ಕಡಿಮೆ ಬೆಲೆ, ಬೈಕಿನಂತೆ ಮೈಲೇಜ್‌ನೊಂದಿಗೆ ಹೆಚ್ಚಿನ ಲಾಭ ತಂದುಕೊಡುವ ಮಾರುತಿ ಟ್ಯಾಕ್ಸಿ ಕಾರು ಬಿಡುಗಡೆ

ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ತನ್ನ ಹೊಸ ಟೂರ್ H1 ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದು ಆಲ್ಟೊ K10 ಕಾರಿನ ಕಮರ್ಷಿಯಲ್ ಆವೃತ್ತಿಯಾಗಿದೆ. ಈ ಹೊಸ ಮಾರುತಿ ಟೂರ್ H1 (Maruti Tour H1) ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4,80,500 ಆಗಿದೆ.

ಮಾರುತಿ ಸುಜುಕಿ ಟೂರ್ H1 ಕಾರು ಪೆಟ್ರೋಲ್ ಮತ್ತು CNG ಆವೃತ್ತಿಗಳಲ್ಲಿ ನೀಡಲಾಗುತ್ತದೆ. ಈ ಮಾರುತಿ ಸುಜುಕಿ ಟೂರ್ H1 ಪೆಟ್ರೋಲ್ ಕಾರಿನ ಬೆಲೆಯು ರೂ.4,80,500 ಆಗಿದ್ದರೆ, ಸಿಎನ್‌ಜಿ ಕಾರಿನ ಬೆಲೆಯು ರೂ.5,70,500 ಆಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಮಾರುತಿ ಸುಜುಕಿ ಟೂರ್ H1 ಕಾರು ಎರಡೂ ಆವೃತ್ತಿಗಳು ಡ್ಯುಯಲ್ ಜೆಟ್ ಮತ್ತು ಡ್ಯುಯಲ್ ವಿವಿಟಿ ತಂತ್ರಜ್ಞಾನದೊಂದಿಗೆ ಒಂದೇ 1.0-ಲೀಟರ್ ಕೆ-ಸಿರೀಸ್ ಎಂಜಿನ್ ಹೊಂದಿದೆ.

Maruti Tour H1

ಮಾರುತಿ ಸುಜುಕಿ ಟೂರ್ H1 ಕಾರಿನ ಎರಡೂ ಆವೃತ್ತಿಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ. ಈ ಮಾರುತಿ ಸುಜುಕಿ ಟೂರ್ H1 ಕಾರಿನ ಪೆಟ್ರೋಲ್ ಆವೃತ್ತಿಯ ಎಂಜಿನ್ 65.7 bhp ಮತ್ತು 89 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪೆಟ್ರೋಲ್ ಕಾರು 24.6 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಈ ಕಾರು 27-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊದಿದೆ.

ಮಾರುತಿ ಸುಜುಕಿ ಟೂರ್ H1 ಕಾರಿನ ಸಿಎನ್‌ಜಿ ಆವೃತ್ತಿಯು 55.9 bhp ಮತ್ತು 82.1 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಕಾರಿನ ಸಿಎನ್‌ಜಿ ಆವೃತ್ತಿಯು 34.46 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಈ ಸಿಎನ್‌ಜಿ ಆವೃತ್ತಿಯು 55 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಮಾರುತಿ ಕಾರುಗಳ ಸುರಕ್ಷತೆ ಬಗ್ಗೆ ಎಲ್ಲರೂ ಟೇಕೆ ಮಾಡುತ್ತಾರೆ. ಈ ಹೊಸ ಮಾರುತಿ ಸುಜುಕಿ ಟೂರ್ H1 ಕಾರಿನಲ್ಲಿ ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ. ಈ ಕಾರಿನಲ್ಲಿ ಸುರಕ್ಷತೆಗಾಗಿ, ಡ್ಯುಯಲ್ ಏರ್‌ಬ್ಯಾಗ್‌ಗಳು, ಪ್ರಿ-ಟೆನ್ಷನರ್ ಮತ್ತು ಫೋರ್ಸ್ ಲಿಮಿಟರ್‌ನೊಂದಿಗೆ ಮುಂಭಾಗದ ಸೀಟ್ ಬೆಲ್ಟ್‌ಗಳು, ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳು, ಎಂಜಿನ್ ಇಮೊಬಿಲೈಸರ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ರೂಪದಲ್ಲಿ ಕೆಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಈ ಹೊಸ ಮಾರುತಿ ಕಾರಿನಲ್ಲಿ ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD), ವೇಗ ಸೀಮಿತಗೊಳಿಸುವ ವ್ಯವಸ್ಥೆ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸರ್ ಗಳನ್ನು ಹೊಂದಿವೆ. ಮಾರುತಿ ಸುಜುಕಿ ಕಂಪನಿಯು ಟೂರ್ H1 ಆಲ್ಟೊ K10 ಕಾರನ್ನು ಭಾರತೀಯ ವಾಣಿಜ್ಯ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಫ್ಲೀಟ್ ಆಪರೇಟರ್‌ಗಳಿಗೆ ಕೈಗೆಟುಕುವ ಎಂಟ್ರಿ ಲೆವೆಲ್ ಕಾರ್ ಆಗಿದೆ. ಅಲ್ಲದೇ ಹೆಚ್ಚಿನ ಮೈಲೇಜ್ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ.

ಮಾರುತಿ ಸುಜುಕಿ ಟೂರ್ H1 ಕಮರ್ಷಿಯಲ್ ಹ್ಯಾಚ್‌ಬ್ಯಾಕ್ ಬಿಡುಗಡೆ ಕುರಿತು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಅವರು ಮಾತನಾಡಿ, ಹೊಸ ಟೂರ್ H1 ಕಮರ್ಷಿಯಲ್ ಗಾಗಿ ಆಲ್ಟೊ K10 ನಿರ್ಮಿಸಿದ ಪರಂಪರೆ ಮತ್ತು ನಂಬಿಕೆಯನ್ನು ಹೊಂದಿದೆ.

ಮಾತನ್ನು ಮುಂದುವರೆಸಿ, ಇದು ನಂಬಲರ್ಹವಾದ ನೆಕ್ಸ್ಟ್-ಜೆನ್ K 10C ಇಂಜಿನ್, ಆಕರ್ಷಕ ಇಂಟಿರಿಯರ್ ಮತ್ತು ಹೊರಭಾಗವನ್ನು ಹೊಂದಿದ್ದು, ಜೊತೆಗೆ ಹಲವಾರು ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಉತ್ತಮ ಇಂಧನ-ದಕ್ಷತೆಯನ್ನು ನೀಡುವ ಮೂಲಕ, ಟೂರ್ H1 ಕಾರು ಜೀವನದಲ್ಲಿ ಅಪಾರ ಸಂತೋಷವನ್ನು ನೀಡಲು ಸಿದ್ಧವಾಗಿದೆ ಎಂದು ಹೇಳೀದರು.

Article Published On: Saturday, June 10, 2023, 14:37 [IST]
English summary
New maruti suzuki tour h1 launched price specs feature details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+