ಹೊಸ ಮಾರುತಿ ಸ್ವಿಫ್ಟ್ ಕಾರಿನ ಕಡಿಮೆ ಬೆಲೆಯ ರೂಪಾಂತರದ ಮಾಹಿತಿ ಬಹಿರಂಗ
ಜಪಾನಿನ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ನ್ಯೂ ಜನರೇಷನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ತಾಯಿನಾಡು ಜಪಾನ್ ನಲ್ಲಿ ಪರಿಚಯಿಸಿದೆ. ಹೊಸ ಸುಜುಕಿ ಸ್ವಿಫ್ಟ್ (Suzuki Swift) ಕಾರುಪರಿಷ್ಕೃತ ಸ್ಟೈಲಿಂಗ್ ಮತ್ತು ಹೊಸ ಇಂಜಿನ್ ಆಯ್ಕೆಗಳೊಂದಿಗೆ ನವೀಕರಿಸಿದ ಇಂಟಿಯರ್ ಗಳೊಂದಿಗೆ ಬರುತ್ತಿದೆ. 2024ರ ಮಾರುತಿ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ.
ಇದೀಗ ನ್ಯೂ ಜನರೇಷನ್ ಸ್ವಿಫ್ಟ್ ಕಾರಿನ ಲೋ-ಸ್ಪೆಕ್ ಬಗ್ಗೆ ಮಾಹಿತಿಗಳು ಬಹಿರಂಗವಾಗಿವೆ. ಸ್ವಿಫ್ಟ್ ಕಾರಿನ ಲೋ-ಸ್ಪೆಕ್ ಆದ VXi (XG) ರೂಪಾಂತರವು ಗ್ರಿಲ್‌ನಲ್ಲಿನ ಕ್ರೋಮ್ ಪ್ಲಾಸ್ಟಿಕ್ ಇನ್ಸರ್ಟ್ ಗಳು ಮತ್ತು ಬಂಪರ್‌ಗಳೆರಡನ್ನೂ ಕಳೆದುಕೊಳ್ಳುತ್ತದೆ. ಯಾವುದೇ ಹಿಂಭಾಗದ ಸ್ಪಾಯ್ಲರ್ ಅಥವಾ ಡೋರ್ ಪ್ರೊಟೆಕ್ಟರ್‌ಗಳಿಲ್ಲ ಮತ್ತು ಪ್ಯಾಕೇಜ್‌ನ ಭಾಗವಾಗಿ ಕವರ್‌ಗಳೊಂದಿಗೆ 15-ಇಂಚಿನ ಸ್ಟೀಲ್ ವ್ಹೀಲ್ ಗಳನ್ನು ಪಡೆಯುತ್ತದೆ.

ಇನ್ನು ಆಶ್ಚರ್ಯಕರವಾಗಿ, ನೀವು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್‌ಗಳನ್ನು ಎಲ್ಲಾ ಮಾದರಿಗಳು ಪಡೆಯುತ್ತದೆ. ಆದರೆ ಈ ಲೋ ಸ್ಪೆಕ್ ರೂಪಾಂತರದಲ್ಲಿ ಯಾವುದೇ ಫಾಗ್ ಲ್ಯಾಂಪ್‌ಗಳಿಲ್ಲ. ಇನ್ನು ನ್ಯೂ ಜನರೇಷನ್ ಸ್ವಿಫ್ಟ್ ಕಾರಿನ ಸ್ಟೀರಿಂಗ್ ವ್ಹೀಲ್ ಕ್ರೋಮ್ ಇನ್ಸರ್ಟ್ ಗಳಲ್ಲಿದೆ ಬರುತ್ತದೆ ಮತ್ತು ಹಟಾ-ಸ್ಪೆಕ್ ಮಾದರಿಗಳಿಗೆ ಬ್ಲ್ಯ್ಕ್ ಮತ್ತು ಸಿಲ್ವರ್ ಅಪ್ಹೋಲ್ಸ್ಟರಿಯು ಫುಲ್-ಬ್ಲ್ಯಾಕ್ ಬಣ್ಣದ್ದಾಗಿದೆ.
ಈ ಕಾರಿನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 9.0-ಇಂಚಿನ ಡಿಸ್ಪ್ಲೇ ಮತ್ತು ಆರು ಸ್ಪೀಕರ್‌ಗಳೊಂದಿಗೆ ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ಸ್ ಐಚ್ಛಿಕ ಹೆಚ್ಚುವರಿ ಮತ್ತು ಆಡ್-ಆನ್‌ನಂತೆ ರೂ 70000 (121000 ಯೆನ್) ಬೆಲೆಯಾಗಿರುತ್ತದೆ. ಇನ್ನು ಯಾವುದೇ 360-ಡಿಗ್ರಿ ಕ್ಯಾಮರಾ ಅಥವಾ ಲೆವೆಲ್-2 ADAS ಅನ್ನು ಆಡ್-ಆನ್‌ನಂತೆ ಸಹ ಒಪ್ಪಂದದಲ್ಲಿ ಸೇರಿಸಲಾಗಿಲ್ಲ.

