Maruti Suzuki Cars: ಕಡಿಮೆ ಬೆಲೆಯ ಈ ಮಾರುತಿ ಸುಜುಕಿ ಕಾರುಗಳನ್ನು ಶೋರೂಂಗೆ ಹೋಗಿ, ನೇರ ಮನೆಗೆ ತನ್ನಿ!
ದೇಶದಲ್ಲಿ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಖ್ಯಾತಿಗಳಿಸಿದೆ. ಸದ್ಯ, ಕಂಪನಿಯ ಕಾರುಗಳನ್ನು ಗ್ರಾಹಕರು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆಗೆ ಮೂರರಿಂದ ನಾಲ್ಕು ತಿಂಗಳು ಕಾಯಬೇಕು. ಆದರೆ, ಈ ಕಾರುಗಳನ್ನು ಶೋರೂಂಗೆ ಹೋಗಿ, ನೇರ ಮನೆಗೆ ತರಬಹುದು.
ಮಾರುತಿ ಸುಜುಕಿ, ದೆಹಲಿಯಲ್ಲಿ ಅರೆನಾ ಡೀಲರ್ ಮೂಲಕ ಮಾರಾಟ ಮಾಡುವ ಸೆಲೆರಿಯೊ, ವ್ಯಾಗನ್ ಆರ್, ಸ್ವಿಫ್ಟ್ ಮತ್ತು ಎಸ್ ಪ್ರೆಸ್ಸೊ ಕಾರುಗಳು ಯಾವುದೇ ಕಾಯುವಿಕೆ ಅವಧಿಯನ್ನು ಹೊಂದಿಲ್ಲ. ಅದೇ ರೀತಿಯ ಪರಿಸ್ಥಿತಿ ಬೇರೆ ರಾಜ್ಯಗಳಲ್ಲೂ ಇದ್ದು, ಬಹುತೇಕ ಈ ಕಾರುಗಳ ಒಂದೇ ದಿನದಲ್ಲಿ ವಿತರಣೆಯಾಗಿ ಬಿಡುತ್ತವೆ. ಇವು, ಅತ್ಯಂತ ಕಡಿಮೆ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಖರೀದಿಗೆ ದೊರೆಯುವುದರಿಂದ ಹಲವಾರು ತಮ್ಮ ಮೆಚ್ಚಿನ ವಾಹನವಾಗಿ ಆಯ್ದುಕೊಳ್ಳುತ್ತಿದ್ದಾರೆ.

ಮೊದಲಿಗೆ ಸೆಲೆರಿಯೊ ಕಾರಿನ ಬಗ್ಗೆ ತಿಳಿಯೋಣ. ಇದು, ರೂ.5.37 ಲಕ್ಷದಿಂದ ರೂ.7.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 1-ಲೀಟರ್ ಪೆಟ್ರೋಲ್ ಎಂಜಿನ್ 67 PS ಗರಿಷ್ಠ ಪವರ್ ಹಾಗೂ 89 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಮ್ಯಾನುವಲ್/ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
ಸಿಎನ್‌ಜಿ ಕಿಟ್ ಪಡೆದಿರುವ ಕಾರು ಕೊಂಚ ಕಡಿಮೆ ಪವರ್ ಉತ್ಪಾದಿಸಲಿದ್ದು, 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮಾತ್ರ ಹೊಂದಿದೆ. ಮಾರುತಿ ಸುಜುಕಿ ಸೆಲೆರಿಯೊ ರೂಪಾಂತರಗಳಿಗೆ ಅನುಗುಣವಾಗಿ 24.97 - 26.68 kmpl ಮೈಲೇಜ್ ನೀಡುತ್ತದೆ. ಜೊತೆಗೆ ಖರೀದಿದಾರರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಖ್ಯವಾಗಿ, 7 ಇಂಚಿನ ಟಚ್‌ಸ್ಕ್ರೀನ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಅನ್ನು ಪಡೆದಿದೆ.

ಈ ಪಟ್ಟಿಯಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್ ರೂ.5.99 ಲಕ್ಷದಿಂದ ರೂ.9.03 ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇದು, 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 90 PS ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡ್ ಮ್ಯಾನ್ಯುವಲ್ ಅಥವಾ 5 ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.
ಸಿಎನ್‌ಜಿ ಕಿಟ್ ಹೊಂದಿರುವ ಸ್ವಿಫ್ಟ್ ಅದೇ ಎಂಜಿನ್ ಪಡೆದಿದ್ದು, 77.5 PS ಗರಿಷ್ಠ ಪವರ್ ಹಾಗೂ 98.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 5 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ, 22.38 - 22.56 kmpl ಮೈಲೇಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯೆಲ್ ಫ್ರಂಟ್ ಏರ್ ಬಾಗ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಮಾರುತಿ ಸುಜುಕಿ ವ್ಯಾಗನ್ ಆರ್ ರೂ.5.54 ಲಕ್ಷದಿಂದ ರೂ.7.42 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಇದು, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, ವೇರಿಯೆಂಟ್ಸ್ ಗೆ ತಕ್ಕಂತೆ 23.56 - 25.19 kmpl ಮೈಲೇಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 4 ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೋ, ಫೋನ್ ಕಂಟ್ರೊಲ್ಸ್ ಸೇರಿದಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿಯ ಅಗ್ಗದ ಬೆಲೆಯ ಕಾರು, ಎಸ್ ಪ್ರೆಸ್ಸೊ ರೂ.4.26 ಲಕ್ಷದಿಂದ ರೂ.6.12 ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇದು ಕೂಡ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 24.12 - 25.3 kmpl ಮೈಲೇಜ್ ಕೊಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು, ಮಾರುತಿ ಸುಜುಕಿಯ ಈ ಸೆಲೆರಿಯೊ, ವ್ಯಾಗನ್ ಆರ್, ಸ್ವಿಫ್ಟ್ ಮತ್ತು ಎಸ್ ಪ್ರೆಸ್ಸೊ ಕಾರುಗಳು ಕಡಿಮೆ ಬೆಲೆಯನ್ನು ಹೊಂದಿವೆ. ಜೊತೆಗೆ ಕಾರ್ಯಕ್ಷಮತೆಯು ಉತ್ತಮವಾಗಿರುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಕಂಪನಿಯು ಈ ಮಾದರಿಗಳಲ್ಲಿ ಮುಂದಿನ ತಲೆಮಾರಿನ ಕಾರುಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದ್ದು, ಅವುಗಳಿಗೆ ಗ್ರಾಹಕರಿಂದ ಇದಕ್ಕಿಂದ ಉತ್ತಮ ಪ್ರತಿಕ್ರಿಯೆ ಬಂದರೂ ಆಶ್ಚರ್ಯವಿಲ್ಲ.


Click it and Unblock the Notifications