ಉತ್ಪಾದನೆಯಲ್ಲಿ ಟಾಟಾವನ್ನು ಹಿಂದಿಕ್ಕಿ 1,000ನೇ ಎಲೆಕ್ಟ್ರಿಕ್ ಬಸ್ ಪೂರೈಸಿದ PMI
ಭಾರತದಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ತಂದು ದೇಶವನ್ನು ಮಾಲಿನ್ಯ ರಹಿತವನ್ನಾಗಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಇದರ ಭಾಗವಾಗಿ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಕಂಪನಿಯಾದ ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಇಂದು ತನ್ನ 1,000 ನೇ ಎಲೆಕ್ಟ್ರಿಕ್ ಬಸ್‌ನ ವಿತರಣೆಯನ್ನು ಘೋಷಿಸಿತು. PMI ಈ ಸಾಧನೆ ಮಾಡಿದ ದೇಶದ ಮೊದಲ ಇ-ಬಸ್ ಕಂಪನಿಯಾಗಿದೆ.
ಸದ್ಯ ಎಲೆಕ್ಟ್ರಿಕ್ ವಾಹನಗಳ ತಯಾರಿಯಲ್ಲಿ ಈ ಕಂಪನಿಯು ಮುನ್ನುಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ವಾಹನಗಳನ್ನು ಬಳಕೆಗೆ ತರುವ ಮೂಲಕ ಶೀಘ್ರದಲ್ಲೇ ಡೀಸಲ್ ಬಸ್‌ಗಳ ಸ್ಥಾನವನ್ನು ಆಕ್ರಮಿಸಲಿದೆ. ಈಗ FAME II ಯೋಜನೆಯ ಅಡಿಯಲ್ಲಿ ವಿತರಿಸಲಾದ, PMI ಯ 1,000 ನೇ ಎಲೆಕ್ಟ್ರಿಕ್ ಬಸ್‌ಗೆ ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಡಾ.ಮಹೇಂದ್ರನಾಥ್ ಪಾಂಡೆ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಕ್ರಿಶನ್ ಪಾಲ್ ಗುರ್ಜರ್ ಚಾಲನೆ ನೀಡಿದರು.

PMI ಎಲೆಕ್ಟ್ರೋ ಮೊಬಿಲಿಟಿಯ 1,000 ನೇ ಎಲೆಕ್ಟ್ರಿಕ್ ಬಸ್, ಉತ್ತರ ಪ್ರದೇಶದ ಸಾರಿಗೆ ನಿರ್ದೇಶನಾಲಯಕ್ಕೆ ತಲುಪಿಸಲಾಗಿದೆ, ಭಾರತದಲ್ಲಿ ಕಂಪನಿಯ ಉಪಸ್ಥಿತಿಯನ್ನು ಬಲಪಡಿಸುತ್ತದೆ. ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಸರ್ಕಾರದ ಗುರಿಗೆ ಗಣನೀಯ ಕೊಡುಗೆ ನೀಡುತ್ತದೆ. ಇದರೊಂದಿಗೆ, ಎಲೆಕ್ಟ್ರಿಕ್ ಬಸ್ ವಿಭಾಗದಲ್ಲಿ PMI ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ. ಅಲ್ಲದೇ ದೇಶವು ಇಂಧನಗಳ ಮೇಲೆ ಅವಲಂಭನೆಯಾಗಿರುವುದನ್ನು ಕಡಿಮೆ ಮಾಡಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿದೆ.
3.4 ಲಕ್ಷ ಟನ್ CO2 ಹೊರಸೂಸುವಿಕೆ ಕಡಿಮೆಯಾಗಲಿ
ಕಂಪನಿಯ ಪ್ರಕಾರ, ಪ್ರತಿ PMI ಎಲೆಕ್ಟ್ರಿಕ್ ಬಸ್ ಪ್ರತಿ ವರ್ಷ 28,000 ಕೆ.ಜಿ CO2 ಹೊರಸೂಸುವಿಕೆಯನ್ನು ಉಳಿಸುತ್ತದೆ. PMI ಯ 1,000 ಇ-ಬಸ್‌ಗಳು 12 ವರ್ಷಗಳ ಅವಧಿಯಲ್ಲಿ ಸುಮಾರು 3.4 ಲಕ್ಷ ಟನ್‌ಗಳಷ್ಟು CO2 ಹೊರಸೂಸುವಿಕೆಯನ್ನು ಉಳಿಸಬಹುದು. ವಾರ್ಷಿಕವಾಗಿ ಸುಮಾರು 100 ಟನ್‌ಗಳಷ್ಟು ಹಸಿರುಮನೆ ಅನಿಲಗಳನ್ನು ಹೊರಸೂಸುವ ಸಾಂಪ್ರದಾಯಿಕ ಡೀಸೆಲ್-ಚಾಲಿತ ಬಸ್‌ಗೆ ಹೋಲಿಸಿದರೆ ಇದು ಇಂಗಾಲದಲ್ಲಿ ಗಮನಾರ್ಹವಾದ ಕಡಿತವಾಗಿದೆ.
