ಸೂಪರ್ ರೇಂಜ್, ಆಕರ್ಷಕ ವಿನ್ಯಾಸದ ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರಿನ ರಿವ್ಯೂ ವೀಡಿಯೊ ನೋಡಿ

ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಈ ನಡುವೆ ಜನಪ್ರಿಯ ವೋಲ್ವೋ (Volvo) ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾಗಿರುವ ವೋಲ್ವೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ವೋಲ್ವೋ ಕಂಪನಿಯು ತನ್ನ ಹೊಸ ವೋಲ್ವೋ C40 ರೀಚಾರ್ಜ್ (Volvo C40 Recharge) ಎಲೆಕ್ಟ್ರಿಕ್ ಕೂಪೆ ಎಸ್‍ಯುವಿ ಮಾದರಿಯನ್ನು ತರುತ್ತಿದೆ. ಈ ಹೊಸ ವೋಲ್ವೋ C40 ರೀಚಾರ್ಜ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ನಾವು ಲೋನಾವಾಲಾದಲ್ಲಿ ಈ ಎಲೆಕ್ಟ್ರಿಕ್ ಕಾರನ್ನು ಡ್ರೈವ್ ಮಾಡಿದ್ದೇವೆ. ನಮ್ಮ ಡ್ರೈವಿಂಗ್ ಅನುಭವ ಮತ್ತು ಕಾರಿನ ಕುರಿತು ಸಂಪೂರ್ಣ ಮಾಹಿತಿ ನೋಡಲು ವೀಡಿಯೊವನ್ನು ವೀಕ್ಷಿಸಿ.

ಈ ಹೊಸ ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರು ದೊಡ್ಡ 78kWh ಬ್ಯಾಟರಿ ಪ್ಯಾಕ್‌ ಅನ್ನು ಪಡೆಯುತ್ತದೆ, ಇದು ಸಿಂಗಲ್ ಚಾರ್ಜ್‌ನಲ್ಲಿ 530 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಆನ್-ಬೋರ್ಡ್ 11kW ಚಾರ್ಜರ್ ಬ್ಯಾಟರಿ ಪ್ಯಾಕ್ ಅನ್ನು ಸಾಮರ್ಥ್ಯಕ್ಕೆ ಚಾರ್ಜ್ ಮಾಡಲು 6-7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ 150kW DC ಚಾರ್ಜರ್‌ನೊಂದಿಗೆ 10-80 ಪ್ರತಿಶತದಿಂದ ಫಾಸ್ಟ್ ಚಾರ್ಜಿಂಗ್ 27 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಇದರ ದೊಡ್ಡ ಬ್ಯಾಟರಿ ಪ್ಯಾಕ್ 402bhp ಮತ್ತು 660Nm ಟಾಋಕ್ ಅನ್ನು ಉತ್ಪಾದಿಸುವ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು (ಪ್ರತಿ ಆಕ್ಸಲ್‌ನಲ್ಲಿ ಒಂದು) ಚಾಲನೆ ಮಾಡುತ್ತದೆ. ಈ ಎಲೆಕ್ಟ್ರಿಕ್ ಕಾರು 4.7 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಲೆಕ್ಟ್ರಿಕ್ ಮಾದರಿಯು 18 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Volvo C40 Recharge

ಈ ಹೊಸ ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರು 4,440mm ಉದ್ದ, 1,873mm ಅಗಲ ಮತ್ತು 1,591mm ಎತ್ತರವನ್ನು ಹೊಂದಿದೆ. ಇನ್ನು ಎಲೆಕ್ಟ್ರಿಕ್ ಕಾರು 2,702mm ಉದ್ದದ ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 19-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಇದು 171mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

More from DriveSpark

Article Published On: Saturday, August 26, 2023, 11:42 [IST]
English summary
New volvo c40 recharge video review driving impressions specs features
Read more on ವೊಲ್ವೊ volvo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+