530 ಕಿ.ಮೀ ರೇಂಜ್ ನೀಡುವ ವೋಲ್ವೋ C40 ರೀಚಾರ್ಜ್ ವಿತರಣೆ ಪ್ರಾರಂಭ

ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾಗಿರುವ ವೋಲ್ವೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ವೋಲ್ವೋ C40 ರೀಚಾರ್ಜ್ (Volvo C40 Recharge) ಎಲೆಕ್ಟ್ರಿಕ್ ಕೂಪೆ ಎಸ್‍ಯುವಿ ಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ವೋಲ್ವೋ C40 ರೀಚಾರ್ಜ್ ಎಸ್‍ಯುವಿಯ ಆರಂಭಿಕ ಬೆಲೆಯು ರೂ.61.25 ಲಕ್ಷವಾಗಿದೆ.

ಇದೀಗ ವೋಲ್ವೋ ಕಂಪನಿಯು ಹೊಸ ವೋಲ್ವೋ C40 ಎಸ್‍ಯುವಿಯ ವಿತರಣೆಯನ್ನು ಪ್ರಾರಂಭಿಸಿದೆ. ಹೊಸ ವೋಲ್ವೋ C40 ಎಲೆಕ್ಟ್ರಿಕ್ ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರು ರೂ.1 ಲಕ್ಷ ಪಾವತಿಸಿ ವೋಲ್ವೋ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ EV6 ಎಲೆಕ್ಟ್ರಿಕ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ.

Volvo C40 Recharge

ಹೊಸ ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರು CMA ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಬಹುನಿರೀಕ್ಷಿತ ಸ್ವೀಡಿಷ್ ಕಾರು ತಯಾರಕರು ಮತ್ತು ಅದರ ಚೀನೀ ಮೂಲ ಸಂಸ್ಥೆ ಗೀಲಿ ಎಲೆಕ್ಟ್ರಿಕ್ ಕಾರುಗಳಿಗಾಗಿ ಅಭಿವೃದ್ಧಿಪಡಿಸಿದ್ದಾರೆ. ಭಾರತಕ್ಕೆ, C40 ರೀಚಾರ್ಜ್ ಅನ್ನು ಡ್ಯುಯಲ್-ಮೋಟರ್ ಆಲ್-ವೀಲ್ ಡ್ರೈವ್ ಸೆಟಪ್ ಒಳಗೊಂಡಿದೆ. ಈ ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರು 78kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ.

ಈ ವೋಲ್ವೋ C40 ರೀಚಾರ್ಜ್ ಡ್ಯುಯಲ್-ಎಲೆಕ್ಟ್ರಿಕ್ ಮೋಟಾರ್ ಸೆಟಪ್ ನೊಂದಿಗೆ 405 bhp ಮತ್ತು 660 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವೋಲ್ವೋ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 530 ಕಿಮೀ ವರೆಗಿನ ರೇಂಜ್ ಅನ್ನು ನೀಡುತ್ತದೆ. ಇನ್ನು ಈ ಎಲೆಕ್ಟ್ರಿಕ್ ಕಾರು 150kW DC ಫಾಸ್ಟ್ ಚಾರ್ಜರ್ ಸಹಾಯದಿಂದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಕೇವಲ 27 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಈ ಹೊಸ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರು 4.7 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನ ಟಾಪ್ ಸ್ಪೀಡ್ 180 ಕಿ.ಮೀ ಆಗಿದೆ. ಹೊಸ ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಬಗ್ಗೆ ಹೇಳುವುದಾದರೆ, ಈ ಕಾರಿನ ವಿನ್ಯಾಸವು ಅದರ ಥಾರ್ಸ್ ಹ್ಯಾಮರ್ ಹೆಡ್‌ಲೈಟ್‌ಗಳೊಂದಿಗೆ ಸ್ಪಷ್ಟವಾಗಿ ವೋಲ್ವೋ ಆಗಿದೆ.

