ಬಿಡುಗಡೆಗೆ ಸಜ್ಜು... ಅಂತಿಮ ಪರೀಕ್ಷೆಯಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ಮಾರುತಿ ಸುಜುಕಿ ಫ್ರಾಂಕ್ಸ್
ಮಾರುತಿ ಸುಜುಕಿ ತನ್ನ ಜನಪ್ರಿಯ ಜಿಮ್ನಿ 5-ಡೋರ್ ಜೊತೆಗೆ ಫ್ರಾಂಕ್ಸ್ ಮಾದರಿಯನ್ನು ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತ್ತು. ಊಹಿಸಿದಂತೆಯೇ ಮಾರುತಿ ಫ್ರಾಂಕ್ಸ್‌ಗೆ ಭಾರೀ ಪ್ರತಿಕ್ರಿಯೆ ಸಿಗುತ್ತಿದೆ. ಬುಕಿಂಗ್ಸ್ ಕೂಡ ದಾಖಲೆ ಮಟ್ಟದಲ್ಲಿ ಆಗುತ್ತಿದ್ದು, ಬಿಡುಗಡೆ ಯಾವಾಗ ಎಂದು ಕಾಯುತ್ತಿದ್ದ ಗ್ರಾಹಕರಿಗೆ ಶುಭಸುದ್ದಿ ಶೀಘ್ರದಲ್ಲೇ ಕಂಪನಿ ನೀಡಲಿದೆ.
ಮಾರುತಿ ಅವರು ಪ್ರತಿದಿನ ಫ್ರಾಂಕ್ಸ್‌ಗಾಗಿ 250 ರಿಂದ 350 ಬುಕಿಂಗ್‌ಗಳನ್ನು ಪಡೆಯುತ್ತಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಅನಾವರಣಗೊಂಡಾಗಿನಿಂದ ಈ ಹೊಸ ಕ್ರಾಸ್ ಓವರ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಯಾವಮಟ್ಟಿಗೆ ಅಂದ್ರೆ, ಇದರ ಜೊತೆಗೆ ಅನಾವರಣಗೊಂಡಿದ್ದ ಹೊಸ ಮಾರುತಿ ಜಿಮ್ನಿ 5- ಡೋರ್‌ಗೆ ಪೈಪೋಟಿಯಾಗಿ ಬುಕಿಂಗ್‌ಗಳನ್ನು ಸ್ವೀಕರಿಸುತ್ತಿದೆ. ಈ ಮಾರುತಿ ಫ್ರಾಂಕ್ಸ್ ಕಾಂಪ್ಯಾಕ್ಟ್ SUV ಕೂಪೆ ಮುಂದಿನ ತಿಂಗಳು ಭಾರತದಲ್ಲಿ ಮಾರಾಟವಾಗಲಿದೆ.

ಶೀಘ್ರವಾಗಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್‌ನ ಪರೀಕ್ಷೆಗಳನ್ನು ವೇಗಗೊಳಿಸಿದೆ. ಇತ್ತೀಚೆಗೆ ಪ್ರಾಂಕ್ಸ್ ಅನ್ನು ಅಂತಿಮ ಹಂತದ ಪರೀಕ್ಷೆಯಲ್ಲಿ ತೊಡಗಿಸಿದ್ದಾಗ ಗುರುತಿಸಲಾಗಿದೆ. ಈ ಟೆಸ್ಟಿಂಗ್ ಮಾದರಿಯು ಬಿಳಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಇದು ಹೈ ಸ್ಪೆಕ್ ರೂಪಾಂತರವಾಗಿ ಕಂಡುಬಂದಿದೆ. ಐದು ಸೀಟ್‌ಗಳನ್ನು ಒಳಗೊಂಡ ಹಗುರವಾದ ಹಾರ್ಟೆಕ್ಟ್ ಪ್ಲಾಟ್ ಫಾರ್ಮ್‌ನಿಂದ ಇದನ್ನು ನಿರ್ಮಿಸಲಾಗಿದೆ. ಇದು ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನೊಂದಿಗೆ ಡಿಸೈನ್, ಫೀಚರ್ ಸೇರಿದಂತೆ ಬಹಳಷ್ಟನ್ನು ಹಂಚಿಕೊಳ್ಳುತ್ತದೆ.
ಫ್ರಾಂಕ್ಸ್‌ನ ಹೊರಭಾಗವು ಕ್ರೋಮ್ ಡಿಸೈನ್‌ನೊಂದಿಗೆ ಪ್ರಮುಖ ಮುಂಭಾಗದ ಗ್ರಿಲ್ ಮತ್ತು ಸಿಗ್ನೇಚರ್ ಕ್ರಿಸ್ಟಲ್ ಬ್ಲಾಕ್ LED ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಒಳಗೊಂಡಿದೆ. ಬ್ರ್ಯಾಂಡ್‌ನ ಪ್ರಕಾರ ಕ್ರಾಫ್ಟೆಡ್ ಫ್ಯೂಚರಿಸಂ ವಿನ್ಯಾಸವನ್ನು ಫ್ರಾಂಕ್ಸ್ ಅನುಸರಿಸುತ್ತದೆ. ವಾಹನದ ಸಂಪೂರ್ಣ ಅಗಲವನ್ನು ಒಳಗೊಂಡಿರುವ ವೈಡ್-ಸ್ವೀಪಿಂಗ್ LED ಟೈಲ್ ಲೈಟ್‌ಗಳು ನೇರ ಪ್ರೊಫೈಲ್ ಅನ್ನು ಹೊಂದಿವೆ. ಇತರ ಮುಖ್ಯಾಂಶಗಳೆಂದರೆ ಅಲಾಯ್ ವೀಲ್‌ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ಫಾಕ್ಸ್ ಸ್ಕಿಡ್ ಪ್ಲೇಟ್‌ಗಳು, ಬ್ಲಾಕ್ ಕ್ಲಾಡಿಂಗ್‌ನೊಂದಿಗೆ ಕ್ರೋಮ್ಡ್ ವಿಂಡೋ ಲೈನ್ ಇತ್ಯಾದಿಗಳನ್ನು ಒಳಗೊಂಡಿದೆ.

