ಸ್ಕೋಡಾ ಕುಷಾಕ್‌ ಮ್ಯಾಟ್ ಬ್ಲ್ಯಾಕ್‌ ಎಡಿಷನ್ ಲಾಂಚ್‌: 500 ಕಾರುಗಳಷ್ಟೇ ಸಿಗಲಿದೆ, ಬೇಗ ಬುಕ್‌ ಮಾಡಿ!

ಪ್ರಸಿದ್ದ ಕಾರು ತಯಾರಿಕಾ ಕಂಪನಿ ಸ್ಕೋಡಾ ಸದಾ ಒಂದಿಲ್ಲೊಂದು ರೀತಿ ಸುದ್ದಿಯಾಗುತ್ತಲೇ ಇದೆ. ಭಾರತದ ಸೇಫೆಸ್ಟ್‌ ಕಾರುಗಳೆಂದೇ ಹೆಸರುವಾಸಿಯಾದ ಸ್ಕೋಡಾ ಕುಷಕ್‌ ಮತ್ತು ಸ್ಕೋಡಾ ಸ್ಲಾವಿಯಾ ಕಾರುಗಳು ಸ್ಕೋಡಾ ಪ್ರೇಮಿಗಳ ಹೃದಯದಲ್ಲಿ ನೆಲೆಯೂರಿ ಅವರ ಫೇವರೀಟ್‌ ಕಾರುಗಳಲ್ಲಿ ಇವೂ ಎರಡು ಕಾರುಗಳು ಎಂದರೆ ತಪ್ಪಾಗಲಾರದು.

ಇವುಗಳಲ್ಲಿ ಕುಷಾಕ್‌ ಎಲ್ಲರ ನೆಚ್ಚಿನ ಕಾರಾಗಿದ್ದು ಈ ಎಸ್‌ಯುವಿಗೆ ಈಗ ಹೊಸ ಅಪ್‌ಡೇಟ್‌ ಒಂದನ್ನು ತಂದಿದ್ದಾರೆ. ಸ್ಕೋಡಾ ಕುಷಾಕ್‌ (Skoda Kushaq) ಗೆ ಈಗ ಮ್ಯಾಟ್‌ ಬ್ಲ್ಯಾಕ್‌ ಎಡಿಷನ್‌ ಅಪ್‌ಡೇಟ್‌ ಅನ್ನು ತಂದಿದ್ದು ಇದನ್ನು ನಿರ್ದಿಷ್ಟ ಸಂಖ್ಯೆಗಳಲ್ಲಿ ಮಾತ್ರ ಉತ್ಪಾದಿಸಲಾಗುವುದು ಎಂದು ಸ್ಕೋಡಾ ಕಂಪನಿಯು ತಿಳಿಸಿದೆ.

Skoda Kushaq Matte Limited Edition

ಹೌದು, ಸ್ಕೋಡಾ ಕುಷಾಕ್‌ ಇದೀಗ ಮ್ಯಾಟ್‌ ಬ್ಲ್ಯಾಕ್‌ ಎಡಿಷನ್‌ ನಲ್ಲಿ ಲಭ್ಯವಿದೆ. ಈಗಾಗಲೇ ಸ್ಕೋಡಾ ಕುಷಾಕ್‌ ಆಕರ್ಷಕವಾಗಿದ್ದು ಈ ಮ್ಯಾಟ್‌ ಬ್ಲ್ಯಾಕ್‌ ಎಡಿಷನ್ ಅದಕ್ಕೆ ಇನ್ನೂ ಹೆಚ್ಚಿನ ಇಂಬನ್ನು ನೀಡಲಿದೆ ಎಂಬುದು ಕಾರು ಪರಿಣತರ ಅಭಿಪ್ರಾಯ. ಇಷ್ಟು ಮಾತ್ರವಲ್ಲದೇ ಇದರಲ್ಲಿ ಇನ್ನೂ ಒಂದು ವಿಶೇಷತೆ ಇದೆ.

