ಎಲೆಕ್ಟ್ರಿಕ್ ವಲಯದಲ್ಲೂ ಬಿರುಗಾಳಿ ಎಬ್ಬಿಸಲು ರೋಲ್ಸ್ ರಾಯ್ಸ್ ಇವಿ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

ಜನಪ್ರಿಯ ಮತ್ತು ಅತ್ಯಂತ ದುಬಾರಿ ಕಾರುಗಳ ತಯಾರಕರಾದ ರೋಲ್ಸ್ ರಾಯ್ಸ್ (Rolls Royce) ದಕ್ಷಿಣ ಕೊರಿಯಾದಲ್ಲಿ ತನ್ನ ಹೊಸ ಸ್ಪೆಕ್ಟರ್ ಹೆಸರಿನ ಬ್ರ್ಯಾಂಡ್‌ನ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗೊಳಿಸಿದೆ. ಏಷ್ಯಾ-ಪೆಸಿಫಿಕ್ ರಾಷ್ಟ್ರಗಳಲ್ಲಿ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಿದ ಬ್ರಿಟಿಷ್ ಕಾರು ತಯಾರಕರಿಗೆ ದಕ್ಷಿಣ ಕೊರಿಯಾ ಮೊದಲ ದೇಶವಾಗಿದೆ ಎಂದು ರೋಲ್ಸ್ ರಾಯ್ಸ್ ಹೇಳಿದೆ.

ಹೊಸ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರನ್ನು ಕೊರಿಯಾದಲ್ಲಿ 620 ಮಿಲಿಯನ್ ವೋನ್ ($486,000 ಅಥವಾ ಸುಮಾರು 3.98 ಕೋಟಿ ರೂ.) ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಆಯ್ಕೆಗಳನ್ನು ಅವಲಂಬಿಸಿ ಬೆಲೆ ಹೆಚ್ಚಾಗುತ್ತದೆ. ಕೊರಿಯಾದಲ್ಲಿ ರೋಲ್ಸ್ ರಾಯ್ಸ್ ಮಾರಾಟದ ಬೆಳವಣಿಗೆಯು ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಉದ್ಯಮಿಗಳ ಸಂಖ್ಯೆಯಂತಹ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ.

Rolls Royce

ರೋಲ್ಸ್ ರಾಯ್ಸ್ ಕಂಪನಿಯ ಬಗ್ಗೆ ಪರಿಚಯದ ಅಗತ್ಯವಿಲ್ಲ. ಪ್ರತಿಯೊಬ್ಬರೂ ಈ ಕಂಪನಿಯನ್ನು ಚೆನ್ನಾಗಿ ತಿಳಿದಿರುತ್ತೀರಾ. ರೋಲ್ಸ್ ರಾಯ್ಸ್ ವಿಶ್ವದ ದುಬಾರಿ ಐಷಾರಾಮಿ ಕಾರುಗಳ ತಯಾರಕರಲ್ಲಿ ಮೊದಲ ಸ್ಥಾನದಲ್ಲಿದೆ. ಈ . ಕಂಪನಿಯ ಕಾರುಗಳನ್ನು ಖರೀದಿಸಲು ಅತಿ ಶ್ರೀಮಂತರ ನಡುವೆ ಭಾರೀ ಪೈಪೋಟಿ ಇರುತ್ತದೆ. ಇದೇ ವೇಳೆ ಜಗತ್ತಿನಾದ್ಯಂತ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಜನರು ಕೂಡ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ.

ಇದಕ್ಕಾಗಿ ವಿಶ್ವದ ದುಬಾರಿ ಐಷಾರಾಮಿ ಕಾರುಗಳ ತಯಾರಕರು ಕೂಡ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದೆ. ದಕ್ಷಿಣ ಕೊರಿಯಾದಲ್ಲಿ ರೋಲ್ಸ್ ರಾಯ್ಸ್ ತನ್ನ ಈ ಹೊಸ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಕಾರಿಗಾಗಿ ರೋಲ್ಸ್ ರಾಯ್ಸ್ ಕಂಪನಿಯು ಭರ್ಜರಿ ಬುಕ್ಕಿಂಗ್ ಗಳನ್ನು ಪಡೆದುಕೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಎಷ್ಟು ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ ಎಂಬ ಮಾಹಿತಿಗಳನ್ನು ರೋಲ್ಸ್ ರಾಯ್ಸ್ ಕಂಪನಿಯು ಬಹಿರಂಗಪಡಿಸಿಲ್ಲ.

