ಭಾರತದಲ್ಲಿ ಬಲಗೈ-ವಿದೇಶಗಳಲ್ಲಿ ಎಡಗೈ ಸ್ಟೀರಿಂಗ್ ಇರಲು ಕಾರಣವೇನು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ...
ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಕಾರುಗಳನ್ನು ಹೊಂದಿರುವ ಅಗ್ರ ದೇಶಗಳಲ್ಲಿ ಭಾರತವು ಒಂದು. ನಮ್ಮಲ್ಲಿ ಚಾಲಕರು ಬಲಗಡೆ ಕೂತು ರಸ್ತೆಯ ಎಡಭಾಗದಲ್ಲಿ ಡ್ರೈವ್ ಮಾಡಿದರೆ, ಹಲವು ದೇಶಗಳಲ್ಲಿ ಸ್ಟೀರಿಂಗ್ ಎಡಗಡೆ ಇರುತ್ತದೆ. ಇದು ಸಾಮಾನ್ಯ ವಿಷಯ ಎಲ್ಲರಿಗೂ ಗೊತ್ತು ಎಂದು ನಿಮಗನಿಸಬಹದು. ಆದರೆ ಇದರ ಹಿಂದೆ ಇತಿಹಾಸ, ಸಂಸ್ಕೃತಿ, ವಿಜ್ಞಾನದೊಂದಿಗೆ ಕೂಡಿದ ಆಸಕ್ತಿಕರ ಮಾಹಿತಿಯಿದೆ.
ಭಾರತದ ಮೂಲ ರಸ್ತೆಯ ಎಡಭಾಗ:
ಭಾರತವು ಐತಿಹಾಸಿಕ ದೇಶ ಪೂರ್ವದಲ್ಲಿ ಬಲಗೈಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಏನೇ ಕಾರ್ಯ ಮಾಡಿದರು ಎಡಗೈ ಅನ್ನು ಬಳಸುತ್ತಿರಿಲಿಲ್ಲ. ಹಾಗೆಯೇ ತಾವು ಬಳಸುವು ಕುದುರೆ, ಎತ್ತಿನ ಗಾಡಿ, ಇನ್ನಿತರ ಗಾಡಿಗಳನ್ನು ಸವಾರಿ ಮಾಡಿದರೆ ಎಡಭಾಗದಲ್ಲಿ ಚಲಿಸುತ್ತಾ, ಬಲಗೈನಲ್ಲಿ ಆಯುಧವಿಡಿದು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದರು. ಇದು ಇನ್ನೂ ವೇಗವಾಗಿ ಬಳಕೆಗೆ ಬಂದಿದ್ದು ಬ್ರಿಟಿಷರ ಕಾಲದಲ್ಲಿ, ಬ್ರಿಟಿಷರು ಸ್ವತಃ ಎಡಭಾಗದಲ್ಲಿ ವಾಹನಗಳನ್ನು ಓಡಿಸುತ್ತಿದ್ದರು ಈಗಲೂ ಅದನ್ನೇ ಮುಂದುವರೆಸಿದ್ದಾರೆ.

ಮೊದಲಿಗೆ 19 ನೇ ಶತಮಾನದ ಅಂತ್ಯದಲ್ಲಿ ಕಾರುಗಳನ್ನು ಪರಿಚಯಿಸಿದಾಗ, ಜಟಕಾ ಗಾಡಿಗಳು, ತಳ್ಳುವ ಬಂಡಿಗಳಂತೆಯೇ ಜನರು ರಸ್ತೆಯ ಎಡಭಾಗದಲ್ಲಿ ಓಡಿಸುವುದನ್ನು ಮುಂದುವರೆಸಿದರು. ಆದರೆ ಕಾಲಾನಂತರದಲ್ಲಿ ವೇಗವಾದ ಮತ್ತು ಹೆಚ್ಚು ಅಪಾಯಕಾರಿ ಗ್ಯಾಸೋಲಿನ್ ಚಾಲಿತ ಕಾರುಗಳ ಆಗಮನದೊಂದಿಗೆ, ಅನೇಕ ದೇಶಗಳು ಎಡಗೈ ಸ್ಟೀರಿಂಗ್ ಹಾಗೂ ಬಲಭಾಗದಲ್ಲಿ ವಾಹನಗಳನ್ನು ಚಾಲನೆ ಮಾಡಲು ಬದಲಾಯಿಸಿದವು. ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದ ಹಲವು ದೇಶಗಳಲ್ಲಿ ಇದು ವಿಶೇಷವಾಗಿ ಪ್ರಚಲಿತವಾಯಿತು.
ಕೆಲವು ಮಾತ್ರ ಬದಲಾಗಲು ಕಾರಣವೇನು?:
ಫ್ರೆಂಚ್ ಕ್ರಾಂತಿಯಂತಹ ಐತಿಹಾಸಿಕ ಘಟನೆಗಳ ಹಲವಾರು ಕಾರಣಗಳಿವೆ, ಫ್ರಾನ್ಸ್ ಕ್ರಾಂತಿಕಾರಿ ಆದರ್ಶಗಳೊಂದಿಗೆ 1792 ರಲ್ಲಿ ಎಡಗಡೆ ಕುಳಿತು ಬಲಬದಯಿಲ್ಲಿ ಚಾಲನೆ ಮಾಡಲು ಬದಲಾಯಿಸಲಾಯಿತು. ಸ್ವೀಡನ್‌ನಲ್ಲಿ 1967 ರಲ್ಲಿ ಬಲಬದಿಯಲ್ಲಿ ಚಾಲನೆ ಮಾಡುವ ಬದಲಾವಣೆಯು ಹೆಚ್ಚಾಯಿತು. ಅಂದರೆ ಈ ದೇಶಗಳಿಗೆ ಆಮದಾಗುವ ಕಾರುಗಳು ಕೂಡ ಬಲಭಾಗದಲ್ಲಿ ಚಲಿಸುವ ಕಾರುಗಳೇ ಆಗಿದ್ದರಿಂದ ನಿಧಾನವಾಗಿ ಹಳೆಯ ಕಾರು ಸಂಸ್ಕೃತಿಯನ್ನು ಕೈಬಿಡಲಾಯಿತು.

