ಮತ್ತೊಂದು ಬಲಿಷ್ಟ ಎಸ್‌ಯುವಿ ಮಾರುತಿ ಅಡ್ರೆಸ್‌ನಲ್ಲಿ‌? ಬರುತ್ತಾ 28 ಕಿಮೀ ಮೈಲೇಜ್‌ನ ಫಾರ್ಚ್ಯೂನರ್‌ ಹೈಬ್ರಿಡ್‌

ಬಹು ನಿರೀಕ್ಷಿತ ಮೂರನೇ ತಲೆಮಾರಿನ ಹೊಸ ಟೊಯೋಟಾ ಫಾರ್ಚ್ಯೂನರ್‌ 2024 ಕಾರನ್ನು ಭಾರತೀಯ ಮಾರುಕಟ್ಟೆಯು ಹೆಚ್ಚು ನಿರೀಕ್ಷೆಗಳೊಂದಿಗೆ ಕಾದು ಕುಳಿತಿದೆ. ಕಳೆದ ಕೆಲವೊಂದಿಷ್ಟು ಸಮಯದಿಂದ ಕಾರು ಭಾರತದ ವಾಹನ ಪ್ರೇಮಿಗಳ ಮಾತುಕತೆಯ ಪ್ರಮುಖ ವಿಷಯವಾಗಿದೆ. ಇತ್ತೀಚೆಗೆ ಹೊಸ ಕಾರಿನ ಕೆಲವು ಚಿತ್ರಗಳು ಸಹ ಲೀಕ್‌ ಆಗಿತ್ತು.

ಆಗಿನಿಂದ ಅಂತು ಹೊಸ ಟೊಯೋಟಾ ಫಾರ್ಚ್ಯೂನರ್‌ 2024 (Toyota Fortuner Hybrid) ಕುರಿತಾಗಿ ಭಾರತೀಯರಿಗೆ ಇದ್ದ ನಿರೀಕ್ಷೆಯ ಮಟ್ಟ ಮತ್ತಷ್ಟು ಹೆಚ್ಚಾಗಿದೆ. ಕಾರು ಎಂದು ಲಾಂಚ್‌ ಆಗಲಿದೆ ಎಂದು ಕಾದು ಕುಳಿತಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಇತ್ತೀಚೆಗೆ ಬಂದಿರುವ ಟೊಯೋಟಾ ಪಿಕ್‌ಅಪ್‌ ಟ್ರಕ್‌ ವಿನ್ಯಾಸದ ಜೊತೆಗೆ ಇನ್ನೂ ಹಲವು ವಿನ್ಯಾಸಗಳು ಜನರ ಮನದಲ್ಲಿದೆ.

New Toyota Fortuner Hybrid 2024

ಏನೇ ಆದರೂ ಈಗಿರುವ ಫಾರ್ಚ್ಯೂನರ್‌ಗಿಂತ ಹೆಚ್ಚು ಸ್ಟೈಲಿಶ್‌ ಆಗಿ ಬರಲಿರುವ ನಿರೀಕ್ಷೆ ಇದ್ದು ಹೊಸ ಟೊಯೋಟಾ ಫಾರ್ಚ್ಯೂನರ್‌ 2024 ಕಾರಿನಲ್ಲಿ ನಿರೀಕಷೆ ಮಾಡಿರುವ ಅತೀ ಪ್ರಮುಖವಾದ ಬದಲಾವಣೆಯೆಂದರೆ ಅದು ಇದರ ಮೈಲ್ಡ್ ಹೈಬ್ರಿಡ್‌ ಡೀಸೆಲ್‌ ಇಂಜಿನ್ ಜೊತೆ ಬರಲಿದೆ ಎಂದರೆ ತಪ್ಪಾಗಲಾರದು.

