Renault duster: ಇಷ್ಟೊಂದು ವೈಶಿಷ್ಟ್ಯಗಳೇ... ವಾಹ್, ಹೊಸ ರೆನಾಲ್ಟ್ ಡಸ್ಟರ್‌ಗೆ ಫಿದಾ ಆಗ್ತೀರಾ!

ಪ್ರಮುಖ ಫ್ರೆಂಚ್ ಕಾರು ತಯಾರಕರಾದ ರೆನಾಲ್ಟ್ ತಮ್ಮ ಮೂರನೇ ತಲೆಮಾರಿನ ಡಸ್ಟರ್ ಎಸ್‌ಯುವಿಯನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದ್ದಾರೆ. ಕಂಪನಿಯು ಈಗಾಗಲೇ ಪೋರ್ಚುಗಲ್‌ನಲ್ಲಿ ಹೊಸ ಡಸ್ಟರ್ ಅನ್ನು ಅನಾವರಣಗೊಳಿಸಿದೆ. ಮುಂದಿನ ವರ್ಷದ ಆರಂಭದಲ್ಲಿ (2024) ಹೊಸ ಡಸ್ಟರ್ ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ.

ರೆನಾಲ್ಟ್ ಹೊಸ ಡಸ್ಟರ್ ಮಾದರಿಯನ್ನು ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಪ್ರಮುಖ ಮಾರುಕಟ್ಟೆಗಳಲ್ಲಿ ಹಂತ ಹಂತವಾಗಿ ಪರಿಚಯಿಸಲು ಯೋಜಿಸಿದೆ. ಮೂಲಗಳ ಪ್ರಕಾರ ಭಾರತದಲ್ಲಿ 2024 ರ ಕೊನೆಯಲ್ಲಿ ಅಥವಾ 2025 ರ ಆರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಉಳಿದಂತೆ ಹೊಸ ಕಾರಿನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಇಲ್ಲಿ ನೋಡೋಣ.

new-renault-duster-suv-global-debut-with-adas-and-more-features

ಹೊಸ ಡಸ್ಟರ್ ಎಸ್‌ಯುವಿಯನ್ನು CMF-B ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಹಿಂದಿನ ಆವೃತ್ತಿಗಿಂತ ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ನವೀಕರಿಸಲಾಗಿದ್ದು, 5 ಸೀಟರ್ ಮತ್ತು 7 ಸೀಟರ್ ರೂಪಾಂತರಗಳಲ್ಲಿ ಲಭ್ಯವಿರಲಿದೆ. ಸದ್ಯಕ್ಕೆ 5 ಸೀಟರ್ ಮಾದರಿಯನ್ನು ಮಾತ್ರ ಅನಾವರಣಗೊಳಿಸಲಾಗಿದೆ. 7 ಸೀಟರ್ ಮಾದರಿಯನ್ನು ಸಹ ಶೀಘ್ರದಲ್ಲೇ ಅನಾವರಣಗೊಳಿಸಲಿದ್ದಾರೆ.

ಹೊಸ ಡಸ್ಟರ್ SUV ಅಂತರರಾಷ್ಟ್ರೀಯ ಮಾರುಕಟ್ಟೆಯ ಜನಪ್ರಿಯ ಡೇಸಿಯಾ ಬಿಗ್‌ಸ್ಟರ್ ಮಾದರಿಯಿಂದ ಹಲವಾರು ವಿನ್ಯಾಸ ಸೂಚನೆಗಳನ್ನು ಎರವಲು ಪಡೆದಿದೆ. ಇದೀಗ ಆಧುನಿಕ ತಂತ್ರಜ್ಞಾನದಿಂದ ಪ್ರೇರಿತವಾದ ಸ್ಪೋರ್ಟಿ ವಿನ್ಯಾಸದೊಂದಿಗೆ ಹೆಚ್ಚು ಆಕರ್ಷಿಸುತ್ತದೆ. ಹೊಸ ಕಾರು ಒಟ್ಟಾರೆ 4.34 ಮೀಟರ್ ಉದ್ದದೊಂದಿಗೆ ಉತ್ತಮ ಇಂಟೀರಿಯರ್ ಅನ್ನು ಹೊಂದಿದೆ.

new-renault-duster-suv-global-debut-with-adas-and-more-features

ಕಾರಿನ ಮುಂಭಾಗದಲ್ಲಿ Y- ಆಕಾರದ LED DRL ಗಳೊಂದಿಗೆ LED ಹೆಡ್‌ಲ್ಯಾಂಪ್‌ಗಳು, ಮುಂಭಾಗದ ಗ್ರಿಲ್‌ಗೆ ಜೋಡಿಸಲಾದ LED ಹೆಡ್‌ಲ್ಯಾಂಪ್‌ಗಳು, 18 ಇಂಚಿನ ಅಲಾಯ್ ವೀಲ್‌ಗಳು ಆಫ್ ರೋಡಿಂಗ್‌ಗಾಗಿ ಸ್ಕ್ವೇರ್ ಆಫ್ ವೀಲ್ ಆರ್ಚ್‌ಗಳನ್ನು ಹೊಂದಿದೆ. ರಸ್ತೆಯ ಪರಾಕ್ರಮ (Road prowess), ಮೇಲ್ಛಾವಣಿಯ ಹಳಿಗಳು (Roof rails), ವೈ-ಆಕಾರದ ಟೇಲ್ ಲೈಟ್‌ಗಳನ್ನು ಒಳಗೊಂಡಿದೆ.

