7 ಲಕ್ಷದೊಳಗೆ ಪ್ರೀಮಿಯಂ ಕಾರು.. ಭರ್ಜರಿ ರೀ-ಸೇಲ್ ವ್ಯಾಲ್ಯೂ.. ಭಾರೀ ಡಿಮ್ಯಾಂಡ್
ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿ ಮಾರಾಟವಾಗುವ ಹುಂಡೈ i20, ಅದರ ಪ್ರೀಮಿಯಂ ವೈಶಿಷ್ಟ್ಯಗಳು, ಸ್ಪೋರ್ಟಿ ವಿನ್ಯಾಸ ಮತ್ತು ಎಂಜಿನ್‌ನಿಂದಾಗಿ ಅನೇಕ ಜನರು ಇಷ್ಟಪಟ್ಟಿದ್ದಾರೆ. ಅದರ ವಿಭಾಗದಲ್ಲಿ, ಟಾಟಾ ಆಲ್ಟ್ರೋಜ್ ಮತ್ತು ಮಾರುತಿ ಬಲೆನೊದಂತಹ ಪ್ರೀಮಿಯಂ ಕಾರುಗಳೊಂದಿಗೆ ಹುಂಡೈ i20 ನೇರವಾಗಿ ಸ್ಪರ್ಧಿಸುತ್ತಿದೆ.
ಹ್ಯುಂಡೈ i20 ನ ಮೊದಲ ತಲೆಮಾರಿನ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿತು. ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ನೀವು ಇನ್ನೂ ಈ ಕಾರನ್ನು ಕಾಣಬಹುದು. OLX, Cars24, Spinny ನಂತಹ ಅನೇಕ ಆನ್‌ಲೈನ್ ಕಾರ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ಸೆಕೆಂಡ್ ಹ್ಯಾಂಡ್ i20 ಅನ್ನು ಸಹ ಖರೀದಿಸಬಹುದು.

ಮೊದಲ ತಲೆಮಾರಿನ ಜೊತೆಗೆ, ನೀವು ಎರಡನೇ ತಲೆಮಾರಿನ i20 ಗೂ ಸಹ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಅಲ್ಲದೇ ಕೈಗೆಟಕುವ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್‌ನಲ್ಲಿ ಐ20 ಅನ್ನು ಖರೀದಿಸುವ ಮೂಲಕ ನೀವು ಲಕ್ಷಗಳನ್ನು ಉಳಿಸಬಹುದು. ಕಾರಿನ ಮಾಡಲ್ ಹಾಗೂ ಅದರ ಕಿ.ಮೀ, ವಾಹನ ಕಂಡಿಷನ್ ಮೇಲೆ ಸೆಕೆಂಡ್‌ಹ್ಯಾಂಡ್ ಮಾರುಕಟ್ಟೆಯಲ್ಲಿ ಅದರ ಬೆಲೆ ನಿರ್ಧಾರವಾಗುತ್ತದೆ.
ಸದ್ಯ ಹೊಸ ಹ್ಯುಂಡೈ i20 ನ ಎಕ್ಸ್ ಶೋ ರೂಂ ಬೆಲೆ 6.99 ಲಕ್ಷ ರೂ.ಗಳಿಂದ ಆರಂಭವಾಗಿ 11.16 ಲಕ್ಷ ರೂ. ವೆರೆಗೆ ಇದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಎರಾ, ಮ್ಯಾಗ್ನಾ, ಸ್ಪೋರ್ಟ್ಜ್, ಆಸ್ಟಾ, ಆಸ್ಟಾ (ಒ) ಒಳಗೊಂಡಂತೆ 5 ರೂಪಾಂತರಗಳಲ್ಲಿ ಲಭ್ಯವಿದೆ. ಕಂಪನಿಯು ಇದನ್ನು ಟರ್ಬೊ ಎಂಜಿನ್‌ನೊಂದಿಗೆ ಎನ್-ಲೈನ್ ರೂಪಾಂತರದಲ್ಲೂ ಮಾರಾಟ ಮಾಡುತ್ತಿದೆ. ಇದರ ಎಕ್ಸ್ ಶೋ ರೂಂ ಬೆಲೆ ರೂ.10 ಲಕ್ಷದಿಂದ ಪ್ರಾರಂಭವಾಗುತ್ತದೆ.

ವೈಶಿಷ್ಟ್ಯಗಳ ಬಗ್ಗೆ ಮಾತನಾಡಿದರೆ, ಈಕಾರು ತನ್ನ ವಿಭಾಗದಲ್ಲಿ ಹೆಚ್ಚು ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಯುಎಸ್‌ಬಿ ಟೈಪ್-ಸಿ ಫಾಸ್ಟ್ ಚಾರ್ಜರ್, ಏರ್ ಪ್ಯೂರಿಫೈಯರ್ ಮುಂತಾದ ವೈಶಿಷ್ಟ್ಯಗಳು ಈ ಕಾರಿನಲ್ಲಿ ಲಭ್ಯವಿದೆ.
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, 6 ಏರ್ ಬ್ಯಾಗ್‌ಗಳು, ಐಸೊಫಿಕ್ಸ್ ಚೈಲ್ಡ್ ಆಂಕಾರೇಜ್, ಇಎಸ್‌ಸಿ, ಎಬಿಎಸ್, ಹಗಲು-ರಾತ್ರಿ ಐಆರ್‌ವಿಎಂ, ಹಿಲ್ ಅಸಿಸ್ಟ್ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಎಲ್ಲಾ ಪ್ರಯಾಣಿಕರಿಗೆ 3 ಪಾಯಿಂಟ್ ಸೀಟ್ ಬೆಲ್ಟ್‌ಗಳಂತಹ ವೈಶಿಷ್ಟ್ಯಗಳು ಎಲ್ಲಾ ಪ್ರಯಾಣಿಕರಿಗೆ ಗುಣಮಟ್ಟವಾಗಿ ಲಭ್ಯವಿದೆ. ಹಾಗೆಯೇ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಆಟೋ ಹೆಡ್‌ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳು ಅದರ ಉನ್ನತ ರೂಪಾಂತರದಲ್ಲಿ ಲಭ್ಯವಿದೆ.

ಇದರ ಎಂಜಿನ್ ಆಯ್ಕೆ ಬಗ್ಗೆ ಹೇಳುವುದಾದ್ರೆ, ಹ್ಯುಂಡೈ i20 ಹ್ಯಾಚ್‌ಬ್ಯಾಕ್ 1.2-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಇದು 83 PS ಪವರ್ ಮತ್ತು 115 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್, CVT ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಜೋಡಿಸಲಾಗಿದೆ.
ಇದರ ಆಟೋಮ್ಯಾಟಿಕ್ ರೂಪಾಂತರವು 88 PS ಪವರ್ಉತ್ಪಾದಿಸುತ್ತದೆ. ಕಂಪನಿಯು ತನ್ನ N-ಲೈನ್ ರೂಪಾಂತರದಲ್ಲಿ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ನೀಡಿದ್ದು, ಇದು 120 PS ಪವರ್ ಮತ್ತು 172 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಕೂಡ ಉತ್ತಮ ಲೈಫ್ ನೀಡುವುದರಿಂದ ಕಾರಿನ ಬೇಡಿಕೆಗೆ ಪ್ರಮುಖ ಕಾರಣವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications