ನಿಮ್ಮ ಹಳೆಯ ಕಾರನ್ನು ಆಧುನಿಕ ಪ್ರೀಮಿಯಂ ಕಾರಾಗಿ ಪರಿವರ್ತಿಸಲು ಸಿಂಪಲ್ ಟಿಪ್ಸ್
ಭಾರತದಲ್ಲಿ ಸದ್ಯ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳಲ್ಲಿ ಸಿಗುವ ಹಲವು ವೈಶಿಷ್ಟ್ಯಗಳು ಹಳೇ ಕಾರುಗಳಲ್ಲಿ ಇಲ್ಲ. ಈ ಹೊಸ ವೈಶಿಷ್ಟ್ಯಗಳಿಗಾಗಿ ನಿವು ಹೊಸ ಕಾರುಗಳನ್ನೇ ಖರೀದಿಸುವ ಅವಶ್ಯಕತೆಯಿಲ್ಲ. ಇರುವ ಕಾರುಗಳಲ್ಲಿಯೇ ನಿಮಗೆ ಹೊಸ ವೈಶಿಷ್ಟ್ಯಗಳನ್ನು ಸೇರಿಸಬಹುದು. ಅಂದಹಾಗೆ, ಯಾವುದೇ ಹಳೆಯ ಕಾರನ್ನು ಹೊಸದಾಗಿ ಪರಿವರ್ತಿಸುವ ಟಾಪ್ 5 ಟಿಪ್ಸ್ ಇಲ್ಲಿವೆ.
ಹೆಡ್-ಅಪ್ ಡಿಸ್ಪ್ಲೇ: ಚಾಲಕನ ವೀಕ್ಷಣಾ ಕ್ಷೇತ್ರದಲ್ಲಿ ಪ್ರಮುಖ ಮಾಹಿತಿಯನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾದ ಹೆಡ್ ಅಪ್ ಡಿಸ್ಪ್ಲೇ ಈಗಿನ ಅತ್ಯಂತ ಆಕರ್ಷಕ ಫೀಚರ್ ಎಂದೇ ಹೇಳಬಹುದು. ಅಂತೆಯೇ ಇದನ್ನು ಹಳೆಯ ಕಾರಿಗೆ ಸೇರಿಸುವುದರಿಂದ ಅದು ತುಂಬಾ ಆಧುನಿಕವಾಗಿಸಬಹುದು. ಹಾಗೆಯೇ ಚಾಲನಾ ಅನುಭವವನ್ನು ಸುಧಾರಿಸುತ್ತದೆ. ಇವು ಆಫ್ಟರ್ ಮಾರ್ಕೆಟ್‌ನಲ್ಲಿ ಸುಲಭವಾಗಿ ಸಿಗುತ್ತವೆ.

ಸ್ಮಾರ್ಟ್ ಇನ್ಫೋಟೈನ್ಮೆಂಟ್: ಹಳೆಯ ಕಾರನ್ನು ಹೊಸ ಕಾರಿನಂತೆ ಭಾವಿಸಲು ಸ್ಮಾರ್ಟ್ ಇನ್ಫೋಟೈನ್‌ಮೆಂಟ್ ಅತ್ಯುತ್ತಮ ವೈಶಿಷ್ಟ್ಯವಾಗಿದೆ. ಸ್ಮಾರ್ಟ್ ಇನ್ಫೋಟೈನ್‌ಮೆಂಟ್ ಯೂನಿಟ್‌ಗಳು ಹೆಚ್ಚಾಗಿ Android OS ಅನ್ನು ಒಳಗೊಂಡಿರುತ್ತವೆ ಮತ್ತು Google Maps, Apple CarPlay, Android Auto, ಡಯಲ್ ಪ್ಯಾಡ್, 4G ಸಂಪರ್ಕ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.
ಈ ಕೆಲವು ಸ್ಮಾರ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಳು ಬೃಹತ್ 9+ ಇಂಚಿನ ಟಚ್‌ಸ್ಕ್ರೀನ್ ಇಂಟರ್ಫೇಸ್‌ನೊಂದಿಗೆ ಬರುತ್ತವೆ. ಇದು ಹೆಚ್ಚು ಆಧುನಿಕ ನೋಟವನ್ನು ನೀಡುವ ಮೂಲಕ ಹಳೆಯ ಕಾರಿನ ವಯಸ್ಸನ್ನು ಗಮನಾರ್ಹವಾಗಿ ಮರೆಮಾಡುತ್ತದೆ. ಹಾಗೆಯೇ ಪ್ರಯಾಣಿಸುವಾಗ ಪ್ರಯಾಣಿಕರಿಗೆ ಉತ್ತಮ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಟಿಪಿಎಂಎಸ್: ಹೆಚ್ಚಿನ ಆಧುನಿಕ ಕಾರುಗಳು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನೊಂದಿಗೆ ಬರುತ್ತವೆ. ಈ ವ್ಯವಸ್ಥೆಯು ಚಲಿಸುವಾಗಲೂ ಪ್ರತಿ ಚಕ್ರದ ಮೇಲೆ ಟೈರ್ ಒತ್ತಡವನ್ನು ಪ್ರದರ್ಶಿಸುತ್ತದೆ. ಹೇಳುವುದಾದರೆ, TPMS ಅನ್ನು ಯಾವುದೇ ಹಳೆಯ ಕಾರಿಗಾದರೂ ಸೇರಿಸಬಹುದು. ಇದು ಸಾಕಷ್ಟು ಸೂಕ್ತ ಮತ್ತು ಅನುಕೂಲಕರವಾದ ವೈಶಿಷ್ಟ್ಯವಾಗಿದೆ.