ಆದರೂ ಬಾನೆಟ್ ಅಡಿಯಲ್ಲಿ ಸೈಲೆಂಟ್ ಪವರ್‌ಟ್ರೇನ್ (ಎಲೆಕ್ಟ್ರಿಕ್) ಎಂದು ತಿಳಿಯಲು ಗ್ರಿಲ್ ಅನ್ನು ಮುಚ್ಚಲಾಗಿದೆ. ಈ ಕಾರಿನ ಟ್ವಿನ್ ಮಿನಿ ಸ್ಪಾಯ್ಲರ್‌ಗಳಂತೆ ರೂಫ್ ರೈಲ್ ವಿನ್ಯಾಸಕ್ಕೆ ಸ್ವಲ್ಪ ಸ್ಪೋರ್ಟಿನೆಸ್ ಆಗಿದೆ. ಹೊಸ ಎಲೆಕ್ಟ್ರಿಕ್ ಕಾರಿನ ರೂಫ್ ರೇಕ್ ಮಾಡಿದ ಹಿಂಬದಿಯ ವಿಂಡ್‌ಸ್ಕ್ರೀನ್ ಮತ್ತು ಸ್ಪಾಯ್ಲರ್ ಅನ್ನು ವಿಂಡೋದಲ್ಲಿ ಕೊನೆಗೊಳ್ಳುತ್ತದೆ. C40 ರೀಚಾರ್ಜ್ 19-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಈ ಹೊಸ ವೋಲ್ವೋ ಎಲೆಕ್ಟ್ರಿಕ್ ಕಾರಿನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ 12.3-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಜೊತೆಗೆ ಆಂಡ್ರಾಯ್ಡ್ ಆಧಾರಿತ ಗೂಗಲ್ ಸಾಫ್ಟ್‌ವೇರ್ ಸೆಟಪ್ ಅನ್ನು ಒಳಗೊಂಡಿದೆ. ಇದರೊಂದಿಗೆ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಹಾರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್‌ಗೆ ಕನೆಕ್ಟಿ ಆಗಿದೆ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಸಹ ಸಂಪೂರ್ಟ್ ಮಾಡುತ್ತದೆ.

ವೋಲ್ವೋ C40 ರೀಚಾರ್ಜ್ ಅನ್ನು ಎರಡು ಆಂತರಿಕ ಥೀಮ್‌ಗಳೊಂದಿಗೆ ಕೂಡಿದೆ. ಈ ಎಲೆಕ್ಟ್ರಿಕ್ ಕಾರು ಸಿರ್ಸ್ಟಲ್ ವೈಟ್, ಓನಿಕ್ಸ್ ಬ್ಲಾಕ್, ಫ್ಯೂಷನ್ ರೆಡ್, ಕ್ಲೌಡ್ ಬ್ಲೂ, ಫ್ಜೋರ್ಡ್ ಬ್ಲೂ ಮತ್ತು ಸೇಜ್ ಗ್ರೀನ್ ಎಂಬ ಆರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದೆ.

ಈ ವೋಲ್ವೋ C40 ರೀಚಾರ್ಜ್ ಕಾರಿನಲ್ಲಿ ಸುರಕ್ಷತೆಗಾಗಿ, ಅನೇಕ ಏರ್‌ಬ್ಯಾಗ್‌ಗಳು, ಮುಂಭಾಗದ ಸೀಟುಗಳಿಗೆ ವಿಪ್ಲ್ಯಾಶ್ ರಕ್ಷಣೆ, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ADAS ಫೀಚರ್ಸ್ ಗಳನ್ನು ಒಳಗೊಂಡಂತೆ ಸುರಕ್ಷತಾ ತಂತ್ರಜ್ಞಾನದಿಂದ ತುಂಬಿರುತ್ತದೆ.

More from DriveSpark

Article Published On: Thursday, September 14, 2023, 16:29 [IST]
English summary
New volvo c40 recharge electric suv delivery started in india details
Read more on ವೊಲ್ವೊ volvo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+