ಸದ್ದಿಲ್ಲದೇ ಇತಿಹಾಸ ಪುಟ ಸೇರಿದ ಬಹು ಬೇಡಿಕೆಯ 'ರೆನಾಲ್ಟ್ ಕ್ವಿಡ್ 800ಸಿಸಿ' ಕಾರು

ಫ್ರೆಂಚ್ ವಾಹನ ತಯಾರಕ ಕಂಪನಿ 'ರೆನಾಲ್ಟ್' ಭಾರತದಲ್ಲಿ ಕಡಿಮೆ ಬೆಲೆಯ ಕ್ವಿಡ್ 800ಸಿಸಿ ಹ್ಯಾಚ್‌ಬ್ಯಾಕ್ ಮಾರಾಟ ಮಾಡಿ, ಖ್ಯಾತಿ ಗಳಿಸಿತ್ತು. ಇದೀಗ ಆ ಕಾರಿನ ಮಾರಾಟವನೇ ಸ್ಥಗಿತಗೊಳಿಸಿದೆ. ಇದು 'ಕ್ವಿಡ್' ಅಭಿಮಾನಿಗಳಿಗೆ ಬೇಸರ ತರಿಸಿದೆ. ಇನ್ಮುಂದೆ ಈ ಹ್ಯಾಚ್‌ಬ್ಯಾಕ್, 1.0 ಲೀಟರ್ ಪೆಟ್ರೋಲ್ ಎಂಜಿನ್ ರೂಪದಲ್ಲಿ ಮಾತ್ರವೇ ಲಭ್ಯವಿದೆ.

ರೆನಾಲ್ಟ್ ಇಂಡಿಯಾ, ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಕ್ವಿಡ್ 800ಸಿಸಿ ಆವೃತ್ತಿಯನ್ನು ತೆಗೆದುಹಾಕಿದೆ. ಈ ಹ್ಯಾಚ್‌ಬ್ಯಾಕ್, 0.8-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ RXL ಹಾಗೂ RXL (O) ಎಂಬ ಎರಡು ರೂಪಾಂತರಗಲ್ಲಿ ಖರೀದಿಗೆ ಲಭ್ಯವಿತ್ತು. ಆದರೀಗ ವೆಚ್ಚವನ್ನು ಸರಿದೂಗಿಸಲು ಹಾಗೂ ಜನಪ್ರಿಯತೆ ಕುಸಿಯುತ್ತಿರುವ ಹಿನ್ನೆಲೆ, ಇದರ ಎಂಜಿನ್ ಅನ್ನು ದೇಶಾದ್ಯಂತ ಏಪ್ರಿಲ್ 1ರಿಂದ ಜಾರಿಯಾದ BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿಲ್ಲ.

ಸದ್ದಿಲ್ಲದೇ ಇತಿಹಾಸ ಪುಟ ಸೇರಿದ ಬಹು ಬೇಡಿಕೆಯ ರೆನಾಲ್ಟ್ ಕ್ವಿಡ್ 800ಸಿಸಿ ಕಾರು

ಮಾರಾಟದಿಂದ ಸ್ಥಗಿತಗೊಂಡಿರುವ ರೆನಾಲ್ಟ್ ಕ್ವಿಡ್ 800ಸಿಸಿ ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 52 bhp ಗರಿಷ್ಠ ಪವರ್ ಹಾಗೂ 72 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತಿತ್ತು. ಇನ್ಮುಂದೆ 1.0-ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿರುವ ಕ್ವಿಡ್, ಕಂಪನಿಯ ಅಧಿಕೃತ ಎಂಟ್ರಿ ಲೆವೆಲ್ ಕಾರಾಗಿದೆ.

