ಟೆಸ್ಲಾ ಕಾರಿಗೆ ಹೋಲುವ ವಿನ್ಯಾಸದೊಂದಿಗೆ ಹೈಟೆಕ್ ಆಗಿ ಬರಲಿದೆ ಹೊಸ ಓಲಾ ಎಲೆಕ್ಟ್ರಿಕ್ ಕಾರ್!
ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಅತಿದೊಡ್ಡ ವಾಹನ ಮಾರುಕಟ್ಟೆಗಳಲ್ಲಿ ಭಾರತವು ಒಂದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ವಾಹನ ತಯಾರಕ ಕಂಪನಿಗಳು ತಮ್ಮ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿವೆ.
ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಲಾ ಎಲೆಕ್ಟ್ರಿಕ್, ಮಾಸಿಕ ಆಧಾರದ ಮೇಲೆ ಸುಮಾರು 30,000 ಯುನಿಟ್ ಇ-ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್ ತನ್ನ ಮಾರುಕಟ್ಟೆಯನ್ನು ದ್ವಿಚಕ್ರ ವಾಹನ ವಿಭಾಗಕ್ಕೆ ಸೀಮಿತಗೊಳಿಸುವುದಿಲ್ಲ, ಆದರೆ 2024 ರಲ್ಲಿ ಎಲೆಕ್ಟ್ರಿಕ್ ಫೋರ್-ವೀಲರ್ ಜಾಗದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸುತ್ತದೆ. ಕಂಪನಿಯು ಮುಂದಿನ ವರ್ಷ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಇತ್ತೀಚೆಗೆ, ಹೊಸ ಓಲಾ ಎಲೆಕ್ಟ್ರಿಕ್ (Ola Electric) ಕಾರಿನ ಪೇಟೆಂಟ್ ವಿನ್ಯಾಸದ ಚಿತ್ರ ಸೋರಿಕೆಯಾಗಿದೆ. ಈ ಚಿತ್ರದಂತೆ ಉತ್ಪಾದನಾ ಮಾದರಿಯು ಇರುಬೇಕೆಂದಿಲ್ಲ. ಇನ್ನು ಅಂತಿಮ ಆವೃತ್ತಿಯು ಬದಲಾಗಬಹುದು. ಓಲಾದ . ಪೇಟೆಂಟ್ ಚಿತ್ರದ ಒಂದು ನೋಟವು ನಿಮಗೆ ಟೆಸ್ಲಾ ಮಾಡೆಲ್ S ಮತ್ತು ಮಾಡೆಲ್ 3 ಅನ್ನು ನೆನಪಿಸುತ್ತದೆ. ಈ ಚಿತ್ರದಲ್ಲಿನ ಕಾರಿನ ಮುಂಭಾಗದ ಲಿಪ್ಸ್ ಮೇಲೆ ಸಣ್ಣ ಗ್ರಿಲ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
ಈ ಹೊಸ ಓಲಾ ಎಲೆಕ್ಟ್ರಿಕ್ ಕಾರು ನಯವಾದ-ಕಾಣುವ ಹೆಡ್‌ಲ್ಯಾಂಪ್‌ಗಳ ಕೆಳಗೆ ಏರೋಡೈನಾಮಿಕ್ ದಕ್ಷತೆಗಾಗಿ ಕಾರಿನ ಸುತ್ತಲೂ ಏರ್ ಚಾನಲ್ ಮಾಡಲು ಎರಡು ವೆಂಟ್ ಗಳಿವೆ. ಕಾರಿಗೆ ಅಚ್ಚುಕಟ್ಟಾದ ನೋಟವನ್ನು ನೀಡಲು ಎರಡೂ ಬದಿಯಲ್ಲಿರುವ ಹೆಡ್‌ಲ್ಯಾಂಪ್‌ಗಳನ್ನು LED DRL ನಿಂದ ಸಂಪರ್ಕಿಸಲಾಗಿದೆ. ಓಲಾ ಎಲೆಕ್ಟ್ರಿಕ್ ಕಾರಿನ ಬದಿಯಲ್ಲಿ ಫ್ಲೋಟಿಂಗ್ ರೂಫ್ ಲೈನ್ ಮತ್ತು ಸರಾಗವಾಗಿ ಬಾಹ್ಯ ಲೈನ್ ಮತ್ತು ಬಾಡಿ ಪ್ಯಾನೆಲ್ ಗಳನ್ನು ನೋಡಬಹುದು.
