ಟಾಟಾ ಪಂಚ್ ಎದೆಯಲ್ಲಿ ನಡುಕ ಹುಟ್ಟಿಸಿದ ಹ್ಯುಂಡೈ ಎಕ್ಸ್‌ಟರ್: ಬಿಡುಗಡೆಗೆ ಸಜ್ಜು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ದೇಶಿಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ, ಇದಕ್ಕಾಗಿ ಹ್ಯುಂಡೈ ಕಂಪನಿಯು ಭಾರತದಲ್ಲಿ ತನ್ನ ಕಾರುಗಳ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಲಿದೆ. ಇದರ ಭಾಗವಾಗಿ ತನ್ನ ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಟರ್ (Hyundai Exter) ಎಂಬ ಮೈಕ್ರೋ ಎಸ್‌ಯುವಿ ಬಿಡುಗಡೆಗೆ ಸಜ್ಜಾಗಿದೆ.
ಹ್ಯುಂಡೈ ತಮ್ಮ ಹೊಸ ಕಾರು ಎಕ್ಸ್‌ಟರ್ ಕಾರನ್ನು ಜುಲೈ 10 ರಂದು 2023 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಎಕ್ಸ್‌ಟರ್ ಟಾಟಾ ಪಂಚ್, ಸಿಟ್ರನ್ ಸಿ3 ಮತ್ತು ಮಾರುತಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಇತ್ತೀಚೆಗೆ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಹ್ಯುಂಡೈನ ಘಟಕದಲ್ಲಿ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ.

ಈ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರು EX, S, SX, SX (O) ಮತ್ತು SX (O) ಕನೆಕ್ಟ್ ಎಂಬ 5 ಟ್ರಿಮ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕಾರಿನ ಮುಂಭಾಗ ಪ್ಯಾರಾಮೆಟ್ರಿಕ್ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಕ್ಲಾಮ್‌ಶೆಲ್ ಬಾನೆಟ್ ಮತ್ತು ಎಚ್ ಆಕಾರದ ಎಲ್‌ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿವೆ.
ಇನ್ನು ಈ ಮೈಕ್ರೋ ಎಸ್‍ಯುವಿಗೆ ಸುಲಭವಾಗಿ ಪ್ರವೇಶಿಸಲು ಮತ್ತು ಹೊರಬರಲು ಡೋರುಗಳು ವಿಶಾಲವಾಗಿ ತೆರೆದುಕೊಳ್ಳುತ್ತವೆ. ಹೊಸ ಚಿತ್ರಗಳಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಗಳು ಇತ್ಯಾದಿಗಳನ್ನು ಹೊಂದಿವೆ. ಹ್ಯುಂಡೈ ಕಂಪನಿಯು ಈ ಮೊದಲೇ ಕಾರಿನ ಹೊರಭಾಗದ ವಿನ್ಯಾಸ ಮತ್ತು ಮೊದಲು ಇಂಟಿರಿಯರ್ ಚಿತ್ರಗಳನ್ನು ಬಹಿರಂಗಪಡಿಸಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದರು.

ಈ ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯ ಒಳಭಾಗದಲ್ಲಿ ಇಂಚಿನ HD ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 4.2-ಇಂಚಿನ ಬಣ್ಣದ TFT ಮಲ್ಟಿ-ಇನ್‌ಫರ್ಮೇಶನ್ ಡಿಸ್‌ಪ್ಲೇಯೊಂದಿಗೆ ಸುಧಾರಿತ ಡಿಜಿಟಲ್ ಕ್ಲಸ್ಟರ್‌ನೊಂದಿಗೆ ಸಜ್ಜುಗೊಂಡಿದೆ, ಬ್ಲೂಲಿಂಕ್ ತಂತ್ರಜ್ಞಾನವನ್ನು ಸಂಪೂರ್ಟ್ ಮಾಡುತ್ತದೆ. ಈ ಹ್ಯುಂಡೈ ಎಕ್ಸ್‌ಟರ್ ಕಾರಿನಲ್ಲಿ ಕನೆಕ್ಟಿವಿಟಿ ಫೀಚರ್ಸ್, 90 ಎಂಬೆಡೆಡ್ ವಾಯ್ಸ್ ಕಮಾಂಡ್‌ಗಳು ಮತ್ತು ಓವರ್-ದಿ-ಏರ್ (OTA) ಇನ್ಫೋಟೈನ್‌ಮೆಂಟ್ ಮತ್ತು ಮ್ಯಾಪ್ ನವೀಕರಣಗಳಿಗೆ ಬೆಂಬಲವನ್ನು ನೀಡುತ್ತದೆ.
ಈ ಕಾರಿನಲ್ಲಿ ಇನ್‌ಫೋಟೈನ್‌ಮೆಂಟ್ ಯೂನಿಟ್ ಇನ್-ಬಿಲ್ಟ್ ನ್ಯಾವಿಗೇಷನ್‌ನೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಿಸ್ಟಂಗಳನ್ನು ಬೆಂಬಲಿಸುತ್ತದೆ. ಇದರೊಂದಿಗೆ 10 ಪ್ರಾದೇಶಿಕ ಮತ್ತು ಎರಡು ಜಾಗತಿಕ ಭಾಷೆಗಳಲ್ಲಿ ಕಸ್ಟಮೈಸ್ ಮಾಡಬಹುದು. ಇನ್ನು ಹ್ಯುಂಡೈ ಎಕ್ಸ್‌ಟರ್ ಕಾರಿನ ಒಳಗಿನ ಕನೆಕ್ಟಿವಿಟಿ ಫೀಚರ್ಸ್ ಸುರಕ್ಷತೆ ಮತ್ತು ಭದ್ರತೆ, ರಿಮೋಟ್ ಸೇವೆಗಳು, ಸ್ಥಳ ಆಧಾರಿತ ಫಂಕ್ಷನ್ ಮತ್ತು ವಾಯ್ಸ್ ಸಹಾಯಕ್ಕೆ ಸಂಬಂಧಿಸಿವೆ.

ಎಂಬೆಡೆಡ್ ವಾಯ್ಸ್ ಕಮಾಂಡ್‌ಗಳು ಇಂಟರ್ನೆಟ್ ಸಂಪರ್ಕವಿಲ್ಲದೆ ಸಹ ಕಾರ್ಯನಿರ್ವಹಿಸುತ್ತವೆ. ಈ ಕಮಾಂಡ್‌ಗಳು ಹಿಂಗ್ಲಿಷ್‌ನಲ್ಲಿರಬಹುದು, ಇದು ಭಾರತೀಯ ಡ್ರೈವರ್‌ಗಳಿಗೆ ಸೂಕ್ತವಾಗಿದೆ. ಈ ಕಾರಿನಲ್ಲಿ "ಸನ್‌ರೂಫ್ ಖೋಲೋ", "ಟೆಂಪರೇಚರ್ ಕಾಮ್ ಕಾರ್ದೋ ಮತ್ತು ಇನ್ನೂ ಹೆಚ್ಚಿನ ಪದಗಳನ್ನು ಬಳಸಲಾಗುತ್ತದೆ. ಈ ಹ್ಯುಂಡೈ ಎಕ್ಸ್‌ಟರ್ ಮಿನಿ ಎಸ್‌ಯುವಿಯಲ್ಲಿ 1.2 ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.2 ಲೀಟರ್ ಕಪ್ಪಾ ಪೆಟ್ರೋಲ್ ಅನ್ನು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಒಳಗೊಂಡಿರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಹೊಸ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್, ರಿವ್ಯೂ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ನೀವು ಮರೆಯದಿರಿ.


Click it and Unblock the Notifications