ಎಲ್ಲಾ ಆವೃತ್ತಿಗಳು ಆರು ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸಂವೇದಕಗಳು ಮತ್ತು EBD ಜೊತೆಗೆ ABS ಅನ್ನು ಪಡೆಯುತ್ತವೆ. ಈ ಹೊಸ ಸ್ವಿಫ್ಟ್ ಕಾರು 1.2-ಲೀಟರ್ ಪೆಟ್ರೋಲ್ 3-ಸಿಲಿಂಡರ್ ಎಂಜಿನ್ ಮತ್ತು 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಂಜಿನ್‌ಗಳು 80 bhp ಪವರ್ ಮತ್ತು 108Nm ಟಾರ್ಕ್ ಅನ್ನು ಉತ್ಪಾದಿಸುತ್ತವೆ.
ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಆಯ್ಕೆ ಮಾಡಬಹುದು. ಇನ್ನು ಜಪಾನ್-ಸ್ಪೆಕ್ ಸ್ವಿಫ್ಟ್ ಆಫ್-ರೋಡ್ ಉತ್ಸಾಹಿಗಳಿಗೆ 4WD ರೂಪಾಂತರವನ್ನು ಸಹ ನೀಡುತ್ತದೆ. ಜಪಾನ್‌ನಲ್ಲಿ ನ್ಯೂ ಜನರೇಷನ್ ಸ್ವಿಫ್ಟ್ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಮಾರುತಿ ಸ್ವಿಫ್ಟ್ ಕಾರು XG, ಹೈಬ್ರಿಡ್ MX ಮತ್ತು ಹೈಬ್ರಿಡ್ MZ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

ಇನ್ನು ಈ ಕಾರಿನಲ್ಲಿ ಫ್ರಂಟ್ ಡೋರ್ ಪಾಕೆಟ್ ಮತ್ತು ಹಿಂದಿನ ಡೋರ್ ಪ್ಲಾಸ್ಟಿಕ್ ಬಾಟಲ್ ಹೋಲ್ಡರ್ ಸೇರಿದಂತೆ ಹಲವಾರು ಸ್ಟೋರೇಜ್ ಸ್ಪೇಸ್ ಅನ್ನ್ನು ಹೊಂದಿದೆ. ಈ ಹ್ಯಾಚ್‌ಬ್ಯಾಕ್ 265-ಲೀಟರ್‌ಗಳಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ. ಹೊಸ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ 3860mm ಉದ್ದ, 1695mm ಅಗಲ ಮತ್ತು 1,500mm ಎತ್ತರ ಮತ್ತು 2,450mm ವ್ಹೀಲ್‌ಬೇಸ್ ಹೊಂದಿದೆ.
ಪ್ರಸ್ತುತ ಮಾದರಿಗೆ ಹೋಲಿಸಿದರೆ, ಹೊಸ ಸ್ವಿಫ್ಟ್ 15 ಎಂಎಂ ಉದ್ದವಾಗಿದೆ, ಅಗಲ ಮತ್ತು ಎತ್ತರ ಕ್ರಮವಾಗಿ 40 ಎಂಎಂ ಮತ್ತು 30 ಎಂಎಂ ಕಡಿಮೆಯಾಗಿದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವೀಫ್ ಕಳೆದ ಹಲವು ವರ್ಷದಿಂದ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ.
ಈ ಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಗೊಂಡಿತ್ತು. ಈ ಮಾರುತಿ ಸುಜುಕಿ ಸ್ವಿಫ್ಟ್ ದೀರ್ಘಕಾಲದಿಂದಲೇ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸ್ವಿಫ್ಟ್ ಕಾರು 2018ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಯಿತು.


Click it and Unblock the Notifications