ಅದು ಏನೆಂದರೆ ಈ ಸ್ಕೋಡಾ ಕುಷಾಕ್‌ ಇದೀಗ ಮ್ಯಾಟ್‌ ಬ್ಲ್ಯಾಕ್‌ ಎಡಿಷನ್ ಅನ್ನು ಕಂಪನಿಯು ಸುಮಾರು ೫೦೦ ಕಾರುಗಳನ್ನು ಮಾತ್ರ ಉತ್ಪಾದಿಸಲಿದ್ದು ಇದರಿಂದ ಈ ಕಾರು ಲಿಮಿಟೆಡ್‌ ಎಡಿಷನ್‌ ಎಂದರೆ ತಪ್ಪಾಗಲಾರದು. ಕೇವಲ ೫೦೦ ಕಾರುಗಳನ್ನು ಮಾತ್ರ ಉತ್ಪಾದಿಸುವುದರಿಂದ ಸ್ಕೋಡಾ ಪ್ರೇಮಿಗಳು ಆದಷ್ಟು ಬೇಗೀ ಕಾರನ್ನು ಬುಕ್‌ ಮಾಡುವುದು ಒಳ್ಳೆಯದು.

ಇನ್ನು ಈ ಸ್ಕೋಡಾ ಮ್ಯಾಟ್ ಬ್ಲ್ಯಾಕ್‌ ಎಡಿಷನ್‌ ಕಾರು ಈಗಿರುವ ಕುಷಾಕ್‌ ಕಾರಿಗಿಂದ ಸುಮಾರು ನಲವತ್ತು ಸಾವಿರ ಅಧಿಕ ಬೆಲೆಗೆ ಸಿಗಲಿದೆ ಎಂದು ತಿಳಿದು ಬಂದಿದೆ. ಈ ಕಾರು ಕಾರ್ಬನ್‌ ಸ್ಟೀಲ್‌ ಬಣ್ಣದಲ್ಲಿ ಲಭ್ಯವಿದ್ದು, ಇದರ ಡೋರ್‌ ಹ್ಯಾಂಡಲ್‌ಗಳು, ವಿಗ್‌ ಮಿರ್‌ ಮತ್ತು ಡೋರ್‌ ಹ್ಯಾಂಡಲ್‌ಗಳು ಗ್ಲೋಸಿ ಬ್ಲಾಕ್‌ ಬಣ್ಣದಲ್ಲಿ ಇರಲಿದೆ.

ಈ ಸ್ಪೆಷಲ್‌ ಎಡಿಷನ್‌ ಕಾರು ಸುಮಾರು ೧.೦ ಲೀ ಟಿಎಸ್ಐ ಮತ್ತು ೧.೫ ಲೀಟರ್‌ ಟಿಎಸ್‌ಐ ಎಂಜಿನ್ ಆಪ್ಷನ್‌ಗಳಲ್ಲಿ ಲಭ್ಯವಿದೆ ಎಂಬುದು ನಾವು ಗಮನಿಸಬೇಕಾದ ಮತ್ತೊಂದು ಸಂಗತಿ. ಇನ್ನು ಇದರ ಜೊತೆಗೆ ಈ ಕಾರು ಸುಮಾರು ೬ ಸ್ಪೀಡ್‌ ಆಟೋಮ್ಯಾಟಿಕ್‌ ಮತ್ತು ೭ ಸ್ಪೀಡ್‌ ಡಿಎಸ್‌ಜಿ ಟ್ರಾನ್ಸ್ಮಿಷನ್‌ ವ್ಯವಸ್ಥೆಯಲ್ಲಿ ಲಭ್ಯವಿದೆ.

ಇನ್ನು ಈ ಕಾರಿನ ಬೆಲೆಯನ್ನು ನೋಡುವುದಾದರೆ ಸ್ಕೋಡಾ ಮ್ಯಾಟ್ ಬ್ಲ್ಯಾಕ್‌ ಎಡಿಷನ್ ೧.೦ ಲೀ ಟಿಎಸ್ಐ ೧೬.೧೯ ಲಕ್ಷ ಎಕ್ಸ್‌ ಶೋ ರೂಮ್‌ ಬೆಲೆಯಲ್ಲಿ ಮತ್ತು ಸ್ಕೋಡಾ ಮ್ಯಾಟ್ ಬ್ಲ್ಯಾಕ್‌ ಎಡಿಷನ್‌ ೧.೫ ಲೀಟರ್‌ ಟಿಎಸ್‌ಐ ಸುಮಾರು ೧೮.೧೯ ಲಕ್ಷ ಎಕ್ಸ್‌ ಶೋ ರೂಮ್‌ ಬೆಲೆಯಲ್ಲಿ ಆರಂಭವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, July 3, 2023, 16:43 [IST]
English summary
New skoda kushaq matte edition launched price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+