New Skoda Kushaq ONYX ಆವೃತ್ತಿ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳ ಕುರಿತ ಹೆಚ್ಚಿನ ಮಾಹಿತಿ...
ಸ್ಕೋಡಾ ಕಂಪನಿಯು ತನ್ನ 'New Skoda Kushaq ONYX' ಆವೃತ್ತಿಯನ್ನು ಬಿಡುಗಡೆ ಮಾಡಿದೆ. ತುಸು ನವೀಕರಿಸಿದ ಮುಂಭಾಗ ಹಾಗೂ ಬದಿಗಳಲ್ಲಿ ಹೊಸ ಗ್ರಾಫಿಕ್ ಡಿಸೈನ್‌ನೊಂದಿಗೆ ಪರಿಚಯಿಸಲಾಗಿದೆ. ಸ್ಕೋಡಾ ಕುಶಾಕ್ ಓನಿಕ್ಸ್ ಆವೃತ್ತಿಯನ್ನು ಬೇಸ್ ಆಕ್ಟಿವ್ ಮತ್ತು ಆಂಬಿಷನ್ ಕ್ಲಾಸಿಕ್ ಟ್ರಿಮ್‌ಗಳ ನಡುವೆ ಇರಿಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
ಕುಶಾಕ್ ONYX ಆವೃತ್ತಿಯ ಬೆಲೆಗಳು ರೂ. 12.4 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ. ಇನ್ನು ವಿನ್ಯಾಸದಲ್ಲಿ ಯಾವೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ನೋಡುವುದಾದರೆ, ಸ್ಕೋಡಾ ಕುಶಾಕ್ ಓನಿಕ್ಸ್ ಹೊಸ ಫಾಕ್ಸ್ ಡಿಫ್ಯೂಸರ್ ಜೊತೆಗೆ ಗ್ರಿಲ್ ಸುತ್ತ ಕ್ರೋಮ್ ಸರೌಂಡ್ ಪಡೆದಿದೆ. B-ಪಿಲ್ಲರ್‌ಗಳ ಮೇಲೆ ಬೋಲ್ಡ್ ಫಾಂಟ್‌ನಲ್ಲಿ ಓನಿಕ್ಸ್ ಬ್ಯಾಡ್ಜಿಂಗ್ ಅನ್ನು ನೋಡಬಹುದು. 16 ಇಂಚಿನ ಸ್ಟೀಲ್ ವೀಲ್‌ಗಳಿಗಾಗಿ ವಿಭಿನ್ನ ಶೈಲಿಯ ಕವರ್‌ಗಳನ್ನು ಕೂಡ ನೀಡಲಾಗಿದೆ.

ಹಾಗೆಯೇ ಅದರ ಡೋರ್‌ಗಳ ಮೇಲೆ ಆಕರ್ಷಣೀಯವಾದ ಗ್ರಾಫಿಕ್ಸ್ ಡಿಸೈನ್ ನೀಡಲಾಗಿದ್ದು, ಇದು ಓನಿಕ್ಸ್ ಆವೃತ್ತಿಯನ್ನು ಮತ್ತಷ್ಟು ಸ್ಪೋರ್ಟಿಯಾಗಿ ಕಾಣುವಂತೆ ಮಾಡುತ್ತದೆ. ಒಳಭಾಗದ ವಿಷಯಕ್ಕೆ ಬರುವುದಾದರೆ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಸ್ಕೋಡಾ ಬ್ಲಾಕ್ ಲೆದರೇಟ್, ಸಿಲ್ವರ್ ಡ್ಯಾಶ್ ಬೋರ್ಡ್ ನೊಂದಿಗೆ ನರ್ಲ್ಡ್ ಪ್ಯಾಟರ್ನ್‌ಗಳು ಮತ್ತು ಇತರ ವಿನ್ಯಾಸ ಅಂಶಗಳೊಂದಿಗೆ 2 ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಉಳಿಸಿಕೊಂಡಿದೆ. ಇದು ಮೊದಲಿನಂತೆ ಹೆಚ್ಚು ಆಕರ್ಷಣೀಯವಾಗಿಯೇ ಇದೆ.
ಮೊದಲಿನಿಂದಲೂ ಕುಶಾಕ್ ಮಾದರಿಯು ಅದರ ವಿನ್ಯಾಸ ಹಾಗೂ ಬೆಲೆಗೆ ತಕ್ಕ ಫೀಚರ್‌ಗಳ ವಿಷಯದಲ್ಲಿ ಜನಪ್ರಿಯತೆ ಪಡೆದಿತ್ತು. ಹಾಗೆಯೇ ಪರ್ಫಾಮೆನ್ಸ್‌ನಲ್ಲಿ ಕೂಡ ತೀರಾ ಹಿಂಬಿದ್ದಿದೆ ಎಂದು ಹೇಳಲು ಸಾಧ್ಯವಿಲ್ಲ. ಉತ್ತಮ ಡ್ರೈವಿಂಗ್ ಇಂಪ್ರೆಷನ್ ಪಡೆದಿತ್ತು. ಈಗ ಕೂಡ ಕುಷಾಕ್ ಓನಿಕ್ಸ್‌ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿಲ್ಲ. ಬಹುತೇಕ ಅದೇ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದೆ ಎಂದು ಹೇಳಬಹುದು. ಹಾಗದರೇ ವೈಶಿಷ್ಟ್ಯಗಳು ಹೇಗಿವೆ ಮತ್ತು ಯಾವೆಲ್ಲವನ್ನು ಉಳಿಸಿಕೊಳ್ಳಲಾಗಿದೆ ಎಂಬುದನ್ನು ಇಲ್ಲಿ ನೋಡೋಣ.

