ಖಡಕ್ ಲುಕ್‌ನಲ್ಲಿ ಮಿಂಚುತ್ತಿದೆ ಟೊಯೊಟಾ ಹೊಸ ಕಾರು.. ಮಾಮೂಲಿ ಫೀಚರ್ಸ್ ಅಲ್ಲ ಬಿಡಿ!

ಹೊಸ ಟೊಯೊಟಾ ಫಾರ್ಚುನರ್ 2024 (2024 toyota fortuner) ರಲ್ಲಿ ಪಂಚ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಹೊಸ ಟೊಯೊಟಾ ಕಾರಿನಲ್ಲಿ ಎಂಜಿನ್ ಆಯ್ಕೆಗಳ ಜೊತೆಗೆ ಉತ್ತಮ ವಿನ್ಯಾಸವನ್ನು ನೀಡಲಾಗಿದೆ. ಭಾರೀ ನಿರೀಕ್ಷೆಗಳೊಂದಿಗೆ ಬಿಡುಗಡೆಗೆ ಸಜ್ಜಾಗಿರುವ ಈ ಹೊಸ ಫಾರ್ಚುನರ್ ಕುರಿತ ಆಸಕ್ತಿಕರ ಮಾಹಿತಿಯನ್ನು ಇಲ್ಲಿ ನೋಡೊಣ.

ಜಪಾನಿನ ಕಾರು ತಯಾರಕರು ಇತ್ತೀಚೆಗೆ ಟೊಯೊಟಾ ಹಿಲಕ್ಸ್ ಯುರೋಪ್ ಮಾರುಕಟ್ಟೆಯಲ್ಲಿ ಲೈಫ್‌ಸ್ಟೈಲ್ ಪಿಕಪ್ ಟ್ರಕ್‌ನ ಮೈಲ್ಡ್ ಹೈಬ್ರಿಡ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. Hilux MHEV ಎಂದು ಕರೆಯಲ್ಪಡುವ, ಹೊಸ ಪಿಕಪ್ ಅನ್ನು ಯುರೋಪಿಯನ್ ಮಾರುಕಟ್ಟೆಗಾಗಿ ಥೈಲ್ಯಾಂಡ್‌ನಲ್ಲಿ ತಯಾರಿಸಲಾಗುವುದು. ಇದೇ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಈಗ ಹೊಸ ಫಾರ್ಚುನರ್ ಕಾರಿನಲ್ಲಿ ಬಳಸಿಕೊಳ್ಳಲಾಗುವುದು.

new-toyota-fortuner-2024-need-to-know-details

ಹೊಸ ಮೈಲ್ಡ್ ಹೈಬ್ರಿಡ್ ವ್ಯವಸ್ಥೆಯನ್ನು ಹೊಸ ಟೊಯೊಟಾ ಫಾರ್ಚುನರ್, ಲ್ಯಾಂಡ್ ಕ್ರೂಸರ್ ಪ್ರಾಡೊ, ಲ್ಯಾಂಡ್ ಕ್ರೂಸರ್ 70 ಮತ್ತು ಇತರ ಟೊಯೊಟಾ ಮಾದರಿಗಳಲ್ಲಿ ಪರಿಚಯಿಸಲಾಗುವುದು. ಹಾಗೆಯೇ ಹೊಸ ಟೊಯೊಟಾ ಫಾರ್ಚುನರ್ 2024 ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ ಮುಂದಿನ ಪೀಳಿಗೆಯ ಮಾದರಿಯನ್ನು ಹೊಸ TNGA-F ಆರ್ಕಿಟೆಕ್ಚರ್ ಆಧರಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿದುಬಂದಿದೆ.

ಈ ಪ್ಲಾಟ್‌ಫಾರ್ಮ್ ಲ್ಯಾಂಡ್ ಕ್ರೂಸರ್ 300, ಲೆಕ್ಸಸ್ LX 500D, ಟಕೋಮಾ ಪಿಕಪ್ ಸೇರಿದಂತೆ ಬಹು ಜಾಗತಿಕ ಕಾರುಗಳನ್ನು ಸಹ ಸಪೋರ್ಟ್ ಮಾಡುತ್ತದೆ. ಈ ಫ್ಲೆಕ್ಸಿಬಲ್ ಆರ್ಕಿಟೆಕ್ಚರ್ ವಿಭಿನ್ನ ಬಾಡಿ ಸ್ಟೈಲ್‌ಗೆ ICE ಮತ್ತು ಹೈಬ್ರಿಡ್ ಸೇರಿದಂತೆ ಬಹು-ಎಂಜಿನ್ ಆಯ್ಕೆಗಳಿಗೆ ಸೂಕ್ತವಾಗಿರುತ್ತದೆ. ಹೊಸ ಟೊಯೊಟಾ Hilux MHEV 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್, 48-ವೋಲ್ಟ್ ಮೈಲ್ಡ್ ಹೈಬ್ರಿಡ್ ಸೆಟಪ್‌ನೊಂದಿಗೆ ಬಂದಿದೆ.

