಿಮ್ನಿ ಎಸ್‍ಯುವಿಯಲ್ಲಿ ಸುಜುಕಿಯ ಆಲ್‌ಗ್ರಿಪ್ ಫೋರ್-ವೀಲ್-ಡ್ರೈವ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಹೊಸ ಸುಜುಕಿ ಜಿಮ್ನಿ ಎಸ್‍ಯುವಿಯು ಝೀಟಾ ಮತ್ತು ಆಲ್ಫಾ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇನ್ನು ಬಿಡುಗಡೆಗೆ ಸಜ್ಜಾಗುತ್ತಿರುವ ಹೊಸ ಮಾರುತಿ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಇದು 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ.
ಈ ಆಫ್-ರೋಡ್ ಎಸ್‍ಯುವಿಯಲ್ಲಿ ಸುರಕ್ಷತೆಯ ಮುಂಭಾಗದಲ್ಲಿ, ಇದು 6 ಏರ್‌ಬ್ಯಾಗ್‌ಗಳು, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡೆಲಿವಿರಿ (EBD) ನೀಡುತ್ತದೆ. ಇದು 9-ಇಂಚಿನ ಟಚ್‌ಸ್ಕ್ರೀನ್ ಸ್ಮಾರ್ಟ್‌ಪ್ಲೇ ಪ್ರೊ + ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅರ್ಕಾಮಿಸ್ ಮ್ಯೂಸಿಕ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಸ್ಟಾರ್ಟ್ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ
ಈ ಹೊಸ ಜಿಮ್ನಿಯು ವಿದೇಶದಲ್ಲಿ ಮಾರಾಟವಾಗುವ ಮೂರು-ಡೋರಿನ ಜಿಮ್ನಿಯ ಕ್ಲಾಸಿಕ್ ನಿಯೋ-ರೆಟ್ರೊ ವಿನ್ಯಾಸವನ್ನು ಉಳಿಸಿಕೊಂಡಿದೆ, ಉದ್ದವಾದ ವೀಲ್‌ಬೇಸ್ ಮತ್ತು ಎರಡನೇ ಸಾಲಿಗೆ ಎರಡು ಹೆಚ್ಚುವರಿ ಡೋರುಗಳನ್ನು ಹೊಂದಿದೆ. ಈ ಹೊಸ ಸುಜುಕಿ ಜಿಮ್ನಿ ಎಸ್‍ಯುವಿಯು ಝೀಟಾ ಮತ್ತು ಆಲ್ಫಾ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇನ್ನು ಬಿಡುಗಡೆಗೆ ಸಜ್ಜಾಗುತ್ತಿರುವ ಹೊಸ ಮಾರುತಿ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ.
ಇದು 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇನ್ನು ಸುಜುಕಿ ಜಿಮ್ನಿ ಎಸ್‍ಯುವಿಯನ್ನು ಮೊದಲ ಬಾರಿಗೆ 1970 ರಲ್ಲಿ ಬಿಡುಗಡೆಗೊಳಿಸಿತು. ಅಂದಿನಿಂದ ಇದು ಪ್ರಪಂಚದಾದ್ಯಂತ ದಾಖಲೆ ಪ್ರಮಾಣದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಹೊಸ ದಾಖಲೆ ಮಾಡಲು ಸಜ್ಜಾಗಿದೆ. ಈ ಹೊಸ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯು ಬಿಡುಗಡೆಯಾದ ಬಳಿಕ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾಗೆ ಭಾರೀ ಪೈಪೋಟಿ ನೀಡಲಿದೆ.


Click it and Unblock the Notifications