Rolls Royce: 9 ಕೋಟಿಯ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು ಚೆನ್ನೈಗೆ ಆಗಮನ, ಮಾಲೀಕ ಯಾರು?

ವಿಶ್ವದ ಶ್ರೀಮಂತರಿಗಾಗಿ ಕಾರು ತಯಾರಿಸುವ ಏಕೈಕ ಕಂಪನಿಯಾಗಿ ಬ್ರಿಟನ್ ಮೂಲದ ರೋಲ್ಸ್ ರಾಯ್ಸ್ (Rolls Royce) ಖ್ಯಾತಿಗಳಿಸಿದೆ. ಭಾರತದಲ್ಲಿಯೂ ಕಂಪನಿಯ ಕಾರುಗಳಿಗೆ ಸಖತ್ ಕ್ರೇಜ್ ಇದ್ದು, ಬೆರಳೆಣಿಕೆಯಷ್ಟು ಉದ್ಯಮಿಗಳು, ಸೆಲೆಬ್ರಿಟಿಗಳು ಈ ಕಾರಿನ ಮಾಲೀಕರಿದ್ದಾರೆ. ಸದ್ಯ, ಚೆನ್ನೈಗೆ ಭಾರತದ ಮೊದಲ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು ಆಗಮಿಸಿದೆ.

ನೂತನ ರೋಲ್ಸ್ ರಾಯ್ಸ್ ಸ್ಪೆಕ್ಟರ್ (Rolls Royce Spectre) ಕಾರನ್ನು ಅಲ್ಲಿನ ಪ್ರಖ್ಯಾತ ವ್ಯಕ್ತಿಯೊಬ್ಬರು ವಿತರಣೆ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ಅವರ ಬಗ್ಗೆ ವಿವರಗಳು ಲಭ್ಯವಾಗಿಲ್ಲ. ಆಕರ್ಷಕವಾಗಿರುವ ಸ್ಪೆಕ್ಟರ್ ಸೆಡಾನ್‌ನ ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಭಾರತದ ಮಾರುಕಟ್ಟೆಯಲ್ಲಿ ಕಂಪನಿಯು ಅಧಿಕೃತವಾಗಿ ಈ ಕಾರನ್ನು ಬಿಡುಗಡೆಗೊಳಿಸಿಲ್ಲ. ರೋಲ್ಸ್ ರಾಯ್ಸ್ ಸ್ಪೆಕ್ಟರ್ ರೂ.9 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

Rolls Royce: 9 ಕೋಟಿಯ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು ಚೆನ್ನೈಗೆ ಆಗಮನ, ಮಾಲೀಕ ಯಾರು?

ಹೊಸ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು, ಟ್ರೇಲರ್‌ನಿಂದ ಹೊರಬರುತ್ತಿರುವುದನ್ನು ಫೋಟೋವನ್ನು ನಾವು ನೋಡಬಹುದು. ಸ್ಪೆಕ್ಟರ್ ಸೆಡಾನ್, ಆಕರ್ಷಕ ಸ್ಲ್ಯಾಂಟ್ ಬ್ಯಾಕ್ ರೂಫ್ ಹೊಂದಿದ್ದು, ಬಾನೆಟ್ ಹಾಗೂ ಬಲ ಭಾಗದಲ್ಲಿರುವ ಫ್ರಂಟ್ ಡೋರ್ ತೆಗೆದಿರುವುದನ್ನು ಚಿತ್ರದಲ್ಲಿ ಕಾಣಬಹುದು. ಈ ಕಾರು, ದೇಶೀಯ ಮಾರುಕಟ್ಟೆಗೆ ಬಹುತೇಕ ಮುಂದಿನ ವರ್ಷ (2024) ಲಾಂಚ್ ಆಗಬಹುದು.

