ಅತ್ಯಂತ ಕಡಿಮೆ ಬೆಲೆಗೆ 7-ಸೀಟರ್ ಕಾರು... ಗರಿಷ್ಟ ಸುರಕ್ಷತೆ, 20 ಕಿ.ಮೀ ಮೈಲೇಜ್, ಆಂಡ್ರಾಯ್ಡ್ ಆಟೋ
ಭಾರತದಲ್ಲಿ ಫ್ಯಾಮಿಲಿ ಕಾರು ಎಂದಾಕ್ಷಣ ದುಬಾರಿ ಬೆಲೆ ಎಂಬುದು ಮೊದಲು ಮನಸ್ಸಿಗೆ ಬರುತ್ತದೆ. ಆದ್ರೆ ಬಜೆಟ್ ಬೆಲೆಯಲ್ಲಿ 7 ಸೀಟರ್ ಕಾರೊಂದು ಲಭ್ಯವಿದೆ ಎಂದು ಹಲವರಿಗೆ ತಿಳಿದಿಲ್ಲ. ಹೌದು ರೂ.7 ಲಕ್ಷದ ಬಜೆಟ್‌ನಲ್ಲಿ 7 ಆಸನಗಳ ಕಾರನ್ನು ನೀವು ಮನೆಗೆ ಕೊಂಡೊಯ್ಯಬಹುದು.
7 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಹ್ಯಾಚ್‌ಬ್ಯಾಕ್ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ನೀವು 7 ಆಸನಗಳ ಕಾರನ್ನು ಖರೀದಿಸಲು ಬಯಸಿದರೆ, ಈಗ ನಿಮ್ಮ ಕನಸು ರೂ.7 ಲಕ್ಷದೊಳಗೆ ನನಸಾಗಬಹುದು. ಹೌದು, ಈಗ ನೀವು 7 ಆಸನಗಳ ಕಾರನ್ನು ರೂ. 10-12 ಲಕ್ಷ ಖರ್ಚು ಮಾಡುವ ಅಗತ್ಯವಿಲ್ಲ, ಬದಲಿಗೆ ನೀವು ಅದನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

ರೆನಾಲ್ಟ್ ಟ್ರೈಬರ್ (Renault triber): ದೇಶದಲ್ಲಿ ಅತ್ಯಂತ ಕೈಗೆಟುಕುವ 7-ಆಸನಗಳ MPV (ಮಲ್ಟಿ ಪರ್ಪಸ್ ವೆಹಿಕಲ್) ರೆನಾಲ್ಟ್ ಟ್ರೈಬರ್ ಆಗಿದೆ. ಇದರ ಬೆಲೆ ರೂ. 6.3 ಲಕ್ಷದಿಂದ ಆರಂಭವಾಗಿ ರೂ. 8.97 ಲಕ್ಷ (ಎಕ್ಸ್ ಶೋ ರೂಂ)ವೆರೆಗೆ ಇದೆ. ಕಂಪನಿಯು ಇದನ್ನು RXE, RXL, RXT ಮತ್ತು RXZ ಎಂಬ ನಾಲ್ಕು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ.
Renault triber ಪ್ರಸ್ತುತ ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳು ಇಲ್ಲ. ಏಕೆಂದರೆ ಇದರ ಬೆಲೆಯಲ್ಲಿ ಇನ್ಯಾವುದೇ 7 ಸೀಟರ್ ಕಾರು ಇಲ್ಲ. ಹಾಗಾಗಿ ಬೆಲೆಯನ್ನು ಮಾತ್ರ ಪರಿಗಣಿಸಿದರೆ, ಈ ವಿಭಾಗದಲ್ಲಿ ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ನಿಯೋಸ್‌ನೊಂದಿಗೆ ಸ್ಪರ್ಧಿಸುತ್ತದೆ. ಹಾಗೆಯೇ ಮಹೀಂದ್ರಾ ಬೊಲೆರೊವನ್ನು ಸಹ ಸ್ಪರ್ಧಿ ಎಂದು ಪರಿಗಣಿಸಬಹುದು.

ಈ MPV ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ತನ್ನ ವಿಭಾಗದಲ್ಲಿ ಅತ್ಯುತ್ತಮ ಸ್ಥಳ ಮತ್ತು ಸೌಕರ್ಯವನ್ನು ನೀಡುತ್ತದೆ. ಈ ಕಾರು 84 ಲೀಟರ್ ಬೂಟ್ ಸ್ಪೇಸ್ ಹೊಂದಿದ್ದು, ಮೂರನೇ ಸಾಲಿನ ಆಸನಗಳನ್ನು ಮಡಚುವ ಮೂಲಕ 625 ಲೀಟರ್ ವರೆಗೆ ಬೂಟ್ ಅನ್ನು ವಿಸ್ತರಿಸಬಹುದು. ಇನ್ನು ಸುರಕ್ಷತೆ ವಿಷಯಕ್ಕೆ ಬಂದರೆ ಜಾಗತಿಕ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಟ್ರೈಬರ್‌ಗೆ 4-ಸ್ಟಾರ್ ರೇಟಿಂಗ್ ನೀಡಲಾಗಿದೆ.
ಪ್ರಯಾಣಿಕರ ಸುರಕ್ಷತೆಗಾಗಿ, ಇದು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಸ್ಟಾರ್ಟ್ ಅಸಿಸ್ಟ್ (HSA), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ನಾಲ್ಕು ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ ಸಹ ಲಭ್ಯವಿದೆ.
ವೈಶಿಷ್ಟ್ಯಗಳು: ರೆನಾಲ್ಟ್ ಟ್ರೈಬರ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇಯೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್ ಮತ್ತು ಮೊಬೈಲ್ ಫೋನ್ ಸಂಪರ್ಕದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಇವುಗಳ ಹೊರತಾಗಿ, ರೆನಾಲ್ಟ್ ಟ್ರೈಬರ್ MPV ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಸೆಂಟರ್ ಕನ್ಸೋಲ್‌ನಲ್ಲಿ ಕೂಲ್ಡ್ ಸ್ಟೋರೇಜ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆಯುತ್ತದೆ. ಇದರ ಹೊರತಾಗಿ, ಸಾಮಾನ್ಯ ಕೀ ಬದಲಿಗೆ ಸ್ಮಾರ್ಟ್ ಕಾರ್ಡ್ ಪ್ರವೇಶ ಕೀ ಸಹ ಅದರ ಉನ್ನತ ರೂಪಾಂತರಗಳಲ್ಲಿ ಲಭ್ಯವಿದೆ.
ಎಂಜಿನ್ ಮತ್ತು ಪವರ್: ರೆನಾಲ್ಟ್ ಟ್ರೈಬರ್ 1-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 72 bhp ಗರಿಷ್ಠ ಪವರ್ ಮತ್ತು 96 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಟ್ರೈಬರ್ 20 ಕಿ.ಮೀ ಮೈಲೇಜ್ ನೀಡುತ್ತದೆ.


Click it and Unblock the Notifications