ಅಗ್ಗದ ಬೆಲೆ, 117 ಕಿ.ಮೀ ರೇಂಜ್, ಮನೆಯಲ್ಲೇ ಚಾರ್ಜ್ ಮಾಡಬಹುದಾದ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಕಮರ್ಷಿಯಲ್ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಒಮೆಗಾ ಸೀಕಿ ಮೊಬಿಲಿಟಿ ಭಾರತದಲ್ಲಿ ತನ್ನ ಹೊಸ ಸ್ಟ್ರೀಮ್ ಸಿಟಿ ಎಲೆಕ್ಟ್ರಿಕ್ ಆಟೋವನ್ನು ಬಿಡುಗಡೆ ಮಾಡಿದೆ. ಹೊಸ ಒಮೆಗಾ ಸೀಕಿ ಮೊಬಿಲಿಟಿ ಸ್ಟ್ರೀಮ್ ಸಿಟಿ ಎಲೆಕ್ಟ್ರಿಕ್ ಆಟೋ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.85 ಲಕ್ಷದಿಂದ ಪ್ರಾರಂಭವಾಗುತ್ತದೆ.

ಹೊಸ ಒಮೆಗಾ ಸೀಕಿ ಮೊಬಿಲಿಟಿ ಸ್ಟ್ರೀಮ್ ಸಿಟಿ ಎಲೆಕ್ಟ್ರಿಕ್ ಆಟೋವನ್ನು ATR ಮತ್ತು 8.5 ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ATR ರೂಪಾಂತರವು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಈ ರೂಪಾಂತರದ ಬೆಲೆಯು ಬೆಲೆ ರೂ.1.85 ಲಕ್ಷಗಳಾಗಿದ್ದು, 8.5 ರೂಪಾಂತರದಲ್ಲಿ ಸ್ಥಿರ ಬ್ಯಾಟರಿಯನ್ನು ಹೊಂದಿದ್ದು, ಇದರ ಬೆಲೆಯು ರೂ.3.01 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

Omega Seiki Mobility Stream City Electric Auto

ಒಮೆಗಾ ಸೀಕಿ ಮೊಬಿಲಿಟಿ ಸ್ಟ್ರೀಮ್ ಸಿಟಿ ಎಲೆಕ್ಟ್ರಿಕ್ ಆಟೋ ATR 6.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 80 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇನ್ನ್ನು ಸ್ಟ್ರೀಮ್ ಸಿಟಿ 8.5 ಸ್ಥಿರವಾದ 8.5kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು ಅದು 117 ಕಿ.ಮೀ ಆನ್-ರೋಡ್ ರೇಂಜ್ ಅನ್ನ್ ನೀಡುತ್ತದೆ.

ಇನ್ನು 8.5kWh ಬ್ಯಾಟರಿ ಪ್ಯಾಕ್ ಅನ್ನು ಮನೆಯಲ್ಲಿಯೇ ಚಾರ್ಜ್ ಮಾಡಬಹುದು ಮತ್ತು ಪೂರ್ಣ ಚಾರ್ಜ್ ಮಾಡಲು 4 ಗಂಟೆಗಳ ಅಗತ್ಯವಿದೆ. ಒಮೆಗಾ ಸೀಕಿ ಮೊಬಿಲಿಟಿ ಸ್ಟ್ರೀಮ್ ಸಿಟಿ ಎಲೆಕ್ಟ್ರಿಕ್ ಆಟೋ ಎರಡೂ ಆವೃತ್ತಿಗಳು 12.8 bhp ಮತ್ತು 430 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Omega Seiki Mobility Stream City Electric Auto

ಈ ಹೊಸ ಸಿಟಿ ಆಟೋ 48 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹೊಸ ಸ್ಟ್ರೀಮ್ ಸಿಟಿ ಎಲೆಕ್ಟ್ರಿಕ್ ಆಟೋ 2,800 ಎಂಎಂ ಉದ್ದ, 1,320 ಎಂಎಂ ಅಗಲ ಮತ್ತು 1,802 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಆಟೋ 1,940 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು . ಸ್ಟ್ರೀಮ್ ಸಿಟಿಯು 175mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತದೆ ಮತ್ತು 451 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ.

ಒಮೆಗಾ ಸೀಕಿ ಮೊಬಿಲಿಟಿ ಸ್ಟ್ರೀಮ್ ಸಿಟಿ ಎಲೆಕ್ಟ್ರಿಕ್ ಆಟೋ ಬಿಡುಗಡೆಯ ಕುರಿತು ಒಮೆಗಾ ಸೀಕಿ ಮೊಬಿಲಿಟಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ಉದಯ್ ನಾರಂಗ್ ಅವರು ಮಾತನಾಡಿ, ಒಎಸ್‌ಎಂಗೆ ನಿರಂತರ ನಾವೀನ್ಯತೆ ಯಾವಾಗಲೂ ಆದ್ಯತೆಯಾಗಿದೆ ಮತ್ತು ಕಂಪನಿಯು ತನ್ನ ಉತ್ಪನ್ನ ರೇಂಜ್ ಸ್ಪರ್ಧೆಯಿಂದ ಒಂದು ಹೆಜ್ಜೆ ಮುಂದಿಡಲು ಕೆಲಸ ಮಾಡುತ್ತದೆ.

Omega Seiki Mobility Stream City Electric Auto

ನಾವು ಕಾರ್ಗೋ ವಾಹನಗಳೊಂದಿಗೆ ಪ್ರಾರಂಭಿಸಿದಾಗ ಈ ಉಡಾವಣೆಯು ಸರಕು ಮತ್ತು ಪ್ರಯಾಣಿಕರ ವಿಭಾಗಗಳೆರಡನ್ನೂ ಒಳಗೊಂಡಿರುವ ಸಂಪೂರ್ಣ 3W ಪರಿಹಾರವನ್ನು ಒದಗಿಸುವ ನಮ್ಮ ಕಾರ್ಯತಂತ್ರಕ್ಕೆ ಅನುಗುಣವಾಗಿದೆ. ಈ ವರ್ಷ, ನಮ್ಮ ಚಲನಶೀಲತೆಯನ್ನು ಪ್ರಯಾಣಿಕರ ವಾಹನಗಳು ಮತ್ತು OSM ಸ್ಟ್ರೀಮ್ ಸಿಟಿಯು ಒಮೆಗಾ ಸೀಕಿ ಮೊಬಿಲಿಟಿಯ ಬಲವಾದ ಬದ್ಧತೆಯ ಪರಿಣಾಮವಾಗಿದೆ ಎಂದು ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Tuesday, June 20, 2023, 19:38 [IST]
English summary
New omega seiki mobility stream city launched range specs features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+