new-toyota-fortuner-2024-need-to-know-details

ಅಲ್ಲದೆ, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದ ಸೇರ್ಪಡೆಯು ಸಾಮಾನ್ಯ ಮಾದರಿಗಿಂತ ಶೇ10 ರಷ್ಟು ಇಂಧನವನ್ನು ಉಳಿಸುತ್ತದೆ ಎಂದು ಕಂಪನಿ ಬಹಿರಂಗಪಡಿಸಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗೆ ಜೋಡಿಸಲಾಗಿದೆ. ಹೈಬ್ರಿಡ್ ಸೆಟಪ್ 48 ವೋಲ್ಟ್ ಬ್ಯಾಟರಿ, ಸಣ್ಣ ಎಲೆಕ್ಟ್ರಿಕ್ ಮೋಟಾರ್ ಜನರೇಟರ್ ಮತ್ತು ಇತರ ಘಟಕಗಳನ್ನು ಒಳಗೊಂಡಿದೆ.

ವಾಹನವು ಸ್ಟಾಪ್ ಮತ್ತು ಸ್ಟಾರ್ಟ್ ವ್ಯವಸ್ಥೆಯನ್ನು ಸಹ ಹೊಂದಿದೆ. ಹೊಸ ಟೊಯೊಟಾ ಫಾರ್ಚುನರ್ 2.8 ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ನೊಂದಿಗೆ 48 ವೋಲ್ಟ್ ಮೈಲ್ಡ್ ಹೈಬ್ರಿಡ್ ಸೆಟಪ್ ನೊಂದಿಗೆ ಬರಲಿದೆ. ಹೊಸ ಮಾದರಿಯ ಟಕೋಮಾ ಪಿಕಪ್‌ನಿಂದ ಸ್ಟೈಲಿಂಗ್ ಅಂಶಗಳನ್ನು ಪಡೆಯಬಹುದು ಎಂದು ಸಹ ಹೇಳಲಾಗುತ್ತಿದೆ.

new-toyota-fortuner-2024-need-to-know-details

ಉತ್ತಮ ಆಫ್-ರೋಡ್ ಪರ್ಫಾಮೆನ್ಸ್‌ಗಾಗಿ ಆಕ್ರಮಣಕಾರಿ ಮುಂಭಾಗದ ಬಂಪರ್ ವಿನ್ಯಾಸ, ವಿಶಾಲವಾದ ಫೆಂಡರ್ ಫ್ಲೇರ್‌ಗಳು, ಸ್ಟ್ರಿಂಗ್ ಬಾನೆಟ್, ವೈಟ್ ಬಾಡಿಯೊಂದಿಗೆ ಬ್ಲಾಕ್ ರೂಫ್, ಅದ್ಬುತ ವೀಲ್ ಆರ್ಚ್‌ಗಳು, ಸ್ಕಿಡ್ ಪ್ಲೇಟ್‌ಗಳ ಸುತ್ತಲೂ ಪ್ರಮುಖವಾದ ಕ್ಲಾಡಿಂಗ್‌ನಂತ ಆಕರ್ಷಕ ವಿನ್ಯಾಸ ಮುಖ್ಯಾಂಶಗಳೊಂದಿಗೆ ಬರಲಿದೆ.

ಈ SUV 2.4 ಲೀಟರ್ ಹೈಬ್ರಿಡ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯಲಿದೆ. ಈ ಎಲೆಕ್ಟ್ರಿಕ್ ಮೋಟಾರ್ ಉತ್ತಮ ಟಾರ್ಕ್ ಸಹಾಯವನ್ನು ಒದಗಿಸುತ್ತದೆ, ಹಾಗೆಯೇ ರೀಜೆನ್ ಬ್ರೇಕಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಈ ಮೈಲ್ಡ್ ಹೈಬ್ರಿಡ್ ಸೆಟಪ್ Hilux ನ ಆಫ್-ರೋಡ್ ಮತ್ತು ಟೋವಿಂಗ್ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಂಪನಿಯು ಬಹಿರಂಗಪಡಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

More from DriveSpark

Article Published On: Monday, November 27, 2023, 13:09 [IST]
English summary
New toyota fortuner 2024 need to know details
Read more on ಟೊಯೋಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+