ಪಿಎಂಐ ಎಲೆಕ್ಟ್ರೋ ಮೊಬಿಲಿಟಿಯ ಇ-ಬಸ್‌ಗಳು ದೆಹಲಿ, ಶಿಮ್ಲಾ, ರಾಜ್‌ಕೋಟ್, ಭುವನೇಶ್ವರ್, ಲಕ್ನೋ, ಕೋಲ್ಕತ್ತಾ, ಆಗ್ರಾ, ಮಂಗಳೂರು, ಪ್ರಯಾಗ್‌ರಾಜ್ ಮತ್ತು ಲಡಾಖ್ ಸೇರಿದಂತೆ 26 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಬಸ್‌ಗಳು ಆರ್‌ಟಿಎಂಎಸ್ (ರಿಯಲ್-ಟೈಮ್ ಮಾನಿಟರಿಂಗ್ ಸಿಸ್ಟಮ್) ಮತ್ತು ಸಿಸಿಟಿವಿ ಕ್ಯಾಮೆರಾಗಳಂತಹ ಭದ್ರತಾ ವ್ಯವಸ್ಥೆಗಳನ್ನು ಹೊಂದಿವೆ. ಅಲ್ಲದೇ ಎಲ್ಲವೂ ಎಲೆಕ್ಟ್ರಿಕ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿವೆ.
ಈ ಬಸ್‌ಗಳಲ್ಲಿ ಪ್ರಯಾಣವನ್ನು ಆರಾಮದಾಯಕವಾಗಿಸಲು, ಅವುಗಳಲ್ಲಿ ಏರ್ ಸಸ್ಪೆನ್ಷನ್ ಅನ್ನು ಅಳವಡಿಸಲಾಗಿದೆ, ಇದು ಕೆಟ್ಟ ರಸ್ತೆಗಳಲ್ಲಿಯೂ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಈಗಿನ ಇಂಧನ ಚಾಲಿತ ಬಸ್‌ಗಳಿಗೆ ಹೋಲಿಸಿಕೊಂಡರೆ ಡ್ರೈವರ್‌ಗಳಿಗೆ ಶ್ರಮವಿಲ್ಲದ ಉತ್ತಮ ಚಾಲನಾ ಅನುಭವವನ್ನು ಕೂಡ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಈ ಬಸ್‌ಗೆ ಈಗಾಗಲೇ ಹಲವೆಡೆಯಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಮೇಕ್ ಇನ್ ಇಂಡಿಯಾ ಅಭಿಯಾನದ ಮೂಲಕ PMI ತನ್ನ ವಾಹನಗಳಲ್ಲಿ ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಿದ ಘಟಕಗಳನ್ನು ಬಳಸುತ್ತಿದೆ. ಕಂಪನಿಯು ಹರಿಯಾಣದ ಧರುಹೆರಾದಲ್ಲಿರುವ ತನ್ನ ಘಟಕದಲ್ಲಿ ವಾಹನಗಳನ್ನು ತಯಾರಿಸುತ್ತಿದೆ. ಜೊತೆಗೆ ಮಹಾರಾಷ್ಟ್ರದ ಪುಣೆಯಲ್ಲಿ ತನ್ನ ಹೊಸ ಘಟಕವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ. ಸ್ಥಳೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ, ಕಂಪನಿಯು ಬ್ಯಾಟರಿ ಅಸೆಂಬ್ಲಿ ಘಟಕವನ್ನು ಹೊಂದಿದ್ದು, ಇದನ್ನು ಸಂಪೂರ್ಣವಾಗಿ ಮಹಿಳಾ ಉದ್ಯೋಗಿಗಳು ನಿರ್ವಹಿಸುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








