ಈಗ ಬಿಟ್ರೆ ಸಿಗಲ್ಲ: 'Renault' ಕಂಪನಿಯಿಂದ ಸೂಪರ್ ಘೋಷಣೆ.. ಇಲ್ಲಿದೆ ಮಾಹಿತಿ

ಫ್ರೆಂಚ್ ವಾಹನ ತಯಾರಕ ರೆನಾಲ್ಟ್ (Renault) ಕೈಗೆಟುಕುವ ಬೆಲೆಯ ಕಾರುಗಳನ್ನು ಸೇಲ್ ಮಾಡುವ ಮೂಲಕ ಭಾರತದಲ್ಲಿ ಫೇಮಸ್ ಆಗಿದೆ. ಇದೀಗ, ಈ ತಿಂಗಳಲ್ಲಿ ಟ್ರೈಬರ್, ಕಿಗರ್ ಮತ್ತು ಕ್ವಿಡ್ ಹ್ಯಾಚ್‌ಬ್ಯಾಕ್‌ಗಳಿಗೆ ಬರೋಬ್ಬರಿ ರೂ.62,000ವರೆಗೆ ಡಿಸ್ಕೌಂಟ್ ನೀಡುತ್ತಿದೆ. ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.

2022ರ ರೆನಾಲ್ಟ್ ಟ್ರೈಬರ್ ಹ್ಯಾಚ್‌ಬ್ಯಾಕ್ ಗರಿಷ್ಠ ರಿಯಾಯಿತಿ ಪ್ರಯೋಜನವನ್ನು ಹೊಂದಿದ್ದು, ಅದರಲ್ಲಿ ರೂ.25,000 ನಗದು ರಿಯಾಯಿತಿ, ರೂ. 25,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.12,000 ಕಾರ್ಪೊರೇಟ್ ಡಿಸ್ಕೌಂಟ್ ಇದೆ. ಜೊತೆಗೆ ಕಂಪನಿಯು, ತನ್ನ ಗ್ರಾಹಕರಿಗೆ ಸ್ಕ್ರ್ಯಾಪೇಜ್ ಸ್ಕೀಮ್ ಅಡಿ ರೂ.10,000ದವರೆಗೆ ಹೆಚ್ಚುವರಿಯಾಗಿ ಪ್ರಯೋಜನವನ್ನು ನೀಡುತ್ತಿದೆ. ಇದು ಅದರ ಅಭಿಮಾನಿಗಳಿಗೆ ಖುಷಿ ತಂದಿದೆ.

ಈಗ ಬಿಟ್ರೆ ಸಿಗಲ್ಲ: Renault ಕಂಪನಿಯಿಂದ ಸೂಪರ್ ಘೋಷಣೆ.. ಇಲ್ಲಿದೆ ಮಾಹಿತಿ

2023ರ ರೆನಾಲ್ಟ್ ಟ್ರೈಬರ್ ಹ್ಯಾಚ್‌ಬ್ಯಾಕ್ ಮಾದರಿ, ರೂ.15,000 ನಗದು ರಿಯಾಯಿತಿ ಹೊಂದಿದೆ. OBD2 ಎಮಿಷನ್ ಮಾನದಂಡಗಳ ಅಣುಗುಣವಾಗಿ ನವೀಕರಿಣಗೊಂಡಿರುವ ಈ ಕಾರು, ರೂ.42,000 ವರೆಗೆ ಇತರೆ ಪ್ರಯೋಜನಗಳನ್ನು ಒಳಗೊಂಡಿದೆ. ಅದರಲ್ಲಿ 25,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.12,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಹೊಂದಿದೆ. ಈ ಕಾರು, ರೂ.6.33 - 8.97 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.