ಫೀಚರ್‌ಗಳ ವಿಷಯಕ್ಕೆ ಬಂದರೆ, ವೈರ್ಡ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ. ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಹಿಂಭಾಗದ AC ವೆಂಟ್‌ಗಳು ಇವೆ. ಹಾಗೆಯೇ ಸ್ಕೋಡಾ ಕುಶಾಕ್ ಓನಿಕ್ಸ್ ಆವೃತ್ತಿಯು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಫಾಗ್ ಲೈಟ್‌ಗಳು, ರೂಫ್ ರೈಲ್‌ಗಳು, ವೀಲ್ ಕವರ್‌ಗಳು, ರಿಯರ್ ವಾಷರ್ ವೈಪರ್, ರಿಯರ್ ಡಿಫಾಗರ್, ರಿಮೋಟ್ ಲಾಕಿಂಗ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಪವರ್‌ಟ್ರೇನ್ ಕುರಿತು ಹೇಳುವುದಾದರೆ, ಸ್ಕೋಡಾ ಕುಶಾಕ್ ಓನಿಕ್ಸ್ ಆವೃತ್ತಿಯು 115 bhp ಪವರ್ ಮತ್ತು 175 Nm ಟಾರ್ಕ್ ನೊಂದಿಗೆ 1.0L 3-ಸಿಲಿಂಡರ್ TSI ಎಂಜಿನ್ ಪಡೆಯುವ ಸಾಧ್ಯತೆಯಿದೆ. ಕಂಪನಿಗೆ ಸಂಬಂಧಿಸಿದಂತೆ ಉತ್ತಮ ಮಾರಾಟ ಗಳಿಸುತ್ತಿರುವ ಕುಷಾಕ್ ಮಾದರಿಯಿಂದಾಗಿಯೇ ಇದೀಗ ಓನಿಕ್ಸ್ ಅನ್ನು ಪರಿಚಯಿಸಲಾಗಿದೆ. ಈ ಕಾಂಪಾಕ್ಟ್ ಎಸ್‌ಯುವಿ ವಿಭಾಗವು ಅತಿ ಹೆಚ್ಚು ಸ್ಪರ್ಧೆಯಿರುವ ವಿಭಾಗವಾಗಿದೆ. ಇತ್ತೀಚೆಗೆ ಕಿಯಾ ಸೆಲ್ಟೋಸ್ ಅನ್ನು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಾರಾಟದಲ್ಲಿ ಮೊದಲ ಬಾರಿಗೆ ಹಿಂದಿಕ್ಕಿದೆ.
ಕ್ರೆಟಾ ಮತ್ತು ಸೆಲ್ಟೋಸ್ ಎರಡರ ಫೇಸ್‌ಲಿಫ್ಟ್ ಮಾಡೆಲ್‌ಗಳು ಈ ವಿಭಾಗವನ್ನು ಸದ್ಯ ಆಳುತ್ತಿವೆ. ಇವು ಈ ವಿಭಾಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಹಾಗೆಯೇ ನಿರ್ದಿಷ್ಟ ಪ್ರೇಕ್ಷಕರಿಗೆ ತಕ್ಕಂತೆ ಮಾಡಲಾದ ಹೆಚ್ಚಿನ ರೂಪಾಂತರಗಳೊಂದಿಗೆ, ಸ್ಕೋಡಾ ಮತ್ತು ವೋಕ್ಸ್‌ವ್ಯಾಗನ್ ಈ ಜಾಗದಲ್ಲಿ ಗಮನಾರ್ಹ ಪರಿಮಾಣವನ್ನು ಪಡೆಯಬಹುದು. ನವೀಕರಿಸಿದ GNCAP ಟೆಸ್ಟಿಂಗ್ ಪ್ರೋಟೋಕಾಲ್‌ಗಳಲ್ಲಿ 5-ಸ್ಟಾರ್ ಕ್ರ್ಯಾಶ್ ರೇಟಿಂಗ್ ಅನ್ನು ನೀಡಲು ಈ ವಿಭಾಗದಲ್ಲಿ ಈ ಎರಡು ಕಂಪನಿಗಳಿವೆ ಎಂಬುದು ಅವರನ್ನು ಮತ್ತಷ್ಟು ಬಲಪಡಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