360-ಡಿಗ್ರಿ ಕ್ಯಾಮೆರಾ: ಹಳೆಯ ಕಾರಿಗೆ 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾವನ್ನು ಸೇರಿಸುವುದು ನಿಜವಾಗಿಯೂ ಉತ್ತಮ ಅನುಕೂಲಕ್ಕಾಗಿ ಸಹಾಯ ಮಾಡುವ ಪರಿಕರವಾಗಿದೆ. ಇದು ಸುತ್ತಲೂ ಗೋಚರತೆಯನ್ನು ಸುಧಾರಿಸುತ್ತದೆ ಮತ್ತು ಬಿಗಿಯಾದ ಮತ್ತು ದಟ್ಟಣೆಯ ಸ್ಥಳಗಳಲ್ಲಿ ಪಾರ್ಕಿಂಗ್‌ಗೆ ಸಹಾಯ ಮಾಡುತ್ತದೆ. ಅಲ್ಲದೆ ಆಫ್-ರೋಡ್ ಕೋರ್ಸ್‌ಗಳನ್ನು ನ್ಯಾವಿಗೇಟ್ ಮಾಡಲು ಆಫ್-ರೋಡ್ ಕಾರುಗಳಲ್ಲಿ ಇರಬೇಕಾದ ತುಂಬಾ ಉಪಯುಕ್ತ ವೈಶಿಷ್ಟ್ಯವಾಗಿದೆ.

ವೆಂಟಿಲೇಟೆಡ್ ಮತ್ತು ಮಸಾಜ್ ಸೀಟ್‌ಗಳು: ಈ ಸಂಯೋಜನೆಯ ವೈಶಿಷ್ಟ್ಯವನ್ನು ಇನ್ನೂ ಪ್ರೀಮಿಯಂ ಕಾರುಗಳಿಗೆ ಕಾಯ್ದಿರಿಸಲಾಗಿದ್ದರೂ, ಈ ವೈಶಿಷ್ಟ್ಯವು ವಾಸ್ತವವಾಗಿ ನಮಗೆ ಹೊರಗಡೆಯು ಲಭ್ಯವಿದೆ. ಇವು ಸೀಟ್ ಕವರ್ ರೂಪದಲ್ಲಿ ಬರುತ್ತವೆ, ಹಾಗೆಯೇ ಇದು ನೇರವಾಗಿ ಕಾರಿನೊಳಗೆ 12-ವೋಲ್ಟ್ ಸಾಕೆಟ್‌ಗೆ ಪ್ಲಗ್ ಆಗುತ್ತದೆ. ಬೇಸಿಗೆ ಮತ್ತು ಲಾಂಗ್ ಡ್ರೈವ್‌ಗಳಲ್ಲಿ ಈ ವೈಶಿಷ್ಟ್ಯವು ತುಂಬಾ ಉಪಯುಕ್ತವಾಗಿದೆ.
ಮೇಲೆ ತಿಳಿಸಲಾದ ಎಲ್ಲಾ ವೈಶಿಷ್ಟ್ಯಗಳು ಕೂಡ ನಿಮ್ಮ ಕಾರನ್ನು ಹೊಸದಾಗಿ ಹಾಗೂ ಒಂದು ಮಟ್ಟಕ್ಕೆ ಪ್ರೀಮಿಯಂ ಆಗಿ ಮಾಡುತ್ತವೆ. ಇವೆಲ್ಲವು ಸುಲಭವಾಗಿ ಆಫ್ಟರ್ ಮಾರ್ಕೆಟ್‌ನಲ್ಲಿ ಸಿಗುವ ಪರಿಕರಗಳಾವೆ. ಈ ಎಲ್ಲಾ ವೈಶಿಷ್ಟ್ಯಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ. ಇನ್ನೂ ಇಂತಹ ವೈಶಿಷ್ಟ್ಯಗಳಿದ್ದಲ್ಲಿ ಮರಿಯದೇ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








