ಬೆಲೆ ಏರಿಕೆ ಪಡೆದುಕೊಂಡ ಆಕರ್ಷಕ ವಿನ್ಯಾಸ, ಅದ್ಭುತ ಫೀಚರ್ಸ್ ಹೊಂದಿರುವ ಸ್ಕೋಡಾ ಕೊಡಿಯಾಕ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಆಟೋ ಇಂಡಿಯಾ ತನ್ನ ಪ್ರಮುಖ ಎಸ್‍ಯುವಿಯಾದ ಕೊಡಿಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ತಿಂಗಳ ಹಿಂದೆ ಬಿಡುಗಡೆ ಗೊಂಡಿತು. ಈ ಹೊಸ ಸ್ಕೋಡಾ ಕೊಡಿಯಾಕ್ (Skoda Kodiaq) 7-ಜನರು ಕುಳಿತುಕೊಳ್ಳಬಹುದಾದ ಫುಲ್ ಸೈಜ್ ಎಸ್‍ಯುವಿಯಾಗಿದೆ. ಈ ಎಸ್‍ಯುವಿಯನ್ನು ಮೊದಲ ಬಾರಿಗೆ 2017 ರಲ್ಲಿ ಪರಿಚಯಿಸಲಾಗಿತು.
ಸ್ಕೋಡಾ ಕಂಪನಿಯು ತನ್ನ ಕೊಡಿಯಾಕ್ ಎಸ್‍ಯುವಿಯ ಬೆಲೆ ಹೆಚ್ಚಿಸಿದೆ. ಸ್ಕೋಡಾ ಕೊಡಿಯಾಕ್ ಎಸ್‍ಯುವಿಯ ಬೆಲೆಯು ರೂಪಾಂತರವನ್ನು ಅವಲಂಬಬಿಸಿ ರೂ.55,932 ವರೆಗೆ ಹೆಚ್ಚಾಗಿದೆ. ಸ್ಕೋಡಾ ಕೊಡಿಯಾಕ್ ಮೂರು ರೂಪಾಂತರಗಳಲ್ಲಿ ಲಭ್ಯವಿದೆ, ಅವುಗಳೆಂದರೆ ಸ್ಟೈಲ್, ಸ್ಪೋರ್ಟ್‌ಲೈನ್ ಮತ್ತು ಎಲ್ & ಕೆ ರೂಪಾಂತರಗಳಾಗಿವೆ. ಬೆಲೆ ಏರಿಕೆ ಬಳಿಕ, ಕೊಡಿಯಾಕ್ ಎಸ್‍ಯುವಿಯ ಸ್ಟೈಲ್ ರೂಪಾಂತರದ ಹೊಸ ಬೆಲೆಯು ರೂ. 38.50 ಲಕ್ಷವಾದರೆ, ಸ್ಪೋರ್ಟ್‌ಲೈನ್ ರೂಪಾಂತರದ ಬೆಲೆಯು ರೂ.39.92 ಲಕ್ಷವಾಗಿದೆ.

ಇನ್ನು ಕೊಡಿಯಾಕ್ ಎಸ್‍ಯುವಿಯ ಟಾಪ್ ಎಂಡ್ L&K ರೂಪಾಂತರದ ಬೆಲೆಯು ರೂ.41.95 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಕೊಡಿಯಾಕ್ ಕೇವಲ 7.8 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು ಇಕೋ, ಕಂಫರ್ಟ್, ನಾರ್ಮಲ್, ಸ್ಪೋರ್ಟ್, ಇಂಡಿವಿಜುವಲ್ ಮತ್ತು ಸ್ನೋ.ಎಂಬ ಆರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿವೆ.
2023ರ ಸ್ಕೋಡಾ ಕೊಡಿಯಾಕ್ ಡೋರ್-ಎಡ್ಜ್ ಪ್ರೊಟೆಕ್ಟರ್‌ಗಳೊಂದಿಗೆ ಬರುತ್ತದೆ. ಇನ್ನು ಏರ್ ವೆಂಟ್ ಅನ್ನು ಸುಧಾರಿಸುವ ಹಿಂಭಾಗದ ಸ್ಪಾಯ್ಲರ್, ಪ್ರಯಾಣಿಕರು ತಮ್ಮ ಪಾದಗಳನ್ನು ವಿಶ್ರಾಂತಿ ಮಾಡಲು ವಿಶ್ರಾಂತಿ ಹಂತವನ್ನು ಪಡೆಯುತ್ತಾರೆ ಮತ್ತು 2ನೇ ಸಾಲಿನಲ್ಲಿ ಹೆಡ್‌ರೆಸ್ಟ್‌ಗಳಿವೆ. ಈ ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು ಸ್ಟೀರಿಂಗ್, ಡೈನಾಮಿಕ್ ಚಾಸಿಸ್ ಕಂಟ್ರೋಲ್ ಅನ್ನು ಹೊಂದಿದೆ ಮತ್ತು ಸಸ್ಪೆನ್ಶನ್ ಅನ್ನು 15 ಎಂಎಂ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಮತ್ತು ಆಫ್-ರೋಡ್ ಮೋಡ್ ಹೊಂದಿದೆ.