ಕಾರಿನ ಇಂಟೀರಿಯರ್ ಅನೇಕ ಹೊಸ ಬದಲಾವಣೆಗಳನ್ನು ಪಡೆದಿದೆ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್‌ನೊಂದಿಗೆ 10.1 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ವಿನ್ಯಾಸದ ಮೂರು ಸ್ಪೋಕ್ ಸ್ಟೀರಿಂಗ್ ವೀಲ್ ಹೊಂದಿದೆ. ಹಾಗೆಯೇ 472 ಲೀಟರ್ ಬೂಟ್ ಸ್ಪೇಸ್ ಸಹ ಹೊಂದಿದೆ.

new-renault-duster-suv-global-debut-with-adas-and-more-features

7-ಆಸನಗಳ ಮಾದರಿಯು ಸ್ವಲ್ಪ ಕಡಿಮೆ ಬೂಟ್ ಸ್ಥಳವನ್ನು ಹೊಂದಿರಲಿದೆ. ಇದಲ್ಲದೆ, ರೆನಾಲ್ಟ್ ಕಂಪನಿಯು ಈ ಬಾರಿಯ ಹೊಸ ಕಾರಿನಲ್ಲಿ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಟ್ರಾಫಿಕ್ ಸಿಗ್ನಲ್ ಅಲರ್ಟ್, ರಿಯರ್ ಪಾರ್ಕಿಂಗ್ ಅಸಿಸ್ಟ್, ಲೇನ್ ಚೇಂಜ್ ವಾರ್ನಿಂಗ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಟಾಪ್ ಎಂಡ್ ಮಾಡೆಲ್‌ಗಳಲ್ಲಿ ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಹೊಸ ಡಸ್ಟರ್‌ನಲ್ಲಿ ರೆನಾಲ್ಟ್ ಮೂರು ಎಂಜಿನ್ ಆಯ್ಕೆಗಳನ್ನು ನೀಡುವ ಸಾಧ್ಯತೆಯಿದೆ. ಭಾರತದಲ್ಲಿ ಕೇವಲ 1.0 ಲೀಟರ್ ಟರ್ಬೊ ಪೆಟ್ರೋಲ್, 1.2 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಗಳು ಲಭ್ಯವಿರುತ್ತವೆ. ಯುರೋಪಿಯನ್ ಮಾರುಕಟ್ಟೆಗಳಿಗೆ 1.6 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಅನ್ನು ಸೇರಿಸಲಾಗುತ್ತಿದೆ.

new-renault-duster-suv-global-debut-with-adas-and-more-features

ಹೊಸ ಕಾರಿನಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಪೆಟ್ರೋಲ್ ಹೈಬ್ರಿಡ್ ಮಾದರಿಯು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಹೆಚ್ಚಿನ ಮೈಲೇಜ್ ಡೀಸೆಲ್ ಎಂಜಿನ್ ಕಾರುಗಳಿಗೆ ಪರ್ಯಾಯವಾಗಿದೆ. ಇದಲ್ಲದೆ, ಹೊಸ ಡಸ್ಟರ್ ಹಿಂದಿನ ಮಾದರಿಗಿಂತ ಹೆಚ್ಚಿನ ಆಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿದೆ. ಇದು ರೂಪಾಂತರಗಳನ್ನು ಅವಲಂಬಿಸಿ 4X2, 4X4 ಡ್ರೈವ್ ವ್ಯವಸ್ಥೆಯನ್ನು ಪಡೆಯುತ್ತದೆ.

ಹೊಸ ಡಸ್ಟರ್ ಭಾರತದಲ್ಲಿ ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟಿಗುವಾನ್ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ಗಳಿಗೆ ಹೊಸ ಡಸ್ಟರ್ ಕಠಿಣ ಸ್ಪರ್ಧೆಯನ್ನು ನೀಡಲಿದೆ. ಈ ಎಸ್‌ಯುವಿ ಮರಳಿ ಮಾರುಕಟ್ಟೆಗೆ ಲಗ್ಗೆಯಿಡುವ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

new-renault-duster-suv-global-debut-with-adas-and-more-features

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, December 7, 2023, 12:05 [IST]
English summary
New renault duster suv global debut with adas and more features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+