ಸ್ಥಳೀಯ ಡೀಲರ್‌ಶಿಪ್‌ಗಳಿಗೆ ತಲುಪಿದ 2023 ಟೊಯೊಟಾ ಇನ್ನೋವಾ ಕ್ರಿಸ್ಟಾ

2023 ಟೊಯೋಟಾ ಇನ್ನೋವಾ ಕ್ರಿಸ್ಟಾ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅದರ ಅಧಿಕೃತ ಬೆಲೆ ಘೋಷಣೆಗೆ ಮುಂಚಿತವಾಗಿ, MPV ಯ ಮೂಲ ರೂಪಾಂತರವು ಈಗ ದೇಶದ ಆಯ್ದ ಡೀಲರ್‌ಶಿಪ್‌ಗಳಿಗೆ ಆಗಮಿಸಿದೆ. ಈ ಕುರಿತ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹರಿದಾಡುತ್ತಿವೆ.

ಈ ಹೊಸ ಎಂಪಿವಿಯನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ. 50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.ಇತ್ತೀಚೆಗೆ ಬಿಡುಗಡೆಗೊಂಡ ಇನೋವಾ ಹೈಕ್ರಾಸ್ ಜೊತೆಗೆ ಇನ್ನೋವಾ ಕ್ರಿಸ್ಟಾ ಕಾರನ್ನು ಕೂಡ ಮಾರಾಟ ಮಾಡುವುದಾಗಿ ಕಂಪನಿಯವರು ತಿಳಿಸಿದ್ದಾರೆ. ನವೀಕರಿಸಿದ ಇನೋವಾ ಕ್ರಿಸ್ಟಾ ಬೆಲೆಯನ್ನು ಇದೇ ತಿಂಗಳಿನಲ್ಲಿ ಬಹಿರಂಗಪಡಿಸುವ ಸಾಧ್ಯತೆಯಿದೆ. ಇನ್ನು ಈ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ವಿತರಣೆಯು ಏಪ್ರಿಲ್ ತಿಂಗಳ ಅಂತ್ಯದಲ್ಲಿ ನಡೆಯಲಿದೆ.

ಸ್ಥಳೀಯ ಡೀಲರ್‌ಶಿಪ್‌ಗಳಿಗೆ ತಲುಪಿದ 2023 ಟೊಯೊಟಾ ಇನ್ನೋವಾ ಕ್ರಿಸ್ಟಾ

ಡೀಲರ್‌ಶಿಪ್‌ಗಳಿಗೆ ಆಗಮಿಸಿರುವ ಇನ್ನೋವಾ ಕ್ರಿಸ್ಟಾ ಕುರಿತು ಮಾತನಾಡುವುದಾದರೆ, ಹೊಸ ಕ್ರಿಸ್ಟಾದ ಹೊರಭಾಗವು ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಫಾಗ್ ಲೈಟ್‌ಗಳು, ಸಂಪೂರ್ಣ ಕಪ್ಪು ಗ್ರಿಲ್, ಹೊಸ ಮುಂಭಾಗದ ಬಂಪರ್, ವ್ಹೀಲ್ ಕವರ್‌ಗಳೊಂದಿಗೆ ಸ್ಟೀಲ್ ವೀಲ್‌ಗಳು, ಹ್ಯಾಲೊಜೆನ್ ಟೈಲ್ ಲೈಟ್‌ಗಳು, ಸಂಯೋಜಿತ ಸ್ಪಾಯ್ಲರ್ ಅನ್ನು ಪಡೆದುಕೊಂಡಿದೆ. ಮೌಂಟೆಡ್ ಸ್ಟಾಪ್ ಲ್ಯಾಂಪ್, ಟೈಲ್ ಲೈಟ್‌ಗಳ ನಡುವೆ ಬ್ಲಾಕ್ ಇನ್ಸರ್ಟ್, ಹಿಂದಿನ ವೈಪರ್, ವಾಷರ್ ಮತ್ತು ಬಾಡಿ ಟೋನ್ ಡೋರ್ ಹ್ಯಾಂಡಲ್‌ಗಳು ಆಕರ್ಷಣಿಯವಾಗಿ ಕಾಣುತ್ತಿವೆ.

ಇಂಟೀರಿಯರ್ ನಲ್ಲಿ ಮೂರು-ಸ್ಪೋಕ್ ಸ್ಟೀರಿಂಗ್ ವೀಲ್, ಫ್ಯಾಬ್ರಿಕ್ ಅಪ್ಹೋಲ್ಸ್ಟರಿ, ಪವರ್ ವಿಂಡೋಗಳು, ಎಲೆಕ್ಟ್ರಿಕ್ ಅಡ್ಜಸ್ಟ್ ಮಾಡಬಹುದಾದ ORVM ಗಳು, ಡಿಜಿಟಲ್ MID, ಡ್ರೈವ್ ಮೋಡ್‌ಗಳು, ಟಿಲ್ಟ್ ಮತ್ತು ಟೆಲಿಸ್ಕೋಪಿಕಲಿ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ಮತ್ತು ಎಲ್ಲಾ ಮೂರು ಸಾಲುಗಳಿಗೆ ಹೊಂದಾಣಿಕೆ ಮಾಡಬಹುದಾದ ಹೆಡ್‌ ರೆಸ್ಟ್‌ಗಳನ್ನು ಹೊಂದಿದೆ. ಹಾಗೆಯೇ ಹೊಸ ಕ್ರಿಸ್ಟಾದಲ್ಲಿ ಟಚ್ ‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳನ್ನು ಕೈಬಿಡಲಾಗಿದೆ.

ಸ್ಥಳೀಯ ಡೀಲರ್‌ಶಿಪ್‌ಗಳಿಗೆ ತಲುಪಿದ 2023 ಟೊಯೊಟಾ ಇನ್ನೋವಾ ಕ್ರಿಸ್ಟಾ

ನವೀಕರಿಸಿದ ಟೊಯೊಟಾ ಇನ್ನೋವಾ ಕ್ರಿಸ್ಟಾ 2.4-ಲೀಟರ್ ಡೀಸೆಲ್ ಎಂಜಿನ್ ಆಗಿದ್ದು, ಇದು 147.9 ಬಿಹೆಚ್‍ಪಿ ಪವರ್ ಮತ್ತು 343 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಇನೋವಾ ಕ್ರಿಸ್ಟಾ ಕಾರು ಇಕೋ ಮತ್ತು ಪವರ್ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಹೊಸಾ ಕ್ರಿಸ್ಟಾ 7 ಮತ್ತು 8 ಸೀಟುಗಳ ಕಾನ್ಫಿಗರೇಶನ್‌ಗಳಲ್ಲಿ ಬರಲಿದೆ.

ಈ ಹೊಸ ಎಂಪಿವಿಯು ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್, ಅವಂತ್-ಗಾರ್ಡ್ ಬ್ರಾಂಝ್, ಸಿಲ್ವರ್ ಮತ್ತು ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಈ ಕ್ರಿಸ್ಟಾ ಕಾರು G, GX, VX ಮತ್ತು ZX ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಈ ಎಲ್ಲಾ ರೂಪಾಂತರಗಳ ಅನುಗುಣವಾಗಿ ವಿಭಿನ್ನ ವೈಶಿಷ್ಟ್ಯದ ವಿವರಗಳನ್ನು ಬಹಿರಂಗವಾಗಿದೆ. ಈ ಎಂಪಿವಿಯ G ಎಂಬ ಮೂಲ ರೂಪಾಂತರವು 7 ಮತ್ತು 8-ಸೀಟುಗಳ ವಿನ್ಯಾಸದಲ್ಲಿ ಮುಂಭಾಗದ ಪ್ರತ್ಯೇಕ ಸೀಟುಗಳು ಮತ್ತು ಸ್ಲೈಡ್ ಮತ್ತು ರಿಕ್ಲೈನ್ ​​ಕಾರ್ಯದೊಂದಿಗೆ ಬರುತ್ತದೆ.

ಸ್ಥಳೀಯ ಡೀಲರ್‌ಶಿಪ್‌ಗಳಿಗೆ ತಲುಪಿದ 2023 ಟೊಯೊಟಾ ಇನ್ನೋವಾ ಕ್ರಿಸ್ಟಾ

ಇದರೊಂದಿಗೆ 8-ಸೀಟುಗಳ ಆವೃತ್ತಿಯ ಮಧ್ಯದ ಸಾಲು ಸ್ಲೈಡ್ ಮತ್ತು ಒನ್-ಟಚ್ ಟಂಬಲ್‌ನೊಂದಿಗೆ 60:40 ಸ್ಪ್ಲಿಟ್ ಅನುಪಾತವನ್ನು ಹೊಂದಿದೆ. ಎಂಪಿವಿಯು ಡ್ರೈವರ್ ವಿಂಡೋದಲ್ಲಿ ಆಟೋ ಡೌನ್, ಜ್ಯಾಕ್-ನೈಫ್ ಕೀಯೊಂದಿಗೆ ವೈರ್‌ಲೆಸ್ ಡೋರ್ ಲಾಕ್, ಬ್ಲ್ಯಾಕ್ ಕ್ಲೋತ್ ಸೀಟ್ ಕವರ್, ಮ್ಯಾನ್ಯುವಲ್ ಎಸಿ ಯುನಿಟ್, ಡೋರ್ ಇನ್‌ಸೈಡ್ ಹ್ಯಾಂಡಲ್‌ಗಳು ಇಂಟೀರಿಯರ್ ಕಲರ್, ಸ್ಪೀಡೋಮೀಟರ್ ಜೊತೆಗೆ ಎಂಐಡಿ, ಸ್ಟೀರಿಂಗ್ ವೀಲ್ ಯುರೆಥೇನ್ ಜೊತೆಗೆ ಸಿಲ್ವರ್ ಆರ್ನಮೆಂಟ್, ಫ್ರಂಟ್ ವೈಪರ್ ಇಂಟರ್‌ಮಿಟೆಂಟ್ ಜೊತೆಗೆ ಪವರ್ ವಿಂಡೋಗಳನ್ನು ಕೂಡ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Thursday, March 16, 2023, 15:08 [IST]
English summary
New toyota Innova crysta has arrived at local dealerships
Read more on ಟೊಯೋಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+