Jimny: 12 ಲಕ್ಷ ರೂಪಾಯಿಯ ಹೊಸ ಮಾರುತಿ ಸುಜುಕಿ ಜಿಮ್ನಿ, 4 ಲಕ್ಷ ಕಡಿಮೆ ಬೆಲೆಗೆ ಮಾರಾಟ

ಭಾರತದಲ್ಲಿ ದೊಡ್ಡಮಟ್ಟದಲ್ಲಿ ಬುಕ್ಕಿಂಗ್ ಪಡೆಕೊಳ್ಳುವ ಮೂಲಕ ಸಾಕಷ್ಟು ಕ್ರೇಜ್ ಹುಟ್ಟುಹಾಕಿದ್ದ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದ ಈ ಆಫ್-ರೋಡ್ ಎಸ್‌ಯುವಿ, ಬೆಲೆ ವಿಚಾರದಲ್ಲಿ ಮಾತ್ರ ಸಮೀಪದ ಪ್ರತಿಸ್ಪರ್ಧಿ 'ಮಹೀಂದ್ರಾ ಥಾರ್'ಗಿಂತ 2 ಲಕ್ಷ ಹೆಚ್ಚುವರಿ ದರವನ್ನು ಹೊಂದಿದೆ.

ಬೆಲೆ ವಿಚಾರವಾಗಿ ಜಿಮ್ನಿ ಮತ್ತೆ ಮುನ್ನೆಲೆಗೆ ಬಂದಿದ್ದು, ಸದ್ಯ, ಅದುವೇ ಹಾಟ್ ಟಾಪಿಕ್ ಆಗಿದೆ. ಜಪಾನ್ ವಾಹನ ಮಾರುಕಟ್ಟೆಯಲ್ಲಿ ಈ ಎಸ್‌ಯುವಿ ಭಾರತದ ದರಕ್ಕಿಂತ ಸರಿ ಸುಮಾರು ರೂ.4.57 ಲಕ್ಷ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ನಮ್ಮ ದೇಶದ ಬೆಲೆಗೆ ಹೋಲಿಸಿದರೆ, ಅಲ್ಲಿನ ದರ ತುಂಬಾ ಕಡಿಮೆ ಇರಲು ಕಾರಣವೇನು ಎಂಬುದರ ಬಗ್ಗೆ ನಿಮ್ಮಲ್ಲಿಯೂ ಗೊಂದಲವಿರಬಹುದು. ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿದ್ದೇವೆ.

Jimny: 12 ಲಕ್ಷ ರೂಪಾಯಿಯ ಹೊಸ ಮಾರುತಿ ಸುಜುಕಿ ಜಿಮ್ನಿ, 4 ಲಕ್ಷ ಕಡಿಮೆ ಬೆಲೆಗೆ ಮಾರಾಟ

ಜಪಾನ್ ದೇಶದಲ್ಲಿ ಸುಜುಕಿ ಕಂಪನಿ ಮಾರಾಟ ಮಾಡಿವ ಜಿಮ್ನಿಯನ್ನು ಅಲ್ಲಿನ ಶಿಜುವೊಕಾ ಪ್ರಿಫೆಕ್ಚರ್‌ನಲ್ಲಿರುವ ಕೊಸೈ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ. ಭಾರತದ ಮಾರುಕಟ್ಟೆಯಲ್ಲಿ ಸೇಲ್ ಮಾಡುವ ಜಿಮ್ನಿಯನ್ನು ಗುರುಗ್ರಾಮದ ಪ್ಯಾಕ್ಟರಿಯಲ್ಲಿ ಉತ್ಪಾದಿಸಲಾಗುತ್ತದೆ. ಈ ಕಾರಣಕ್ಕೆ ಇವೆರೆಡು ದೇಶಗಳ ನಡುವೆ ಜಿಮ್ನಿ ಎಸ್‌ಯುವಿಯನ್ನು ಆಮದು ಅಥವಾ ರಫ್ತು ಮಾಡುವುದಿಲ್ಲ. ಜೊತೆಗೆ ರಾಷ್ಟ್ರಗಳ ತೆರಿಗೆ ಆಧರಿಸಿಯು ಬೆಲೆಗಳು ಹೆಚ್ಚು ಕಡಿಮೆಯಾಗುತ್ತದೆ.

