ಭಾರತದಲ್ಲಿ ಮತ್ತೆ ಪ್ರಾಬಲ್ಯ ಮೆರೆಯಲು ಹೊಸ ರೂಪದಲ್ಲಿ ಬರಲಿದೆ ರೆನಾಲ್ಟ್ ಡಸ್ಟರ್

ರೆನಾಲ್ಟ್-ನಿಸ್ಸಾನ್ ಭಾರತೀಯ ಮಾರುಕಟ್ಟೆಯಲ್ಲಿ ಮೂರು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸುವುದಾಗಿ ಖಚಿತಪಡಿಸಿದ್ದು, ಇದರಲ್ಲಿ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್, ನಿಸ್ಸಾನ್ ಟಿರ್ಬರ್-ಆಧಾರಿತ 7-ಸೀಟರ್ ಎಂಪಿವಿ ಮತ್ತು ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರ್ ಅನ್ನು ಒಳಗೊಂಡಿದೆ. ಈ ಹೊಸ ಮಾದರಿಗಳಿಗಾಗಿ ಸುಮಾರು RS $500 ಮಿಲಿಯನ್ (Rs 4,000 ಕೋಟಿ) ಹೂಡಿಕೆ ಮಾಡಲು ಯೋಜಿಸಿದೆ.

ಫ್ರೆಂಚ್ ವಾಹನ ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಜನಪ್ರಿಯ ಡಸ್ಟರ್ ಎಸ್‍ಯುವಿಯ ನ್ಯೂ ಜನರೇಷನ್ (ಮೂರನೇ ತಲೆಮಾರಿನ) ಮಾದರಿಯನ್ನು 2024-2025ರ ವೇಳೆಗೆ ಬಿಡುಗಡೆಗೊಳಿಸಲಿದೆ. ಈ ಹೊಸ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿಯು ಸ್ಥಳೀಯವಾಗಿರುವ CMF-B ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ರೆನಾಲ್ಟ್ ಡಸ್ಟರ್ ಜೊತೆಗೆ ರೆನಾಲ್ಟ್ ಕಂಪನಿಯು ಹೊಸ ಬಿಗ್‌ಸ್ಟರ್ ಎಂಬ 7-ಸೀಟರ್ ಮಿಡ್ ಸೈಜ್ ಎಸ್‍ಯುವಿ ಕಾನ್ಸೆಪ್ಟ್ ಮಾದರಿಯನ್ನು ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ.

ಮತ್ತೆ ಪ್ರಾಬಲ್ಯ ಮೆರೆಯಲು ಹೊಸ ರೂಪದಲ್ಲಿ ಬರಲಿದೆ ರೆನಾಲ್ಟ್ ಡಸ್ಟರ್

ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಎರಡಕ್ಕೂ ವ್ಯಾಪಕ ಸರಣಿಯ ಹೊಸ ಮಾದರಿಗಳನ್ನು ಉತ್ಪಾದಿಸಲು ಇದೇ ಪ್ಲಾಟ್‌ಫಾರ್ಮ್ ಅನ್ನು ಬಳಸಲಾಗುತ್ತದೆ. ರೆನಾಲ್ಟ್ ಮೂರನೇ ತಲೆಮಾರಿನ ಡಸ್ಟರ್ ಎಸ್‌ಯುವಿಯನ್ನು 2024-25ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಹೊಸ ಮಾದರಿಯನ್ನು ಹೊಸ CMF-B ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗುವುದು ಮತ್ತು ಅಭಿವೃದ್ಧಿಪಡಿಸಲಾಗುವುದು. ಈ ಆಧುನಿಕ ಪ್ಲಾಟ್‌ಫಾರ್ಮ್ ಹೆಚ್ಚು ಆಧುನಿಕ ವೈಶಿಷ್ಟ್ಯಗಳು ಮತ್ತು ಆಧಾರಗಳನ್ನು ನೀಡಲು ರೆನಾಲ್ಟ್ ಕಂಪನಿಗೆ ಅವಕಾಶ ನೀಡುತ್ತದೆ.

ನಿಸ್ಸಾನ್ ಕಂಪನಿಯೊಂದಿಗೆ ರೆನಾಲ್ಟ್‌ನ ಪಾಲುದಾರಿಕೆಯು ಈ ಹೊಸ ಮಾದರಿಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಇನ್ನು ರೆನಾಲ್ಟ್ ಡಸ್ಟರ್ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ವಿಡಬ್ಲ್ಯೂ ಟೈಗನ್ ಮತ್ತು ಸ್ಕೋಡಾ ಕುಶಾಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡಲಿದೆ. CMF-B ಪ್ಲಾಟ್‌ಫಾರ್ಮ್ ಅನ್ನು ಭಾರತ ಸೇರಿದಂತೆ ಇತರ ಹೊಸ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಬಳಸಲು ಮಾರ್ಪಡಿಸಲಾಗಿದೆ.