ಕೇಂದ್ರ ಸರ್ಕಾರ, 2030ರ ಹೊತ್ತಿಗೆ ದೇಶಾದ್ಯಂತ ರಸ್ತೆಗಳಲ್ಲಿ ಶೇಕಡ 30% ಎಲೆಕ್ಟ್ರಿಕ್ ವಾಹನಗಳಿರಲು (ಇವಿ) ಬಯಸಿದೆ. ಅದಕ್ಕೆ ತಕ್ಕಂತೆ ಬೆಳೆಯುತ್ತಿರುವ ಇವಿ ಮಾರುಕಟ್ಟೆ ಮೇಲೆ ಕಣ್ಣಿಟ್ಟಿರುವ ರೆನಾಲ್ಟ್ ಈಗಿನಿಂದಲೇ ಹಲವು ತಯಾರಿಗಳನ್ನು ಆರಂಭಿಸಿದೆ. ರಾಯಿಟರ್ಸ್ ವರದಿಯ ಪ್ರಕಾರ, ಪಾಲುದಾರ ಕಂಪನಿಯಾಗಿರುವ ನಿಸ್ಸಾನ್ ಮೋಟಾರ್‌ನೊಂದಿಗೆ ಸೇರಿಕೊಂಡು ಭಾರತದಲ್ಲಿ ಎಲೆಕ್ಟ್ರಿಕ್ ಉತ್ಪಾದನಾ ಘಟಕ ಸ್ಥಾಪಿಸಲು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ.

ಸದ್ದಿಲ್ಲದೇ ಇತಿಹಾಸ ಪುಟ ಸೇರಿದ ಬಹು ಬೇಡಿಕೆಯ ರೆನಾಲ್ಟ್ ಕ್ವಿಡ್ 800ಸಿಸಿ ಕಾರು

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ರೆನಾಲ್ಟ್ ಕಂಪನಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮೇಡ್ ಇನ್ ಇಂಡಿಯಾ 'ಕ್ವಿಡ್' ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದ್ದು, ಅದರ ತಯಾರಿಕೆಗೆ ಸ್ಥಳೀಯ ಕಚ್ಚಾ ವಸ್ತುಗಳನ್ನು ಬಳಕೆ ಮಾಡಲು ತೀರ್ಮಾನ ಮಾಡಿದೆ. ಹೊಚ್ಚ ಹೊಸ ಕ್ವಿಡ್' ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 2024ರಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದ್ದು, ಟಾಟಾ ಟಿಯಾಗೊ ಇವಿ, ಸಿಟ್ರಸ್ ಇಸಿ3 ಹಾಗೂ ಮುಂಬರಲಿರುವ ಎಂಜಿ ಕಾಮೆಟ್ ಇವಿಗೆ ಪ್ರತಿಸ್ಪರ್ಧಿಯಾಗಬಹುದು.

ಭಾರತದ ಮಾರುಕಟ್ಟೆಯಲ್ಲಿ ಪ್ರಸ್ತುತ ಖರೀದಿಗೆ ದೊರೆಯುವ 1.0 ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿರುವ ರೆನಾಲ್ಟ್ ಕ್ವಿಡ್ ಕಾರಿನ ಬಗ್ಗೆ ಮಾತನಾಡುವುದಾದರೆ, ಇದು 68 PS ಗರಿಷ್ಠ ಪವರ್ ಹಾಗೂ 91 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ.

ಈ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್, ರೂ.4.70 ಲಕ್ಷದಿಂದ ರೂ.6.33 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 21.46 - 22.3 kmpl ಮೈಲೇಜ್ ನೀಡಲಿದ್ದು, ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ಒಟ್ಟಾರೆ, 'ರೆನಾಲ್ಟ್'ನ ಎಂಟ್ರಿ ಲೆವೆಲ್ ಕಾರಾಗಿರುವ ಕ್ವಿಡ್ 800ಸಿಸಿ ಭಾರತದಲ್ಲಿ ಮಾರಾಟದಿಂದ ಸ್ಥಗಿತಗೊಂಡಿದ್ದರೂ 1.0 ಲೀಟರ್ ಪೆಟ್ರೋಲ್ ಎಂಜಿನ್ ರೂಪದಲ್ಲಿ ಸಿಗಲಿದೆ. ಜೊತೆಗೆ ಕಂಪನಿಯು ಮುಂದಿನ ವರ್ಷದಲ್ಲಿ ಎಲೆಕ್ಟ್ರಿಕ್ ಕ್ವಿಡ್ ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡಲು ಹೊರಟಿರುವುದು ಉತ್ತಮ ಬೆಳವಣಿಗೆಯಾಗಲಿದ್ದು, ಇದು ಕೂಡ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ.

Article Published On: Friday, April 7, 2023, 8:30 [IST]
English summary
Renault kwid 800cc car discontinued in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+