ಇನ್ನು ಲೀಕ್‌ ಆಗಿರುವ ಹೊಸ ಟೊಯೋಟಾ ಫಾರ್ಚ್ಯೂನರ್‌ 2024 ಚಿತ್ರಗಳನ್ನು ಗಮನಿಸಿದರೆ ಅದರಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದೆ. ಚಿತ್ರದಲ್ಲಿ ಮೊದಲಿಗೆ ದೊಡ್ಡದಾದ ಗ್ರಿಲ್‌ ಅನ್ನು ನೋಡಬಹುದು. ಇದು ಫಾರ್ಚ್ಯೂನರ್‌ಗೆ ಹೊಸ ಲುಕ್‌ ನೀಡಲಿದೆ. ಇದರಿಂದ ಕಾರಿನ ರೋಡ್‌ ಪ್ರೆಸೆನ್ಸ್‌ ಹೆಚ್ಚಾಗಲಿದೆ.

New Toyota Fortuner Hybrid 2024

ಡಿಸೈನ್‌ ಶೈಲಿಯು ಇತ್ತೀಚೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸಿದ್ದವಾಗಿರುವ ಟೋಯೋಟಾ ಪಿಕ್‌ ಅಪ್‌ ಟ್ರಕ್ ಆದ ಟಾಕೋಮಾದಿಂದ ಪ್ರೇರಿತವಾಗಿರುವುದು ಎಂದರೆ ಒಪ್ಪಲೇಬೇಕು. ಹೀಗೆ ಹೇಳಲಿರುವ ಕಾರಣ ಏನೆಂದರೆ ಟಾಕೋಮಾದಲ್ಲಿಯೂ ಸಹ ಇದೇ ರೀತಿಯ ದೊಡ್ಡ ಫ್ರಂಟ್‌ ಗ್ರಿಲ್‌ ಇರುವುದನ್ನು ನಾವು ಕಾಣಬಹುದಾಗಿದೆ.

ಇನ್ನು ಇದರ ಜೊತೆಗೆ ಹೊಸದಾಗಿ ವಿನ್ಯಾಸಗೊಳಿಸಿರುವ ಹೆಡ್‌ಲೈಟ್‌ ಗಳನ್ನು ಸಹ ನಾವು ಹೊಸ ಟೊಯೋಟಾ ಫಾರ್ಚ್ಯೂನರ್‌ 2024 ಚಿತ್ರಗಳಲ್ಲಿ ಕಾಣಬಹುದು. ಇದರ ಜೊತೆಗೆ ಬಂಪರ್‌ ಸಹ ಹೊಸದಾಗಿ ವಿನ್ಯಾಸಗೊಂಡಿದ್ದು ಇವೆಲ್ಲದರ ಸಹಾಯದಿಂದ ಹೊಸ ಫಾರ್ಚ್ಯೂನರ್‌ನಲ್ಲಿ ಅಗ್ರೆಸಿವ್‌ ಲುಕ್‌ ಬರಲಿದೆ ಎಂಬುದನ್ನು ಊಹಿಸಿಕೊಳ್ಳಬಹುದಾಗಿದೆ.

ಹೊಸ ಟೊಯೋಟಾ ಫಾರ್ಚ್ಯೂನರ್‌ 2024 ಆಗಮನದ ನಂತರ ಹಲವರು ಕಾರನ್ನು ಮಾರುತಿ ಸುಜುಕಿಯು ರೀ ಬ್ಯಾಡ್ಜಿಂಗ್ ಮಾಡಲಿರಬಹುದು ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಇದಕ್ಕೆ ಕಾರಣ ಇತ್ತೀಚೆಗಷ್ಟೇ ಮಾರುತಿ ಸುಜುಕಿಯು, ಟೊಯೊಟಾದ ಪ್ರಸಿದ್ದ ಇನ್ನೋವಾ ಹೈಕ್ರಾಸ್ ಕಾರನ್ನು ರೀ ಬ್ಯಾಡ್ಜಿಂಗ್‌ ಮಾಡಿ ಇನ್ವಿಕ್ಟೋ ವನ್ನು ಲಾಂಚ್‌ ಮಾಡಿದ್ದು. ಆದರೆ ಮುಂದಿನ ನಡೆ ಹೇಗಿರಲಿದೆ ಎಂದು ಇನ್ನೂ ಕಾದು ನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, July 18, 2023, 18:30 [IST]
English summary
New toyota fortuner hybrid 2024 leaked a head of launch
Read more on ಟೊಯೋಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+