ನಿಮಗೆ ಗೊತ್ತಿರಲಿ.. ಭಾರತದಿಂದ ಆಸ್ಟ್ರೇಲಿಯಾಕ್ಕೆ ಮಹೀಂದ್ರಾ ಕಂಪನಿ 'XUV700'ನ್ನು ರಫ್ತು ಮಾಡುತ್ತದೆ. ಆದರೆ, ನಮ್ಮ ದೇಶದ ಬೆಲೆಗೆ ಹೋಲಿಸಿದರೆ, ಅಲ್ಲಿನ ದರ ಸುಮಾರು ರೂ.1.8 ಲಕ್ಷ ಕಮ್ಮಿಯಿದೆ. ಸುಜುಕಿ ಜಪಾನ್ ಮಾರುಕಟ್ಟೆಯಲ್ಲಿ 3 ಡೋರ್ ಜಿಮ್ನಿಯನ್ನು ಮಾರಾಟ ಮಾಡಿದರೇ, ಭಾರತದಲ್ಲಿ 5 ಡೋರ್ ಜಿಮ್ನಿಯನ್ನು ಸೇಲ್ ಮಾಡುತ್ತದೆ. ಇದು ಕೂಡ ಬೆಲೆಯಲ್ಲಿ ವ್ಯತ್ಯಾಸವಾಗಲು ಕಾರಣವಿರಬಹುದು.

Jimny: 12 ಲಕ್ಷ ರೂಪಾಯಿಯ ಹೊಸ ಮಾರುತಿ ಸುಜುಕಿ ಜಿಮ್ನಿ, 4 ಲಕ್ಷ ಕಡಿಮೆ ಬೆಲೆಗೆ ಮಾರಾಟ

ಜಪಾನ್ ಹಾಗೂ ಭಾರತದಲ್ಲಿ ಮಾರಾಟವಾಗುವ ಜಿಮ್ನಿ ಎಸ್‌ಯುವಿಗಳ ನಿಖರವಾದ ಬೆಲೆಯಲ್ಲಿ ವಿಶ್ಲೇಷಿಸುವುದಾದರೆ, ಜಪಾನ್ ದೇಶದಲ್ಲಿ ಸೇಲ್ ಆಗುವ ಬೇಸ್ ವೇರಿಯೆಂಟ್ ಜಿಮ್ನಿ ರೂ.8.17 ಲಕ್ಷ (JPY 1,414,000) ಬೆಲೆಯನ್ನು ಹೊಂದಿದೆ. ತೆರಿಗೆ ಸೇರಿ ಅಲ್ಲಿನ ಗ್ರಾಹಕರಿಗೆ ರೂ.9.99 ಲಕ್ಷ (JPY 1,730,000) ಬೆಲೆಗೆ ಖರೀದಿಗೆ ಸಿಗುತ್ತದೆ. ಭಾರತದಲ್ಲಿ ಆರಂಭಿಕ ಮಾದರಿ ರೂ.12.74 ಲಕ್ಷ ದರವನ್ನು ಹೊಂದಿದ್ದು, ಎಲ್ಲ ಟ್ಯಾಕ್ಸ್ ಒಳಗೊಂಡು ರೂ.14.89 ಲಕ್ಷ ಬೆಲೆಗೆ ಖರೀದಿಗೆ ಸಿಗುತ್ತದೆ.

ಇದನ್ನು ಗಮನಿಸದಾಗ ಭಾರತ ಹಾಗೂ ಜಪಾನ್ ಜಿಮ್ನಿ ದರದಲ್ಲಿ ರೂ.4.87 ಲಕ್ಷ ವ್ಯತ್ಯಾಸವಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಮಾರಾಟವಾಗುವ ಜಿಮ್ನಿ 5 ಡೋರ್ ಎಸ್‌ಯುವಿಗಿಂತ ಜಪಾನ್ ದೇಶದಲ್ಲಿ ಸೇಲ್ ಆಗುವ ಜಿಮ್ನಿ 3 ಡೋರ್ 'ಸುಜುಕಿ ಸೇಫ್ಟಿ ಸಪೋರ್ಟ್' ವೈಶಿಷ್ಟ್ಯವನ್ನು ಹೆಚ್ಚುವರಿಯಾಗಿ ಪಡೆದಿದ್ದು, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

ಜೊತೆಗೆ ಜಿಮ್ನಿ 3 ಡೋರ್ ಅಲ್ಲಿ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಬೇಸ್ ವೇರಿಯೆಂಟ್ XG, ಮಿಡ್ ವೇರಿಯೆಂಟ್ XL ಹಾಗೂ ಟಾಪ್ ಎಂಡ್ ವೇರಿಯೆಂಟ್ XC. ಈ ಜಿಮ್ನಿಯಲ್ಲಿ 0.65L (658 ಸಿಸಿ) 3- ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಬಳಕೆ ಮಾಡಲಾಗಿದ್ದು, 64 PS ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

5 ಸ್ವೀಡ್ ಮ್ಯಾನುವಲ್/ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದ್ದು, 17.5 km/l ಮೈಲೇಜ್ ನೀಡುತ್ತದೆ. ಭಾರತದ ಜಿಮ್ನಿ 5 ಡೋರ್ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಇದು 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 16.94 km/l ಮೈಲೇಜ್ ನೀಡುತ್ತದೆ. 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

Article Published On: Friday, June 23, 2023, 12:40 [IST]
English summary
Off road suv jimny costs rs 4 87 lakh less japan compared india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+