ಈ ಕಾರುಗಳು ಸೆಕೆಂಡ್ ಹ್ಯಾಂಡ್ ಆಗಿ ಸಿಕ್ಕರೆ ತಕ್ಷಣ ಖರೀದಿಸಿ... ನಾಳೆ ಒಳ್ಳೆಯ ಬೆಲೆಗೆ ಹೋಗುತ್ತವೆ!
ಪ್ರಸ್ತುತದಲ್ಲಿ ಇದ್ದುಕೊಂಡು ಭವಿಷ್ಯದ ಬಗ್ಗೆ ಯೋಚಿಸುವ ಜನರು ಎಂದಿಗೂ ಸೋಲುವುದಿಲ್ಲ. ಅವರ ಮುಂದಾಲೋಚನೆಯೇ ಅವರ ಆರ್ಥಿಕ ಬೆಳವಣಿಗೆಗೆ ಅಡಿಪಾಯವಾಗಿರುತ್ತದೆ. ನೀವು ಕೂಡ ಆಟೋ ವಲಯದಲ್ಲಿ ಮುಂದಾಲೋಚನೆ ಮಾಡಲು ನಾವು ಸಹಕರಿಸುತ್ತಿದ್ದೇವೆ. ಈಗಿನ ವಾಹಗಳು ಮುಂದೊಂದು ದಿನ ಖಂಡಿತ ಉತ್ತಮ ಬೆಲೆಗೆ ಮಾರಾಟವಾಗುತ್ತವೆ.
ಈ ಹಿಂದೆ ಇದ್ದ Rx 100 ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಹಾಗೆಯೇ ಕಾರುಗಳಲ್ಲಾದರೇ ಫೋಕ್ಸ್ ವ್ಯಾಗನ್ ಪೊಲೊದಂತಹ ಕಾರುಗಳು ಸ್ಥಗಿತಗೊಂಡರೂ ಮಾರುಕಟ್ಟೆಯಲ್ಲಿ ಸೆಕೆಂಡ್ಸ್ ಸಿಕ್ಕರೇ ಅವುಗಳನ್ನು ಖರೀದಿಸಲು ಮುಗಿಬೀಳುತ್ತಾರೆ. ಇಂತಹ ಬೇಡಿಕೆಯಿರುವ ಹಲವು ಕಾರುಗಳಿವೆ. ಅವುಗಳು ಸೆಕೆಂಡ್ಸ್‌ನಲ್ಲಿ ಸಿಕ್ಕರೇ ಖಂಡಿತ ಕೈಬಿಡಬೇಡಿ ಮುಂದೊಂದು ದಿನ ಉತ್ತಮ ಲಾಭ ತಂದುಕೊಡುತ್ತವೆ.

ಮಾರುತಿ ಓಮ್ನಿ: ಕೆಲವೇ ವರ್ಷಗಳಲ್ಲಿ ಕ್ಲಾಸಿಕ್ ಎಂದು ಮಾರುತಿ ಓಮ್ನಿ ಕರೆಸಿಕೊಳ್ಳಲಿದೆ. ಅದೆಷ್ಟೋ ಜನ ತಮ್ಮ ಸಣ್ಣ ವಯಸ್ಸಿನಲ್ಲಿ ಇದರಲ್ಲೇ ಶಾಲೆಗೂ ಹೊರಟಿರುವ ದಿನಗಳನ್ನು ನೆನಪಿಸಿಕೊಳ್ಳಬಹುದು. ಇದು ಮಾರುತಿಯಿಂದ ಬಿಡುಗಡೆಯಾಗಿದ್ದ ಎರಡನೇ ಮಾದರಿಯಾಗಿದ್ದು, 1984 ರಲ್ಲಿ ಬಿಡುಗಡೆಯಾಗಿತ್ತು. ಸುದೀರ್ಘ ಪ್ರಯಾಣ ಮಾಡಿದ್ದ ಓಮ್ನಿ ವ್ಯಾನ್ 2020 ರಲ್ಲಿ ಸ್ಥಗಿತಗೊಂಡಿತು.
ಅದರ ಸ್ಲೈಡಿಂಗ್ ಡೋರ್‌ಗಳಿಂದಲೇ ಸಖತ್ ಫೇಮಸ್ ಆಗಿದ್ದ ಈ ಮಾದರಿಯು, BS6 ಹೊರಸೂಸುವಿಕೆಯ ಮಾನದಂಡಗಳ ಕಾರಣದಿಂದಾಗಿ ಇದನ್ನು ನಿಲ್ಲಿಸಬೇಕಾಯಿತು. ಇಂದಿಗೂ ಹಲವರು ಈ ಮಾಸ್ಟರ್ ಫಿಸನ್ನು ಬಳಸುತ್ತಿದ್ದಾರೆ. ಸದ್ಯ ಈ ವ್ಯಾನ್‌ಗಳು ಸೆಕೆಂಡ್ಸ್ ನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಹಾಗಾಗಿ ಖರೀದಿಸಿಟ್ಟಿಕೊಂಡರೆ ಭವಿಷ್ಯದಲ್ಲಿ ಉತ್ತಮ ಬೆಲೆ ಸಿಗಬಹುದು.