ಈ ಸ್ಕೋಡಾ ಕೊಡಿಯಾಕ್ 3 ಅಥವಾ 2-ಸ್ಪೋಕ್ ಸ್ಟೀರಿಂಗ್ ವೀಲ್, ಆಂಬಿಯೆಂಟ್ ಲೈಟಿಂಗ್, ಕ್ಯಾಂಟನ್ 625 W 12-ಸ್ಪೀಕರ್ ಆಡಿಯೋ ಸಿಸ್ಟಮ್ ಜೊತೆಗೆ ಸಬ್ ವೂಫರ್ ಅನ್ನು ಹೊಂದಿದೆ. ಇದಲ್ಲದೆ, ಗ್ರಾಹಕರು ವಿಂಡೋಗಳು, ಡೋರ್ ಮೀರರ್ಸ್ ಮತ್ತು ಪನರೊಮಿಕ್ ಸನ್‌ರೂಫ್ ಅನ್ನು ದೂರದಿಂದಲೇ ತೆರೆಯಬಹುದು ಮತ್ತು ಮುಚ್ಚಬಹುದು.
ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಶ್ರೀ ಪೆಟ್ರ್ ಸೋಲ್ಕ್ ಮಾತನಾಡಿ, ಕೊಡಿಯಾಕ್ ಪೂರ್ಣ-ಗಾತ್ರದ ಎಸ್‍ಯುವಿ ಫೋಲ್ಡ್‌ಗೆ ನಮ್ಮ ಮೊದಲ ಪ್ರವೇಶವಾಗಿದ. ಇದು ಅಂತರಾಷ್ಟ್ರೀಯವಾಗಿ ಮತ್ತು ಭಾರತದಲ್ಲಿ ಅದ್ಭುತ ಯಶಸ್ಸನ್ನು ಕಂಡಿದೆ. ಪ್ರೀಮಿಯಂ ಆದರೂ, ಇದು ಹೆಚ್ಚಿನ ಮೌಲ್ಯದ ಐಷಾರಾಮಿ 4x4 ಆಗಿದ್ದು, ಇದು ಕುಟುಂಬಕ್ಕೆ ಸಂಪೂರ್ಣ ಆಫ್-ರೋಡ್ ಐಷಾರಾಮಿ ಪ್ಯಾಕೇಜ್‌ನಿಂದಾಗಿ ಭಾರತೀಯ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯನ್ನು ಕಂಡಿದೆ.
ಹೆಚ್ಚಿದ ಹಂಚಿಕೆಯು ಸುರಕ್ಷತೆ, ಐಷಾರಾಮಿ ಮತ್ತು ಆಫ್-ರೋಡ್ ಸಾಮರ್ಥ್ಯದೊಂದಿಗೆ ಉತ್ತಮವಾದ ಮೌಲ್ಯವನ್ನು ಬೇಡಿಕೆಯಿರುವ ಹೆಚ್ಚಿನ ಎಸ್‍ಯುವಿ ಗ್ರಾಹಕರು ಈಗ ಕೊಡಿಯಾಕ್ ಅನ್ನು ಆನಂದಿಸಬಹುದು ಎಂದು ಖಚಿತಪಡಿಸುತ್ತದೆ. ಪ್ರತಿಯೊಂದು ಟ್ರಿಮ್ ವೇರಿಯಂಟ್-ನಿರ್ದಿಷ್ಟ 18-ಇಂಚಿನ ಅಲಾಯ್ ವ್ಹೋಲ್ ಗಳೊಂದಿಗೆ ಬರುತ್ತದೆ, ಮತ್ತು ಟಾಪ್-ಎಂಡ್ ಲಾರಿನ್ ಮತ್ತು ಕ್ಲೈಮೆಂಟ್ ರೂಪಾಂತರವು ಸ್ಟೋನ್ ಬೀಜ್ ಲೆದರ್ ಡ್ಯುಯಲ್-ಟೋನ್ ಅಪ್ಹೋಲ್ಸ್ಟರಿಯನ್ನು ಪಡೆದರೆ, ಸ್ಪೋರ್ಟ್‌ಲೈನ್ ಟ್ರಿಮ್ ಎಲ್ಲಾ-ಕಪ್ಪು ಸ್ಯೂಡಿಯಾ ಇಂಟೀರಿಯರ್‌ಗಳೊಂದಿಗೆ ಬರುತ್ತದೆ.
ನೀವು ಆಯ್ಕೆಮಾಡುವ ವೇರಿಯಂಟ್‌ಗೆ ಅನುಗುಣವಾಗಿ, ಇನ್ ಬಿಲ್ಟ್ ಕೂಲಿಂಗ್ ಮತ್ತು ಹೀಟಿಂಗ್‌ನೊಂದಿಗೆ ಮುಂಭಾಗದಲ್ಲಿ 12-ವೇ ಹೊಂದಾಣಿಕೆ ಮಾಡಬಹುದಾದ ಎಲೆಕ್ಟ್ರಿಕ್ ಸೀಟ್‌ಗಳನ್ನು ಹೊಂದಿವೆ. ಇನ್ನು ಸ್ಕೋಡಾ ಕೊಡಿಯಾಕ್ ಈಗ BS6 ಹಂತ 2 ಕಂಪ್ಲೈಂಟ್ ಆಗಿದೆ. ಈ ಎಸ್‍ಯುವಿಯು 2.0-ಲೀಟರ್ TSI EVO ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದ್ದು. ಈ ಎಂಜಿನ್ 187 bhp ಮತ್ತು 320 Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications








