Volkswagen Tiguan: ಹೊಸ ನವೀಕರಣಗಳೊಂದಿಗೆ ಆಕರ್ಷಕವಾದ ಫೋಕ್ಸ್‌ವ್ಯಾಗನ್ ಎಸ್‍ಯುವಿ ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ 2023ರ ಟಿಗ್ವಾನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿಯ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.34.69 ಲಕ್ಷವಾಗಿದೆ. ಈ ಹೊಸ ಎಸ್‍ಯುವಿಯು ತಂತ್ರಜ್ಞಾನ ಮತ್ತು ಪವರ್‌ಟ್ರೇನ್ ಸೇರಿದಂತೆ ಹಲವಾರು ನವೀಕರಣಗಳನ್ನು ಪಡೆದುಕೊಂಡಿವೆ.
ಫೋಕ್ಸ್‌ವ್ಯಾಗನ್ ಪ್ರಕಾರ, ನವೀಕರಿಸಿದ 2.0-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (2.0 TSI) ಈಗ ಶೇಕಡಾ 7 ರಷ್ಟು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ. ಈ ಎಸ್‍ಯುವಿಯು 13.54 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಇತ್ತೀಚಿನ BS6 ಹಂತ 2 ಹೊರಸೂಸುವಿಕೆ ನಿಯಮಗಳು ಮತ್ತು RDE ಮಾನದಂಡಗಳಿಗೆ ಅನುಗುಣವಾಗಿ ಪವರ್‌ಟ್ರೇನ್ ಅನ್ನು ನವೀಕರಿಸಲಾಗಿದೆ.

ಈ ಬದಲಾವಣೆಗಳ ಹೊರತಾಗಿಯೂ, ಈ ಎಂಜಿನ್ 187.7bhp ಪವರ್ ಮತ್ತು 320Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ನೊಂದಿಗೆ ಸ್ಪೀಡ್ DSG ಗೇರ್ ಬಾಕ್ಸ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಕಳುಹಿಸಲಾಗುತ್ತದೆ. ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ನವೀಕರಿಸಿದ ವೋಕ್ಸ್‌ವ್ಯಾಗನ್ ಟಿಗ್ವಾನ್ ಹಿಂದೆಂದಿಗಿಂತಲೂ ಆಕರ್ಷಕವಾಗಿದೆ.
ಈ ಎಸ್‍ಯುವಿಯು ವಿಶಾಲವಾದ ಮುಂಭಾಗದ ಗ್ರಿಲ್, ಗಾಢವಾದ LED ಮ್ಯಾಟ್ರಿಕ್ಸ್ ಹೆಡ್‌ಲೈಟ್‌ಗಳು, ನವೀಕರಿಸಿದ ಗ್ರಾಫಿಕ್ಸ್‌ನೊಂದಿಗೆ ನವೀಕರಿಸಿದ LED ಟೈಲ್‌ಲ್ಯಾಂಪ್‌ಗಳು ಮತ್ತು ಹೆಚ್ಚಿನವುಗಳಂತಹ ಕೆಲವು ಗಮನಾರ್ಹ ಬದಲಾವಣೆಗಳಿವೆ. ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿಯ ಒಳಭಾಗದಲ್ಲಿ, ಈಗ ಡ್ಯುಯಲ್-ಟೋನ್ ಸ್ಟಾರ್ಮ್ ಗ್ರೇ ಒಳಾಂಗಣ ಮತ್ತು ವೈರ್‌ಲೆಸ್ ಮೊಬೈಲ್ ಚಾರ್ಜರ್ ಮತ್ತು 10-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿವೆ.
ಇದರೊಂದಿಗೆ ಗೆಸ್ಚರ್ ಕಂಟ್ರೋಲ್‌ನೊಂದಿಗೆ 8-ಇಂಚಿನ ಇನ್ಫೋಟೈನ್‌ಮೆಂಟ್ ಯುನಿಟ್, ಪನರೊಮಿಕ್ ಸನ್‌ರೂಫ್ ಮತ್ತು ಪಾರ್ಕಿಂಗ್ ಅಸಿಸ್ಟ್ ನಂತಹ ಫೀಚರ್ಸ್ ಗಳೊಂದಿಗೆ ಬರುತ್ತದೆ. ಈ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿಯ ಸುರಕ್ಷತೆಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದೆ. ಈ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, ಹಿಂಭಾಗದ ಸೀಟ್ ಬೆಲ್ಟ್ ರಿಮೈಂಡರ್, ಎಬಿಎಸ್, ಇಎಸ್‌ಸಿ ಮತ್ತು ಆಂಟಿ-ಸ್ಲಿಪ್ ರೆಗ್ಯುಲೇಷನ್ (ಎಎಸ್‌ಆರ್) ಹೊಂದಿದೆ.
ಇದರೊಂದಿಗೆ ಇಡಿಟಿಸಿ (ಎಂಜಿನ್ ಡ್ರ್ಯಾಗ್ ಟಾರ್ಕ್ ಕಂಟ್ರೋಲ್), ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಆಕ್ಟಿವ್ ಟಿಪಿಎಂಎಸ್, ಮುಂತಾದ ಸುರಕ್ಷತೆ ಫೀಚರ್ಸ್ ಗಳನ್ನು ನೀಡಿದೆ. ಇನ್ನು 3-ಪಾಯಿಂಟ್ ಸೀಟ್ ಬೆಲ್ಟ್‌ಗಳು, ISOFIX ಪಾಯಿಂಟ್‌ಗಳು ಮತ್ತು ಡ್ರೈವರ್ ಅಲರ್ಟ್ ಸಿಸ್ಟಂಗಳನ್ನು ಹೊಂದಿವೆ. ನವೀಕರಿಸಿದ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‌ಯುವಿಯ ಹೆಚ್ಚುವರಿ ವೈಶಿಷ್ಟ್ಯಗಳು ಭಾರತೀಯ ಮಾರುಕಟ್ಟೆಯಲ್ಲಿ ಸಂಭಾವ್ಯ ಖರೀದಿದಾರರ ಗಮನವನ್ನು ಸೆಳೆಯುವ ಸಾಧ್ಯತೆಯಿದೆ
ಪ್ರಸ್ತುತ, ಫೋಕ್ಸ್‌ವ್ಯಾಗನ್ ಇಂಡಿಯಾ ನವೀಕರಿಸಿದ ಟಿಗ್ವಾಮ್ ಎಸ್‍ಯುವಿಯು ನೈಟ್‌ಶೇಡ್ ಬ್ಲೂ, ಓರಿಕ್ಸ್ ವೈಟ್ ವಿತ್ ಪರ್ಲ್ ಎಫೆಕ್ಟ್, ಡೀಪ್ ಬ್ಲ್ಯಾಕ್, ಡಾಲ್ಫಿನ್ ಗ್ರೇ ಮತ್ತು ರಿಫ್ಲೆಕ್ಸ್ ಸಿಲ್ವರ್ ಸೇರಿದಂತೆ 5 ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರಲಿದೆ. ಈ ಸುಧಾರಿತ ಗಮನವು ಭಾರತದಲ್ಲಿ ಜರ್ಮನ್ ವಾಹನ ತಯಾರಕರ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತೇವೆ. ಇದರೊಂದಿಗೆ ಪ್ರಮುಖ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications








