Maruti: ಕೇವಲ ಈ 3 ಕಾರಣಗಳಿಂದಲೇ ಮಾರುತಿ ಅಗ್ರಸ್ಥಾನದಲ್ಲಿದೆ... ನೋಡಿದ್ರೆ ನೀವು ಒಪ್ಪಬಹುದು!

ಭಾರತದ ಜನಪ್ರಿಯ ಕಾರು ತಯಾರಕಾ ಕಂಪನಿ ಮಾರುತಿ ಸುಜುಕಿ ಕಳೆದ ಹಲವು ವರ್ಷಗಳಿಂದ ಮಾರಾಟದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಆದರೆ ಸುರಕ್ಷತೆಯ ವಿಷಯದಲ್ಲಿ ಹಿಂದುಳಿದಿರುವುದು ಕೂಡ ಸತ್ಯ. ಈ ಸಂಬಂಧ ದೇಶದ ಜನರು ಮಾರುತಿಯನ್ನು ಟೀಕಿಸುತ್ತಲೇ ಇದ್ದಾರೆ. ಆದರೂ ಪ್ರತಿ ತಿಂಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಇದಕ್ಕೆ ಮೂರು ಪ್ರಮುಖ ಕಾರಣಗಳಿವೆ.

ಅತಿದೊಡ್ಡ ನೆಟ್‌ವರ್ಕ್:
ಮಾರುತಿ ಪ್ರಾಬಲ್ಯವು ಕಳೆದ ಕೆಲವು ವರ್ಷಗಳಲ್ಲಿ 1-ಲಕ್ಷದ ಮಾಸಿಕ ಮಾರಾಟಕ್ಕಿಂತ ಕಡಿಮೆಯಾಗಿಲ್ಲ. ಅಂದರೆ ಕಂಪನಿ ವಿರುದ್ಧ ಎಷ್ಟೇ ಟೀಕೆಗಳು ವ್ಯಕ್ತವಾದರೂ ಇಲ್ಲಿಯವರೆಗೆ ಮಾರಾಟವು ಉತ್ತಮವಾಗಿಯೇ ಇದೆ. ಇದಕ್ಕೆ ಮೊದಲ ಕಾರಣ ದೇಶಾದ್ಯಂತ ಮಾರುತಿಗಿರುವ ನೆಟ್‌ವರ್ಕ್ ಸದ್ಯ ದೇಶದಲ್ಲಿ ಮಾರುತಿಯವರ ಜಾಲವು ತುಂಬಾ ದೊಡ್ಡದಾಗಿ ವಿಸ್ತರಿಸಿದೆ. ಭಾರತದ ಇನ್ಯಾವುದೇ ತಯಾರಕರಿಗಿಲ್ಲದ ಅತಿದೊಡ್ಡ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ಹೊಂದಿದ್ದು, ಅತಿಹೆಚ್ಚು ಕಾರುಗಳ ಮಾರಾಟಕ್ಕೆ ಇದು ಪ್ರಮುಖ ಕಾರಣವಾಗಿದೆ.

Maruti is at the top in india because of these 3 reasons

ಕಳೆದ ವರ್ಷ ನವೆಂಬರ್‌ನಲ್ಲಿ ಮಾರುತಿ ಕಂಪನಿಯು ಡೀಲರ್‌ಶಿಪ್ ನೆಟ್‌ವರ್ಕ್‌ನಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿತ್ತು. ಮಾರುತಿ ಹೇಳಿಕೊಂಡಿರುವ ಪ್ರಕಾರ ದೇಶಾದ್ಯಂತ ಬರೋಬ್ಬರಿ 3,500 ಡೀಲರ್‌ಶಿಪ್ ಮೈಲಿಗಲ್ಲನ್ನು ದಾಟಿದೆ. ಪ್ರತಿ ಡೀಲರ್‌ಶಿಪ್ ತಿಂಗಳಿಗೆ 2 ಕಾರುಗಳನ್ನು ಮಾರಾಟ ಮಾಡಿದರೂ ಕಂಪನಿಗೆ 7000 ಕಾರುಗಳು ಸುಲಭವಾಗಿ ಮಾರಾಟವಾಗಲಿವೆ. ಇದು ಕೇವಲ ಉದಾಹರಣೆಯಾಗಿದೆ. ಆದರೆ ಸ್ವಾಭಾವಿಕವಾಗಿ ಡೀಲರ್‌ಶಿಪ್‌ಗಳು ತಿಂಗಳಲ್ಲಿ ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾರಾಟ ಮಾಡುತ್ತಿರುವುದರಿಂದಲೇ ಮಾರುತಿ ಅಗ್ರ ಸ್ಥಾನದಲ್ಲಿದೆ.

ಸೇವೆ ಮತ್ತು ವಿಶ್ವಾಸಾರ್ಹತೆ:
ಮಾರುತಿ ದೇಶದ ದೂರದ ಭಾಗಗಳಲ್ಲಿ ಸೇವಾ ಕೇಂದ್ರಗಳನ್ನು ಹೊಂದಿದೆ. ನೀವು ಭಾರತದ ಕೆಲವು ಪ್ರದೇಶಗಳಲ್ಲಿ ರಸ್ತೆಗಳನ್ನು ಕಾಣದಿರಬಹುದು, ಆದರೆ ಕಂಡಿತ ಮಾರುತಿ ಸೇವಾ ಕೇಂದ್ರವನ್ನು ಕಾಣುತ್ತೀರಿ ಎಂಬ ಪ್ರಸಿದ್ಧ ಮಾತಿದೆ. ಹಾಗೆಯೇ ಮಾರುತಿ ಕಾರುಗಳನ್ನು ಸರಳವಾಗಿ ನಿರ್ಮಿಸಲಾಗಿರುವುದರಿಂದ ಸ್ಥಳೀಯ ಮೆಕ್ಯಾನಿಕ್‌ಗಳು ಯಾಂತ್ರಿಕ ಬಿಟ್‌ಗಳನ್ನು ಚೆನ್ನಾಗಿ ತಿಳಿದಿದ್ದಾರೆ. ಕಾರು ಎಲ್ಲಾದರು ಕೈಕೊಟ್ಟರೆ ನೀವು ಸಿಲುಕಿಕೊಳ್ಳುವುದಿಲ್ಲ, ಕಾರುಗಳು ಸಾಕಷ್ಟು ವಿಶ್ವಾಸಾರ್ಹವಾಗಿಯೂ ಇವೆ.