ಈ ತಿಂಗಳು, ರೆನಾಲ್ಟ್ ಕಿಗರ್ ಕೂಡ ಭರ್ಜರಿ ರಿಯಾಯತಿ ಪ್ರಯೋಜನವನ್ನು ಹೊಂದಿದ್ದು, ಈ ಹ್ಯಾಚ್‌ಬ್ಯಾಕ್‌ನ 2022ರ ಮಾದರಿಗೆ ರೂ.62,000ವರೆಗೆ ರಿಯಾಯಿತಿ ಪ್ರಯೋಜನ ಸಿಗುತ್ತದೆ. ಅದರಲ್ಲೂ ರೂ.25,000 ನಗದು ರಿಯಾಯಿತಿ, ರೂ. 25,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.12,000 ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದ್ದು, ಹೆಚ್ಚುವರಿಯಾಗಿ ಸ್ಕ್ರ್ಯಾಪೇಜ್ ಸ್ಕೀಮ್ ಅಡಿ ರೂ.10,000ದವರೆಗೆ ಪ್ರಯೋಜನ ಹೊಂದಿದೆ.

ದೇಶಾದ್ಯಂತ OBD2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಣಗೊಂಡಿರುವ ಈ ರೆನಾಲ್ಟ್ ಕಿಗರ್ ಕೂಡ ರೂ.52,000 ವರೆಗೆ ಡಿಸ್ಕೌಂಟ್ ಆಫರ್ ಪಡೆದುಕೊಂಡಿದೆ. ಅದರಲ್ಲಿ ರೂ.25,000 ಕ್ಯಾಶ್ ರಿಯಾಯಿತಿ, ರೂ.20,000 ಎಕ್ಸ್ಚೇಂಜ್ ಬೋನಸ್ ಅನ್ನು ಹೊಂದಿದೆ. ಆಯ್ದ ರೂಪಾಂತರಗಳು ರೂ.12,000 ಕಾರ್ಪೊರೇಟ್ ಡಿಸ್ಕೌಂಟ್ ಪಡೆದಿವೆ. ಈ ಕಾರು, ರೂ.6.50 ರಿಂದ ರೂ.11.23 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

2022ರ ರೆನಾಲ್ಟ್ ಕ್ವಿಡ್ ಸಹ ದೊಡ್ಡ ಪ್ರಮಾಣದಲ್ಲಿ ರಿಯಾಯಿತಿ ಪ್ರಯೋಜನಗಳನ್ನು ಪಡೆಡಿದ್ದು, ಒಟ್ಟು ರೂ.57,000 ಡಿಸ್ಕೌಂಟ್ ಆಫರ್ ಪಡೆದಿದೆ. ಅದರಲ್ಲಿ ರೂ.25,000 ನಗದು ರಿಯಾಯಿತಿ, ರೂ.20,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.12,000 ಕಾರ್ಪೊರೇಟ್ ರಿಯಾಯಿತಿ ಸೇರಿದೆ. OBD2 ಮಾನದಂಡಗಳಿಗೆ ಅನುಗುಣವಾಗಿ ನವೀಕರಣಗೊಂಡಿರುವ ಕ್ವಿಡ್ ರೂ.12,000 ಕಾರ್ಪೊರೇಟ್ ರಿಯಾಯಿತಿ ಮತ್ತು ರೂ.5,000 ಕ್ಯಾಶ್ ಡಿಸ್ಕೌಂಟ್ ಪಡೆದಿದೆ.

ಕ್ವಿಡ್, ರೆನಾಲ್ಟ್ ಕಂಪನಿ ಎಂಟ್ರಿ ಲೆವೆಲ್ ಮಾದರಿಯಾಗಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದು ರೂ.4.70 ಲಕ್ಷದಿಂದ ರೂ. 6.33 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. ನೀವು ಕೂಡ ಈ ಕಾರುಗಳನ್ನು ಖರೀದಿಸಲು ಇದು ಉತ್ತಮ ಅವಕಾಶವಾಗಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ರಿಯಾಯಿತಿ ಪ್ರಯೋಜನಗಳು ನಗರದಿಂದ ನಗರಕ್ಕೆ ಬದಲಾಗಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರದ ಡೀಲರ್‌ಶಿಪ್ ಗೆ ಭೇಟಿ ನೀಡುವುದು ಒಳಿತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ನಿಮ್ಮ ಸ್ನೇಹಿತ ಜೊತೆಗೂ ಶೇರ್ ಮಾಡಿ.

More from DriveSpark

Article Published On: Wednesday, May 17, 2023, 18:57 [IST]
English summary
Renault triber kiger kwid discounts may
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+