ಟಾಟಾ ನ್ಯಾನೋ: ರತನ್ ಟಾಟಾ ಅವರ ಕನಸಿನ ಕಾರು, ದೇಶದಲ್ಲಿ ಕ್ರಾಂತಿ ಸೃಷ್ಟಿಸಿದ್ದ ಕಾರು. ಆಗಿನ ಕಾಲಕ್ಕೆ ಇದರ ಬಜಾರ್ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಈಗ ಸ್ಥಗಿತ ಗೊಂಡಿದ್ದು, ಆಗೊಮ್ಮೆ ಈಗೊಮ್ಮೆ ರಸ್ತೆಗಳಲ್ಲಿ ಕಾಣಸಿಗುತ್ತದೆ. ಮುಂಬರುವ ವರ್ಷಗಳಲ್ಲಿ ಇದು ಕಣ್ಮರೆಯಾಗಲಿದ್ದು, ಭವಿಷ್ಯದಲ್ಲಿ ಬೇಡಿಕೆ ಹೆಚ್ಚಾಗಲಿದೆ. ಅನೇಕ ಜನರು ಈಗಲೇ ಟಾಟಾ ನ್ಯಾನೋವನ್ನು ಹುಡುಕುತ್ತಿದ್ದಾರೆ. ಸಿಕ್ಕರೆ ಖಂಡಿತ ನೀವು ಬಿಡಬೇಡಿ.
ಮಾರುತಿ 800: ಈ ಚಿಕ್ಕ ಹ್ಯಾಚ್‌ಬ್ಯಾಕ್‌ಗೆ ಯಾವುದೇ ಪರಿಚಯದ ಅಗತ್ಯವಿಲ್ಲ. 1983 ರಿಂದ 2014 ರವರೆಗೆ ಉತ್ಪಾದನೆಯಲ್ಲಿತ್ತು. ಈ ಜನಪ್ರಿಯ ಹ್ಯಾಚ್‌ಬ್ಯಾಕ್ ಈಗಲೂ ಸೆಕೆಂಡ್ಸ್‌ನಲ್ಲಿ ಖರೀದಿಗೆ ಲಭ್ಯವಿದೆ. ಮಾಡಲ್ 1 ಮಾರುತಿ 800 ತೀರಾ ಅಪರೂಪವಾಗಿರುವುದರಿಂದ ಮುಂಬರುವ ದಿನಗಳಲ್ಲಿ ಕ್ಲಾಸಿಕ್ ಪಟ್ಟಕೇರುವುದು ಖಚಿತ. ಇದನ್ನು ಖರೀದಿಸಿಟ್ಟುಕೊಂಡರೆ ಭವಿಷ್ಯದಲ್ಲಿ ಉತ್ತಮ ಬೆಲೆ ಸಿಗಬಹುದು.

ಹೋಂಡಾ ಸಿಟಿ ಟೈಪ್ 2: ಹೋಂಡಾ ಸಿಟಿ ಟೈಪ್ 2 ವಿಶೇಷವಾಗಿ 1.5 ಲೀಟರ್ VTEC ಪೆಟ್ರೋಲ್ ಎಂಜಿನ್ ಮಾದರಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ ಎಂದರೂ ಸುಳ್ಳಾಗುವುದಿಲ್ಲ. ಮಾಡಿಫೈಗೊಳಿಸಿದ್ರೆ ಯಾವುದೇ ಸ್ಪೋರ್ಟ್ ಕಾರಿಗೂ ಕಮ್ಮಿಯಿಲ್ಲ ಎಂಬಂತಿರುತ್ತದೆ. ಸದ್ಯ ಈ ಕಾರನ್ನು ಹೊಂದಿರುವ ಮಾಲೀಕರು ಸೆಕೆಂಡ್ಸ್ ನಲ್ಲಿ ಮಾರುವುದಕ್ಕೂ ಸಿದ್ದರಿಲ್ಲ. ಒಂದು ವೇಳೆ ಸಿಕ್ಕರೆ ಕಂಡಿತ ಇದನ್ನು ಖರೀದಿಸಿ.
ಹಿಂದೂಸ್ತಾನ್ ಮೋಟಾರ್ಸ್ ಅಂಬಾಸಿಡರ್: 70-80 ರ ದಶಕದಲ್ಲಿ ಭಾರತೀಯ ಜನತೆಗೆ ಕಾರು ಎಂದರೆ ಹೀಗಿರುತ್ತದೆ ಎಂದು ತಿಳಿಸಿಕೊಟ್ಟ ಮಾದರಿ ಅಂಬಾಸಿಡರ್. ಕ್ಲಾಸಿಕ್ ಕಾರುಗಳನ್ನು ಸಂಗ್ರಿಹಿಸಿಟ್ಟುಕೊಳ್ಳುವವರು ಇಂದಿಗೂ ಅಂಬಾಸಿಡರ್ ಸಿಕ್ಕರೇ ದುಬಾರಿ ವೆಚ್ಚಕ್ಕೆ ಅದನ್ನು ಖರೀದಿಸಲು ಸಜ್ಜಾಗಿದ್ದಾರೆ. ಇಂದಿಗೂ ದೇಶದ ಹಲವೆಡೆ ಉತ್ತಮ ನಿರ್ವಹಣೆಯಲ್ಲಿರುವ ಅಂಬಾಸಿಡರ್‌ಗಳನ್ನು ನಾವು ನೊಡಬಹುದು. ಆದ್ರೆ ಮಾರಾಟಕ್ಕಿವೆಯೇ ಎಂಬುದು ನಮಗೂ ಖಚಿತವಿಲ್ಲ.


Click it and Unblock the Notifications