ಈ ದೇಶಗಳು ಮುಖ್ಯವಾಗಿ ವಸಾಹತುಶಾಹಿ ಶಕ್ತಿಗಳು ಮತ್ತು ವ್ಯಾಪಾರ, ಮಿಲಿಟರಿ ಮೈತ್ರಿಗಳಿಂದ ಪ್ರಭಾವಿತವಾಗಿದ್ದವು. ಆದರೆ ಬ್ರಿಟಿಷರು ಮಾತ್ರ ಎಡಭಾಗದಲ್ಲಿ ಓಡಿಸುವುದನ್ನು ಮುಂದುವರೆಸಿದ್ದರು. ಉದಾಹರಣೆಗೆ ನೋಡುವುದಾದರೆ ಐರ್ಲೆಂಡ್, ಮಾಲ್ಟಾ ಮತ್ತು ಭಾರತವು ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದವು ಆದರೆ ಇನ್ನೂ ಎಡಭಾಗದಲ್ಲಿ ಚಾಲನೆ ಮಾಡುತ್ತವೆ. ಇದು ಹಳೆಯ ಚಾಲನಾ ಅಭ್ಯಾಸಗಳಾಗಿದ್ದು, ಒಂದು ವೇಳೆ ಬದಲಾವಣೆಗೆ ಆಧ್ಯತೆ ನೀಡಿದರೆ ವೆಚ್ಚ, ಅನಾನುಕೂಲತೆ, ಚಾಲಕರನ್ನು ಮರುತರಬೇತಿಗೊಳಿಸುವುದು ದೊಡ್ಡ ತೊಂದರೆಯಾಗುತ್ತಿತ್ತು.
ಬಲಬದಿಯಲ್ಲಿ ಚಾಲನೆ ಮಾಡುವುದು ಸುರಕ್ಷಿತ ಎಂಬ ಕಲ್ಪನೆಯು ಹೆಚ್ಚಿನ ಜನರು ಬಲಗೈ ಎಂಬ ಊಹೆಯ ಮೇಲೆ ಆಧಾರಿತವಾಗಿದೆ. ವಿದೇಶಗಳಲ್ಲಿ ರಸ್ತೆಯ ಬಲಭಾಗದಲ್ಲಿ ವಾಹನವನ್ನು ನಿಯಂತ್ರಿಸಲು ಅವರಿಗೆ ಸುಲಭ ಮತ್ತು ಸಾಮಾನ್ಯವಾಗಿದೆ. ಬಲಭಾಗದಲ್ಲಿ ಚಾಲನೆ ಮಾಡುವುದರಿಂದ ಚಾಲಕರು ಮುಂಬರುವ ಟ್ರಾಫಿಕ್ ಅನ್ನು ಹೆಚ್ಚು ಸ್ಪಷ್ಟವಾಗಿ ನೋಡಬಹದು ಮತ್ತು ಮುಖಾಮುಖಿ ಘರ್ಷಣೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೇಳುತ್ತಾರೆ. ಇದೇ ಮಾತುಗಳನ್ನು ನಮ್ಮ ಭಾರತದಲ್ಲಿ ಓಡಿಸುವವರು ಹೇಳುತ್ತಾರೆ.

ಮೂಲ ಸೌಕರ್ಯ ಸರಿಯಿದ್ದರೇ ಸಾಕು:
ರಸ್ತೆ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಲ್ಲಿ ನಾವು ಚಾಲನೆ ಮಾಡುವ ರಸ್ತೆಯ ಬದಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ರಸ್ತೆ ಮೂಲಸೌಕರ್ಯ, ಸಂಚಾರಿ ನಿಯಮಗಳು, ಚಾಲಕನ ಉತ್ತಮ ಡ್ರೈವಿಂಗ್ ಕೌಶಲ್ಯವು ಸಹ ದೊಡ್ಡ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಡ್ರೈವಿಂಗ್ ಯಾವುದೇ ಭಾಗದಲ್ಲಿ ಮಾಡಿದ್ರು ಈ ಎಲ್ಲಾ ಅಂಶಗಳು ಸರಿಯಿದ್ದರೇ ಅಪಘಾತಗಳು ನಡಿಯಲು ಸಾಧ್ಯವೇ ಇಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