Rolls Royce

ಹೊಸ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರಿನ ವಿತರಣೆಯು 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಾರಂಭವಾಗಲಿದೆ ಎಂದು ರೋಲ್ಸ್ ರಾಯ್ಸ್ ಹೇಳಿದೆ. ದಕ್ಷಿಣ ಕೊರಿಯಾದಲ್ಲಿ ಈ ರೋಲ್ಸ್ ರಾಯ್ಸ್ ಕಾರಿನ ಮಾರಾಟವು ವಿವಿಧ ಅಂಶಗಳ ಆಧಾರದ ಮೇಲೆ ಬೆಳೆಯುತ್ತಿದೆ. ಏಷ್ಯಾ ಪೆಸಿಫಿಕ್‌ನಲ್ಲಿ ದಕ್ಷಿಣ ಕೊರಿಯಾ ಅತ್ಯಂತ ಅಭಿವೃದ್ಧಿ ಹೊಂದಿದ. ದಕ್ಷಿಣ ಕೊರಿಯಾದ ಆರ್ಥಿಕ ಪರಿಸ್ಥಿತಿಗಳು ಮತ್ತು ಉದ್ಯಮಿಗಳ ಸಂಖ್ಯೆ ಗಣನೀಯವಾಗಿ ಬೆಳೆಯುತ್ತಿದೆ.

ಇದರಿಂದಾಗಿ ದೇಶದ ಜನರು ರೋಲ್ಸ್ ರಾಯ್ಸ್ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅವರು ಅದನ್ನು ಖರೀದಿಸಲು ಸಾಕಷ್ಟು ಸಾಮರ್ಥ್ಯವಿರುವ ವ್ಯಕ್ತಿಗಳಾಗಿ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ. ಹೀಗಾಗಿ ರೋಲ್ಸ್ ರಾಯ್ಸ್ ಕಾರಿಗೆ ದೇಶದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ರೋಲ್ಸ್ ರಾಯ್ಸ್ ತನ್ನ ಕಾರುಗಳನ್ನು ದಕ್ಷಿಣ ಕೊರಿಯಾದಲ್ಲಿ 2004 ರಲ್ಲಿ ಮಾರಾಟ ಮಾಡಲು ಪ್ರಾರಂಭಿಸಿತು.

Rolls Royce

ಆ ವರ್ಷ ರೋಲ್ಸ್ ರಾಯ್ಸ್ ಕೇವಲ 5 ಕಾರುಗಳನ್ನು ಮಾರಾಟ ಮಾಡಿತು. ಆದರೆ ಕ್ರಮೇಣ ಈ ಮಾರಾಟ ಹೆಚ್ಚಾಗತೊಡಗಿತು. ಕಂಪನಿಯು 2020 ರಲ್ಲಿ 171 ಕಾರುಗಳನ್ನು, 2021 ರಲ್ಲಿ 225 ಕಾರುಗಳನ್ನು ಮತ್ತು 2022 ರಲ್ಲಿ 234 ಕಾರುಗಳನ್ನು ದಕ್ಷಿಣ ಕೊರಿಯಾದಲ್ಲಿ ಮಾರಾಟ ಮಾಡಿದೆ. ಈ ವರ್ಷ ಅದರ ಮಾರಾಟವು ಹೆಚ್ಚಾಗಬಹುದೆಂದು ನಾವು ನಿರೀಕ್ಷಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, June 17, 2023, 15:11 [IST]
English summary
Rolls royce spectre electric car launched in south korea details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+