Renault offers: ರೆನಾಲ್ಟ್ ಗ್ರಾಹಕರೇ.. ರೂ.77,000 ಡಿಸ್ಕೌಂಟ್ ಘೋಷಣೆ
ಭಾರತದಲ್ಲಿ ಅಗ್ಗದ ಬೆಲೆಯ ಕಾರು ಮಾರಾಟದಿಂದ ರೆನಾಲ್ಟ್ (Renault) ಜನಪ್ರಿಯವಾಗಿದೆ. ಇದೀಗ, ಕಂಪನಿಯು ವಿವಿಧ ಮಾದರಿಗಳ ಮೇಲೆ ರೂ.77,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಘೋಷಿಸಿದೆ. ಕ್ಯಾಶ್ ಡಿಸ್ಕೌಂಟ್, ಎಕ್ಸ್ಚೇಂಜ್ ಬೋನಸ್, ಕಾರ್ಪೊರೇಟ್ ರಿಯಾಯಿತಿ ಹಾಗೂ ಲಾಯಲ್ಟಿ ಬೋನಸ್ ಸೇರಿವೆ. ಈ ಸೌಲಭ್ಯಗಳು ಜುಲೈ 31ರವರೆಗೆ ಜಾರಿಯಿರಲಿವೆ.
ಮೊದಲಿಗೆ ರೆನಾಲ್ಟ್ ಕ್ವಿಡ್ ಬಗ್ಗೆ ಮಾತನಾಡೋಣ. ಈ ಕಾರು, ಒಟ್ಟು ರೂ.57,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಅದರಲ್ಲಿ ರೂ.15,000 ನಗದು ರಿಯಾಯತಿ, ರೂ.20,000 ಎಕ್ಸ್ಚೇಂಜ್ ಬೋನಸ್, ರೂ.12,000 ಕಾರ್ಪೊರೇಟ್ ಡಿಸ್ಕೌಂಟ್ ಹಾಗೂ ರೂ.10,000 ಲಾಯಲ್ಟಿ ಬೋನಸ್ ಸೇರಿವೆ. ಭಾರತದಲ್ಲಿ ರೆನಾಲ್ಟ್ ರೂ.4.70 - 6.33 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ರೆನಾಲ್ಟ್ ಕ್ವಿಡ್ ಕಾರಿನ ವಿಶೇಷತೆ ಬಗ್ಗೆ ಮಾತನಾಡುವುದಾದರೆ, ಇದು 1.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 68 hp ಗರಿಷ್ಠ and 91 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್/ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 21.46 - 22.3 kmpl ಮೈಲೇಜ್ ನೀಡುತ್ತದೆ.
ಜುಲೈ ತಿಂಗಳಲ್ಲಿ ರೆನಾಲ್ಟ್ ಟ್ರೈಬರ್ ಸಹ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ರೂ.15,000 ನಗದು ರಿಯಾಯಿತಿ, ರೂ.12,000 ಕಾರ್ಪೊರೇಟ್ ಡಿಸ್ಕೌಂಟ್, ರೂ.25,000 ಎಕ್ಸ್ಚೇಂಜ್ ಬೋನಸ್ ಒಳಗೊಂಡು ಬರೋಬ್ಬರಿ ರೂ.52,000 ರಿಯಾಯಿತಿ ಪ್ರಯೋಜನ ಲಭ್ಯವಿದೆ. ಈ ಕಾರು, ರೂ.6.33 ಲಕ್ಷದಿಂದ ರೂ.8.97 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ.
ರೆನಾಲ್ಟ್ ಟ್ರೈಬರ್ ಸಬ್ 4-ಮೀಟರ್ ಎಂವಿಪಿಯಾಗಿದೆ. ಇದು, 1.0-ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 72 hp ಗರಿಷ್ಠ ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯದ ಹೊಂದಿದೆ. 5-ಸ್ವೀಡ್ ಮ್ಯಾನುವಲ್/ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ರೆನಾಲ್ಟ್ ಕಿಗರ್ ಕಾರು ಗರಿಷ್ಠ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಒಟ್ಟು ರೂ.77,000 ಡಿಸ್ಕೌಂಟ್ ಲಭ್ಯವಿದೆ. ಅದರಲ್ಲಿ ರೂ.25,000 ನಗದು ರಿಯಾಯಿತಿ, ರೂ.20,000 ಎಕ್ಸ್ಚೇಂಜ್ ಬೋನಸ್, ರೂ.12,000 ಕಾರ್ಪೊರೇಟ್ ಬೋನಸ್, ಹಾಗೂ ರೂ.20,000 ಲಾಯಲ್ಟಿ ಬೋನಸ್ ಸೇರಿದೆ. ಈ ಕಾರು, ರೂ.6.50 ಲಕ್ಷದಿಂದ ರೂ.11.23 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ರೆನಾಲ್ಟ್ ಕಿಗರ್ 1.0- ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 hp ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್/ AMT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಮತ್ತೊಂದು, ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 100 hp ಗರಿಷ್ಠ ಪವರ್ ಹಾಗೂ 160 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್/ CVT ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.
ಒಟ್ಟಾರೆ, ಜುಲೈ ತಿಂಗಳು ರೆನಾಲ್ಟ್ ಕಂಪನಿಯ ಕ್ವಿಡ್, ಟ್ರೈಬರ್ ಹಾಗೂ ಕಿಗರ್ ಕಾರುಗಳು ಭರ್ಜರಿ ಡಿಸ್ಕೌಂಟ್ ಪ್ರಯೋಜನವನ್ನು ಹೊಂದಿವೆ. ಆದರೆ, ಈ ಸೌಲಭ್ಯಗಳು ರಾಜ್ಯದಿಂದ ರಾಜ್ಯದಿಂದ ಬೇರೆಯಾಗಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್ ಶಿಪ್ ಗೆ ಭೇಟಿ ನೀಡಿರಿ. ಮೊದಲೇ ಕಂಪನಿ ಕಾರುಗಳು ಕಡಿಮೆ ಬೆಲೆಯಲ್ಲಿ ಇದ್ದು, ರಿಯಾಯಿತಿ ಸೌಲಭ್ಯದಿಂದ ಮತ್ತಷ್ಟು ದರ ಇಳಿಕೆಯಾಗಲಿದೆ.


Click it and Unblock the Notifications