Maruti is at the top in india because of these 3 reasons

ಹೆಚ್ಚಿನ ಆಯ್ಕೆಗಳು:
ಮಾರುತಿ ಕಂಪನಿಯು ಸದ್ಯ ದೇಶದಲ್ಲಿ ಅಗ್ಗದ ಬೆಲೆಯ ಕಾರುಗಳನ್ನು ನೀಡುವಲ್ಲಿ ಜನಪ್ರಿಯತೆ ಪಡೆದಿದೆ. ಜೊತೆಗೆ ಅತಿ ದೊಡ್ಡ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ಹೊಂದಿದೆ, ಆದರೆ ಅವುಗಳನ್ನು ಪ್ರದರ್ಶಿಸಲು ಉತ್ಪನ್ನಗಳನ್ನು ಹೊಂದಿಲ್ಲದಿದ್ದರೆ ಏನು ಪ್ರಯೋಜನ ಅಲ್ಲವೇ? ಬರೋಬ್ಬರಿ 15 ಕ್ಕೂ ಹೆಚ್ಚು ಮಾದರಿಗಳೊಂದಿಗೆ ಮಾರುತಿ ತನ್ನ ಅರೆನಾ ಮತ್ತು ನೆಕ್ಸಾ ಡೀಲರ್‌ಶಿಪ್‌ನಲ್ಲಿ ಕಾರುಗಳನ್ನು ಪ್ರದರ್ಶಿಸುತ್ತಿದೆ. ಹಾಗಾಗಿ ನಮ್ಮ ಬಜೆಟ್‌ಗೆ ಅನುಗುಣವಾಗಿ ಸುಧೀರ್ಘ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಎಲ್ಲಾ ಮಾದರಿಗಳು ತುಂಬಾ ಸ್ಪರ್ಧಾತ್ಮಕವಾಗಿ ಬೆಲೆಯನ್ನು ಹೊಂದಿದ್ದು, ನಿಮ್ಮ ಬಜೆಟ್‌ನಲ್ಲಿ ನೀವು ಕನಿಷ್ಠ ಒಂದು ಕಾರನ್ನು ಖರೀದಿಸಬಹುದು. ಸದ್ಯ ಮಾರುತಿ ಕಂಪನಿಯು ಫ್ರಾಂಕ್ಸ್, ಜಿಮ್ನಿ ಮುಂತಾದ ಹೆಚ್ಚಿನ ಮಾದರಿಗಳನ್ನು ಸಹ ತರುತ್ತಿದೆ, ಇನ್ನೂ ಹೆಚ್ಚಿನ ಆಯ್ಕೆಗಳನ್ನು ಸೇರಿಸುತ್ತಿದೆ. ಈ ಎರಡು ಮಾದರಿಗಳನ್ನು ಇದೇ ವರ್ಷ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತ್ತು. ಇತ್ತೀಚೆಗಷ್ಟೆ ಫ್ರಾಂಕ್ಸ್ ಬೆಲೆಯನ್ನು ಬಹಿರಂಗಪಡಿಸಿ ಗ್ರಾಹಕರ ನಿರೀಕ್ಷೆಯಂತೆ ಅಗ್ಗದ ಬೆಲೆಯನ್ನು ಘೋಷಿಸಿತ್ತು.

Maruti is at the top in india because of these 3 reasons

ಇನ್ನೂ ಹಲವು ಕಾರಣಗಳಿಂದ ಮಾರುತಿ ಕಾರುಗಳು ಹೆಚ್ಚು ಮಾರಟವಾಗುತ್ತವೆ. ಆದರೆ ಮೇಲೆ ತಿಳಿಸಿರುವ ಕಾರಣಗಳೆ ಕಂಪನಿಯ ಹೆಚ್ಚಿನ ಮಾರಾಟಕ್ಕೆ ಪ್ರಮುಖ ಕಾರಣಗಳಾಗಿವೆ. ಉಳಿದಂತೆ ಕಂಪನಿಯು ಸುರಕ್ಷತೆಯ ವಿಷಯದಲ್ಲಿ ಯಾವಾಗಲೂ ಹಿಂದುಳಿದಿದೆ. ಇದು ಎಲ್ಲರಿಗೂ ಗೊತ್ತು. ಆದರೆ ನಮ್ಮ ದೇಶದಲ್ಲಿ ಬೆಲೆಯು ನಿರ್ಣಾಯಕ ಪಾತ್ರ ವಹಿಸುವುದರಿಂದ ಮಾರುತಿಯ ಅಗ್ಗದ ಕಾರುಗಳು ಈ ಸುರಕ್ಷತೆ ವಿಚಾರವನ್ನು ಮುಚ್ಚಿಹಾಕುತ್ತಿವೆ. ಇದನ್ನು ಎಷ್ಟು ಮಂದಿ ಒಪ್ಪತ್ತೀರಿ ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, April 28, 2023, 16:03 [IST]
English summary
Reasons behind maruti no 1 in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+