ಈ ವರ್ಷದ ಆರಂಭದಲ್ಲಿ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಸೆಡಾನ್‌ನ್ನು ಕೊರಿಯಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದು, ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರಾಗಿದೆ. 2030ರ ವೇಳೆಗೆ ತನ್ನೆಲ್ಲ ಕಾರುಗಳನ್ನು ಎಲೆಕ್ಟ್ರಿಕ್ ರೂಪದಲ್ಲಿ ಪರಿಚಯಿಸಲು ರೋಲ್ಸ್ ರಾಯ್ಸ್ ಯೋಜಿಸುತ್ತಿದೆ. ವಿನ್ಯಾಸದ ದೃಷ್ಟಿಯಿಂದ ದೊಡ್ಡದಾದ ಗ್ರಿಲ್ ಒಳಗೊಂಡಿದೆ. ರಸ್ತೆಯಲ್ಲಿ ಹೋಗಬೇಕಾದರೆ ಈ ಕಾರಿನ ಡಿಸೈನ್ ಎಲ್ಲರ ಗಮನವನ್ನು ಸೆಳೆಯುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Rolls Royce: 9 ಕೋಟಿಯ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು ಚೆನ್ನೈಗೆ ಆಗಮನ, ಮಾಲೀಕ ಯಾರು?

ನೂತನ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರಿನ ಸುತ್ತಳತೆ ಬಗ್ಗೆ ಮಾತನಾಡುವುದಾದರೆ, ಈ ಕಾರು, 5,453 ಎಂಎಂ ಉದ್ದ, 2,080 ಎಂಎಂ ಅಗಲ ಮತ್ತು 1,559 ಎಂಎಂ ಎತ್ತರವನ್ನು ಹೊಂದಿದೆ. 2 - ಡೋರ್ ಇದ್ದು, ಕೂಪ್ ಆಕಾರವನ್ನು ಹೊಂದಿದ್ದರೂ, ಉದ್ದವಾದ ವೀಲ್‌ಬೇಸ್ ಒಳಗೊಂಡಿದ್ದು, 3,210 ಎಂಎಂ ಇದೆ.

ಈ ಕಾರು, ಬಿಎಂಡಬ್ಲ್ಯೂದ ಎಲೆಕ್ಟ್ರಿಕ್ ಮೋಟಾರ್‌ ಹೊಂದಿದ್ದು, 576.6 bhp ಗರಿಷ್ಠ ಪವರ್ ಹಾಗೂ 900 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಸಂಪೂರ್ಣ ಚಾರ್ಜ್ ನಲ್ಲಿ 520 ಕಿಲೋಮೀಟರ್‌ (WLTP) ರೇಂಜ್ ನೀಡುತ್ತದೆ. ಕೆಲವೇ 4.5 ಸೆಕೆಂಡುಗಳಲ್ಲಿ 100 km/h ವೇಗವನ್ನು ಪಡೆಯಲಿದೆ.

Rolls Royce: 9 ಕೋಟಿಯ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು ಚೆನ್ನೈಗೆ ಆಗಮನ, ಮಾಲೀಕ ಯಾರು?

ದೇಶದಲ್ಲಿ ದೊಡ್ಡ - ದೊಡ್ಡ ಸೆಲೆಬ್ರಿಟಿಗಳು ರೋಲ್ಸ್ ರಾಯ್ಸ್ ಕಾರಿನ ಮಾಲೀಕರಾಗಿದ್ದಾರೆ. ಅಕ್ಷಯ್ ಕುಮಾರ್, ಚಿರಂಜೀವಿ, ಶಾರುಖ್ ಖಾನ್, ಪ್ರಭಾಸ್, ಅಮೀರ್ ಖಾನ್, ಪ್ರಿಯಾಂಕಾ ಚೋಪ್ರಾ, ವಿಜಯ್ ದಳಪತಿ, ಹೃತಿಕ್ ರೋಷನ್ ಈ ಕಾರಿನ ಒಡೆಯರಾಗಿದ್ದಾರೆ. ಇನ್ನು, ಚೆನ್ನೈಗೆ ಬಂದಿರುವ ನೂತನ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರನ್ನು ಯಾರು ವಿತರಣೆ ಪಡೆದಿದ್ದಾರೆ ಎಂಬ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 11, 2023, 13:06 [IST]
English summary
Rolls royce spectre electric car arrives in chennai worth rs 9 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+