ಒಳಾಂಗಣವು ಬ್ಲಾಕ್ ಮತ್ತು ಬೋರ್ಡೆಕ್ಸ್ ಕಾಂಟ್ರಾಸ್ಟಿಂಗ್ ಕಲರ್ ಥೀಮ್‌ನಿಂದ ಎದ್ದುಕಾಣುವ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ತುಂಬಿದೆ. ಸ್ಮಾರ್ಟ್ ಪ್ಲೇ ಪ್ರೊ+, ವೈರ್ ಲೆಸ್ ಆಪಲ್ ಕಾರ್- ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, HUD, ಟರ್ನ್ ಬೈ ಟರ್ನ್ ನ್ಯಾವಿಗೇಷನ್, 360 ಡಿಗ್ರಿ ಕ್ಯಾಮೆರಾ ಸಿಸ್ಟಮ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, Arkamys ಸರೌಂಡ್ ಸೌಂಡ್ ಸಿಸ್ಟಮ್, ಒಂಬತ್ತು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ.
ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳನ್ನು ನೋಡುವುದಾದರೆ ಆರು ಏರ್‌ಬ್ಯಾಗ್‌ಗಳು, 3-ಪಾಯಿಂಟ್ ELR ಸೀಟ್‌ಬೆಲ್ಟ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರೋಲ್‌ಓವರ್ ಮಿಟಿಗೇಷನ್‌ನೊಂದಿಗೆ ESP, EBD ಮತ್ತು ಬ್ರೇಕ್ ಅಸಿಸ್ಟ್ (BA), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳೊಂದಿಗೆ ABS ಸೇರಿವೆ. ಮಾರುತಿ ಸುಜುಕಿ ಫ್ರಾಂಕ್ಸ್ 6 ಸಿಂಗಲ್-ಟೋನ್ ಮತ್ತು 3 ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದು 1.2L NA ಪೆಟ್ರೋಲ್ ಹಾಗೂ 1.0L ಟರ್ಬೊ ಪೆಟ್ರೋಲ್ ಎಂಜಿನ್‌ಗಳನ್ನು ಒಳಗೊಂಡಿರಲಿದೆ.

ಐಡಲ್ ಸ್ಟಾರ್ಟ್/ಸ್ಟಾಪ್ ಟೆಕ್‌ನೊಂದಿಗೆ K12N ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್ 6,000 rpm ನಲ್ಲಿ 90 PS ಮತ್ತು 4,400 rpm ನಲ್ಲಿ 113 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟರ್ಬೊ ಪೆಟ್ರೋಲ್ 5,500 rpm ನಲ್ಲಿ 100 PS ಮತ್ತು 2,000-4,500 rpm ನಲ್ಲಿ 148 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಮೊದಲನೆಯದು 5-ಸ್ಪೀಡ್ MT ಅಥವಾ AMT ಯೊಂದಿಗೆ ಲಿಂಕ್ ಆಗಿದ್ದರೆ ಎರಡನೆಯದು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 5-ಸ್ಪೀಡ್ MT ಅಥವಾ 6-ಸ್ಪೀಡ್ AT ಯೊಂದಿಗೆ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.
Source: https://gaadiwaadi.com/maruti-suzuki-fronx-spied-during-final-testing-ahead-of-launch/


Click it and Unblock the Notifications