Mahindra Thar: ಮಹೀಂದ್ರಾ ಥಾರ್ 5-ಡೋರ್ ಪ್ರಾಯೋಗಿಕ ಸಂಚಾರ, ಬಿಡುಗಡೆಗೆ ಹತ್ತಿರ.. ವಿಶೇಷತೆಗಳೇನು?
ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸನಿಹವಾಗಿರುವ ಮಹೀಂದ್ರಾ ಥಾರ್ 5-ಡೋರ್ (Mahindra Thar 5-door) ಎಸ್‌ಯುವಿ ಹಲವು ತಿಂಗಳಿಂದ ಸುದ್ದಿಯಾಗಿಲಿದೆ. ಈಗಾಗಲೇ ಥಾರ್ ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದ್ದು, ಆ ಚಿತ್ರಗಳು ಸಾಕಷ್ಟು ಬಾರಿ ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿವೆ.
ಸದ್ಯ, ಮಹೀಂದ್ರಾ ಥಾರ್ 5-ಡೋರ್ ಎಸ್‌ಯುವಿ ಮತ್ತೊಮ್ಮೆ ಪ್ರಾಯೋಗಿಕ ಓಡಾಟ ನಡೆಸುವಾಗ ಕ್ಯಾಮೆರಾ ಕಣ್ಣಿಗೆ ಬಿದಿದ್ದು, ಈ ಥಾರ್ ಮಲ್ಟಿ-ಸ್ಪೋಕ್ ಅಲಾಯ್ ವೀಲ್ಸ್ ಹೊಂದಿರುವುದನ್ನು ಚಿತ್ರದಲ್ಲಿ ಕಾಣಬಹುದು. ಜೊತೆಗೆ ನವೀನ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್ಸ್ (LED Headlamps) ಹಾಗೂ ವೃತ್ತಾಕಾರದ ಎಲ್ಇಡಿ ಡಿಆರ್‌ಎಲ್ (LED DRLs) ಗಳನ್ನು ಪಡೆದಿರುವುದನ್ನು ನೋಡಬಹುದು.

ಆಫ್-ರೋಡ್ ಎಸ್‌ಯುವಿಯಾಗಿರುವ ಮಹೀಂದ್ರಾ ಥಾರ್ 5-ಡೋರ್ ನ ಒಳಭಾಗದ ಫೋಟೋಗಳು ಡ್ಯಾಶ್‌ಬೋರ್ಡ್ ಲೇಔಟ್, ರೇರ್ ಸೀಟ್ ಬಗ್ಗೆ ಒಂದಷ್ಟು ಮಾಹಿತಿಯನ್ನು ಬಹಿರಂಗಪಡಿಸಿವೆ. ಈ ಥಾರ್, ಆಕರ್ಷಕ ಸನ್‌ರೂಫ್, ದೊಡ್ಡದಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮುಂಭಾಗದ ಪ್ರಯಾಣಿಕರಿಗಾಗಿ ಸೆಂಟರ್ ಆರ್ಮ್‌ರೆಸ್ಟ್, ಹೈಟ್-ಅಡ್ಜಸ್ಟ್ಏಬಲ್ ಸೀಟ್‌ಬೆಲ್ಟ್ ಮತ್ತು ರೇರ್ ಎಸಿ ವೆಂಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.
2024ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಮಹೀಂದ್ರಾ ಥಾರ್ 5-ಡೋರ್, ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ 3-ಡೋರ್ ಥಾರ್ ಎಸ್‌ಯುವಿಯಂತೆ 2.0 - ಲೀಟರ್ ಪೆಟ್ರೋಲ್, 2.2 - ಲೀಟರ್ ಡೀಸೆಲ್ ಎಂಜಿನ್ ಪಡೆದಿರುವ ನೀರಿಕ್ಷೆಯಿದೆ. ಜೊತೆಗೆ ಪರಿಷ್ಕೃತ ಬಂಪರ್ ಹಾಗೂ ಹೊಸ ಬಣ್ಣದ ಆಯ್ಕೆಯನ್ನು ಸಿಗಬಹುದು ಎಂದು ಅಂದಾಜಿಸಲಾಗಿದೆ.

ಮಹೀಂದ್ರಾ ಕಂಪನಿಯು 5-ಡೋರ್ ಥಾರ್‌ಗಾಗಿ 7 ಹೆಸರನ್ನು ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಲ್ಲಿ ನೋಂದಾಯಿಸಿದೆ. ಥಾರ್ ಅರ್ಮಡಾ, ಕಲ್ಟ್, ರೆಕ್ಸ್, ಸವನ್ನಾ, ರೋಕ್ಸ್, ಗ್ಲಾಡಿಯಸ್ ಮತ್ತು ಸೆಂಚುರಿಯನ್ ಹೆಸರುಗಳನ್ನು ರಿಜಿಸ್ಟರ್ ಮಾಡಲಾಗಿದೆ. ಹೊಸ ಥಾರ್ ಎಸ್‌ಯುವಿ ಕೂಡ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ನೀರಿಕ್ಷೆಯಿದ್ದು, ಸೇಫ್ಟಿ ಸಲುವಾಗಿ ADAS (ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ) ತಂತ್ರಜ್ಞಾನವನ್ನು ಪಡೆದುಕೊಳ್ಳಬಹುದು.
3-ಡೋರ್ ಮಹೀಂದ್ರಾ ಥಾರ್ ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು 3 ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.5 - ಲೀಟರ್ ಡೀಸೆಲ್, 2.2 - ಲೀಟರ್ ಡೀಸೆಲ್ ಹಾಗೂ 2.0 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಜೊತೆಗೆ 6 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಈ ಮಹೀಂದ್ರಾ ಥಾರ್ 4WD (ಫೋರ್ ವೀಲ್ ಡ್ರೈವ್), RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದ್ದು, ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ 15.2 kmpl ಮೈಲೇಜ್ ಕೊಡುತ್ತದೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯ ಪಡೆದಿದೆ.
ಸುರಕ್ಷತೆಯ ದೃಷ್ಟಿಯಿಂದ ಮಹೀಂದ್ರಾ ಥಾರ್ ಅತ್ಯುತ್ತಮವಾಗಿದ್ದು, ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್, ಡ್ರೈವರ್ & ಫ್ರಂಟ್ ಪ್ಯಾಸೆಂಜರ್ ಗಾಗಿ ಸೀಟ್ ಬೆಲ್ಟ್ ರಿಮೈಂಡರ್ ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಇವೆ. ಈ ಎಸ್‌ಯುವಿಗೆ ಮಾರುತಿ ಸುಜುಕಿ ಜಿಮ್ನಿ ಪ್ರಬಲ ಪ್ರತಿಸ್ಪರ್ಧಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