ಈ ಹೊಸ ರೆನಾಲ್ಟ್ ಡಸ್ಟರ್ ಎಸ್‍ಯುವಿಯಲ್ಲಿ ನೀಡುವ ಎಂಜಿನ್ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಇನ್ನು ರೆನಾಲ್ಟ್ ಹಿಂದಿನ ಮಾದರಿಯಲ್ಲಿ 1.0-ಲೀಟರ್ ಮೂರು-ಸಿಲಿಂಡರ್ NA ಪೆಟ್ರೋಲ್ ಮತ್ತು 1.0-ಲೀಟರ್ ಮೂರು-ಸಿಲ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿತ್ತು. ಈ ಎಂಜಿನ್ ಗಳೊಂದಿಗೆ ಮ್ಯಾನುಯಲ್ ಮತ್ತು AMT ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿತ್ತು. ಡಸ್ಟರ್ ಎಸ್‍ಯುವಿಯ ಉತ್ಪಾದನೆಯನ್ನು ಸುಮಾರು ಒಂದು ವರ್ಷದ ಹಿಂದೆ ತಮಿಳುನಾಡಿನಲ್ಲಿರುವ ರೆನಾಲ್ಟ್ ಉತ್ಪಾದನಾ ಘಟಕದಲ್ಲಿ ಸ್ಥಗಿತಗೊಳಿಸಲಾಯಿತು.

ಈ ಹೊಸ ರೆನಾಲ್ಟ್ ಡಸ್ಟರ್ ಎಸ್‍ಯುವಿಯು ಸುಮಾರು ಒಂದು ದಶಕದ ಕಾಲ ಪ್ರೀಮಿಯಂ ಬ್ರ್ಯಾಂಡ್ ಇಮೇಜ್ ಅನ್ನು ರಚಿಸುವ ಮೂಲಕ ನಿಜವಾಗಿಯೂ ರೆನಾಲ್ಟ್ ಕಂಪನಿಗೆ ದೊಡ್ಡ ಕೊಡುಗೆಯನ್ನು ನೀಡಿತ್ತು. ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿ ಬಿಡುಗಡೆಯ ಬಳಿಕ, ರೆನಾಲ್ಟ್ CBU ಮಾರ್ಗದ ಮೂಲಕ ಜಾಗತಿಕ ಮಾದರಿಗಳನ್ನು ಭಾರತಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಫ್ರೆಂಚ್ ವಾಹನ ತಯಾರಕರು 2021ರ ಆರಂಭದಲ್ಲಿ ಬಿಗ್‌ಸ್ಟರ್ 7-ಸೀಟರ್ ಎಸ್‍ಯುವಿ ಕಾನ್ಸೆಪ್ಟ್ ಅನ್ನು ಬಹಿರಂಗಪಡಿಸಿದ್ದರು. ಎಸ್‍ಯುವಿಯ ಉತ್ಪಾದನಾ ಆವೃತ್ತಿಯು 2024-25 ರಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.

ಈ ಎಸ್‍ಯುವಿ ಗಾತ್ರವು ಸ್ಕೋಡಾ ಕೊಡಿಯಾಕ್‌ನಂತಹ ದೊಡ್ಡ ಎಸ್‍ಯುವಿಗಳಿಗೆ ಪರೋಕ್ಷ ಪ್ರತಿಸ್ಪರ್ಧಿಯಾಗಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್‌ನ 7-ಸೀಟುಗಳ ಎಸ್‍ಯುವಿ ಟಾಟಾ ಸಫಾರಿ ಮತ್ತು ಮಹೀಂದ್ರಾ XUV700 ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಬಿಗ್‌ಸ್ಟರ್ ಕಾನ್ಸೆಪ್ಟ್ ಮೀಟರ್ ಉದ್ದವನ್ನು ಹೊಂದಿರುತ್ತದೆ. ಈ ರೆನಾಲ್ಟ್ ಡಸ್ಟರ್ ಎಸ್‍ಯುವಿಯು 2012ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಈ ರೆನಾಲ್ಟ್ ಡಸ್ಟರ್ ಮಿಡ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಆರಂಭದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿತು.

ಈ ರೆನಾಲ್ಟ್ ಡಸ್ಟರ್ ಎಸ್‍ಯುವಿಯು ಬಾರತದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಗ್ರಾಹಕರ ಗಮನಸೆಳೆಯಲು ಯಶಸ್ವಿಯಾಗಿತ್ತು. ರೆನಾಲ್ಟ್ ಡಸ್ಟರ್ 2014ರಲ್ಲಿ ಎಡಬ್ಲ್ಯೂಡಿ ರೂಪಾಂತರವನ್ನು ಪಡೆದುಕೊಂಡಿತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 2016ರಲ್ಲಿ ಮಿಡ್-ಸೈಕಲ್ ನವೀಕರಣವನ್ನು ಪಡೆದುಕೊಂಡಿತ್ತು. ಇನ್ನು 2017ರ ಅಂತ್ಯದಲ್ಲಿ ರೆನಾಲ್ಟ್ ಕಂಪನಿಯು ಎರಡನೇ ತಲೆಮಾರಿನ ಡಸ್ಟರ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಆದರೆ ಈ ಎಸ್‍ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿಲ್ಲ. 2019ರ ಜುಲೈ ತಿಂಗಳಿನಲ್ಲಿ ಡಸ್ಟರ್‌ಗೆ ಜಾಗತಿಕ ಮಾದರಿಯಂತೆಯೇ ವಿನ್ಯಾಸ ಪರಿಷ್ಕರಣೆಗಳೊಂದಿಗೆ ಹೆಚ್ಚು ಅಗತ್ಯವಿರುವ ಫೇಸ್‌ಲಿಫ್ಟ್ ಅನ್ನು ನೀಡಿತು.

Article Published On: Tuesday, February 7, 2023, 12:08 [IST]
English summary
New renault duster suv india launch confirmed details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+