ಮುಂಬರುವ ಈ ಎಲೆಕ್ಟ್ರಿಕ್ ಕಾರಿನ ವ್ಹೀಲ್ ಗಳು ಏರೋ ವಿನ್ಯಾಸವನ್ನು ಸಹ ಒಳಗೊಂಡಿವೆ. ಇನ್ನು ಇತರ ಕೆಲವು ಮನಾರ್ಹ ವಿನ್ಯಾಸದ ಅಂಶಗಳಲ್ಲಿ ORVM ಗಳಿಗಾಗಿ ಕ್ಯಾಮರಾ-ಆಧಾರಿತ ಸಿಸ್ಟಂಗಳನ್ನು ಒಳಗೊಂಡಿವೆ ಮತ್ತು ಸ್ಥಿರವಾದ ಪನರೊಮಿಕ್ ಸನ್ ರೂಫ್ ಅನ್ನು ಒಳಗೊಂಡಿರುತ್ತವೆ. ಕೂಪ್ ತರಹದ ವಿನ್ಯಾಸದೊಂದಿಗೆ, ಓಲಾ ಎಲೆಕ್ಟ್ರಿಕ್ ಕಾರ್ ಹಿಂಭಾಗದಲ್ಲಿ ಗರಿಷ್ಠ ಸಂಗ್ರಹಣೆಗಾಗಿ ನಾಚ್‌ಬ್ಯಾಕ್ ಬೂಟ್ ಲಿಡ್ ಅನ್ನು ಹೊಂದಿರಬಹುದು.
ಇನ್ನು ಮುಂಬರುವ ಎಲೆಕ್ಟ್ರಿಕ್ ಕಾರಿನ ಎಲೆಕ್ಟ್ರಿಕ್ ಪವರ್‌ಟ್ರೇನ್, ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿವರಗಳನ್ನು ಓಲಾ ಎಲೆಕ್ಟ್ರಿಕ್ ಇನ್ನೂ ಬಹಿರಂಗಪಡಿಸಿಲ್ಲ. ಇದು ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಅನ್ನು ಬಳಸುವ ನಿರೀಕ್ಷೆಯಿದೆ, ಇದು ಒಳಗೆ ಸ್ಥಳಾವಕಾಶವನ್ನು ನೀಡುತ್ತದೆ ಮತ್ತು ಅದರ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಅನ್ನು ಬೆಂಬಲಿಸುತ್ತದೆ. ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಮಧ್ಯದಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿರುವುದಿಲ್ಲ ಜೊತೆಗೆ ಬ್ಯಾಟರಿ ಪ್ಯಾಕ್ ಅನ್ನು ಕೆಳಗೆ ಅಳವಡಿಸಲಾಗಿದೆ.
ಬದಲಾಗಿ, ಇದು ಎಲ್ಲಾ ನಾಲ್ಕು ಚಕ್ರಗಳಿಂದ ಸ್ವತಂತ್ರವಾಗಿ ಚಾಲಿತಗೊಳ್ಳುತ್ತದೆ. ಈ ಕಾರಿನ ಒಳಭಾಗದಲ್ಲಿ 5 ಜನರು ಆರಾಮವಾಗಿ ಕುಳಿತುಕೊಳ್ಳುವ ನಿರೀಕ್ಷೆಯಿದೆ. ಈ ಕಾರಿನ ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಕನ್ಸೋಲ್‌ಗಾಗಿ ದೊಡ್ಡ ಡಿಸ್ ಪ್ಲೇ ಒಳಗೊಂಡಿರಬಹುದು. ಕನೆಕ್ಟಿವಿಟಿ ಆಯ್ಕೆಗಳು NFC, Android Auto, Apple Car Play ಮತ್ತು GPS-ಆಧಾರಿತ ನ್ಯಾವಿಗೇಶನ್ ಅನ್ನು ಸಹ ಒಳಗೊಂಡಿರಬಹುದು.
ಹಿಂದಿನ ಪ್ರಯಾಣಿಕರು ಮನರಂಜನೆಗಾಗಿ ಹಿಂಭಾಗದಲ್ಲಿ ಕೆಲವು ಡಿಸ್ ಪ್ಲೇ ಗಳನ್ನು ಪಡೆಯಬಹುದು. ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಇಂಟಿರಿಯರ್ ಟೆಸ್ಲಾ ಕಾರುಗಳನ್ನು ಮತ್ತೊಮ್ಮೆ ನಿಮಗೆ ನೆನಪಿಸುವ ಕನಿಷ್ಠ-ಕಾಣುವ ಒಳಾಂಗಣ ವಿನ್ಯಾಸದ ಭಾಗವಾಗಿರುತ್ತವೆ. ಓಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಓಲಾ ಎಲೆಕ್ಟ್ರಿಕ್ ಕಾರು ಸುಮಾರು 80kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ಗಿಂತ ಹೆಚ್ಚಿನ ರೇಂಜ್ ನೀಡುತ್ತದೆ.


Click it and Unblock the Notifications








