ಬಿಡುಗಡೆಗೂ ಮುನ್ನವೆ ಥಾರ್ 5-ಡೋರ್ ಡ್ಯಾಶ್‌ಬೋರ್ಡ್ ಚಿತ್ರಗಳ ಸೋರಿಕೆ... ವೈಶಿಷ್ಟ್ಯಗಳು ಬಹಿರಂಗ!

ಭಾರತದಲ್ಲಿ 2024 ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಮಹೀಂದ್ರಾ ಥಾರ್ 5-ಡೋರ್ ಎಸ್‌ಯುವಿ ಕೂಡ ಒಂದು. ಈಗಾಗಲೇ ಟೆಸ್ಟಿಂಗ್ ಜೋರಾಗಿ ನಡೆಯುತ್ತಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದೆ. ಆದ್ರೆ ಇದೆ ಮೊದಲ ಬಾರಿಗೆ ಹೊಸ ಥಾರ್ 5-ಡೋರ್ ಆವೃತ್ತಿಯ ಇಂಟೀರಿಯರ್ ಡ್ಯಾಷ್‌ಬೋರ್ಡ್ ಚಿತ್ರಗಳು ಬಹಿರಂಗಗೊಂಡಿವೆ.

ಈ ಹೊಸ ಮಹೀಂದ್ರಾ ಥಾರ್ ಮುಂದಿನ ವರ್ಷ ಜೂನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ 5-ಬಾಗಿಲಿನ ಥಾರ್‌ನ ಡ್ಯಾಶ್‌ಬೋರ್ಡ್ ಅನ್ನು ಚೆನ್ನೈನ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಆ ವೇಳೆ ಅಲ್ಲಿನ ಕೆಲವರಿಂದ ಈ ಚಿತ್ರಗಳು ಹೊರಬಂದಿವೆ ಎನ್ನಲಾಗುತ್ತಿದೆ. ಈ ಚಿತ್ರಗಳ ಆಧಾರವಾಗಿ ಏನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ನೋಡೋಣ.

thar-5-door-dashboard-images-leak-ahead-of-launch

ಡ್ಯಾಶ್‌ಬೋರ್ಡ್ ಮತ್ತು ಅದಕ್ಕೆ ಸಂಪರ್ಕಿತವಾದ ಇತರ ಭಾಗಗಳನ್ನು ಕಂಪನದ ಪರೀಕ್ಷೆಗೆ ಒಳಪಡಿಸಿದಂತೆ ತೋರುತ್ತಿದೆ. ಈ ಪರೀಕ್ಷೆಯು ನಿರ್ಣಾಯಕವಾಗಿರುತ್ತದೆ, ಏಕೆಂದರೆ ಕಾರಿನಲ್ಲಿ ಆರಾಮದಾಯಕ ಹಾಗೂ ಶಾಂತವಾದ ಪ್ರಯಾಣವನ್ನು ಖಚಿತಪಡಿಸಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಡ್ಯಾಶ್‌ಬೋರ್ಡ್ ಅನ್ನು ಅದರ ಮೂಲ ರೂಪದಲ್ಲಿ ಪರೀಕ್ಷಿಸಲಾಗುತ್ತಿದೆ.

ಈ ಡ್ಯಾಶ್‌ಬೋರ್ಡ್ ತನ್ನ ಹಳೆಯ ಥಾರ್‌ನಂತೆ ವೃತ್ತಾಕಾರದ AC ವೆಂಟ್‌ಗಳು, ಪರಿಚಿತ ಸೆಂಟರ್ ಕನ್ಸೋಲ್, ಮುಂಭಾಗದ ಪ್ರಯಾಣಿಕರಿಗೆ ಗ್ರ್ಯಾಬ್ ಹ್ಯಾಂಡಲ್ ಮತ್ತು ಎಡ AC ವೆಂಟ್‌ನ ಕೆಳಗೆ ಕಬ್ಬಿಣದ ಬ್ಯಾಡ್ಜ್ ಪ್ಲೇಟ್‌ ಅನ್ನು ನೋಡಬಹುದು. ಇವುಗಳ ಜೊತಗೆ ಹೊಸ ವೈಶಿಷ್ಟ್ಯಗಳು ಇದ್ದು, ಡ್ಯುಯಲ್-ಟೋನ್ ಬ್ರೌನ್ ಮತ್ತು ಬ್ಲಾಕ್ ಬಣ್ಣದ ಥೀಮ್ ಅನ್ನು ನೋಡಬಹುದು.

thar-5-door-dashboard-images-leak-ahead-of-launch

ಇದು ಸ್ಟ್ಯಾಂಡರ್ಡ್ 3-ಡೋರ್ ಥಾರ್‌ನ ಸಂಪೂರ್ಣ ಕಪ್ಪು ಬಣ್ಣಕ್ಕಿಂತ ಭಿನ್ನವಾಗಿದೆ. ಸೀಟ್ ಅಪ್ಹೋಲ್ಸ್ಟರಿ ಸೇರಿದಂತೆ ಕ್ಯಾಬಿನ್‌ನ ಉಳಿದ ಭಾಗವು ಡ್ಯುಯಲ್-ಟೋನ್ ಬ್ರೌನ್ ಮತ್ತು ಬ್ಲಾಕ್ ಬಣ್ಣದ ಥೀಮ್ ಅನ್ನು ಹೊಂದಿದೆ. ನಮಗೆ ತಿಳಿದಿರುವಂತೆ 5-ಬಾಗಿಲಿನ ಥಾರ್‌ಗೆ ಹೆಚ್ಚಿನ ಇಂಟೀರಿಯರ್ ಬಣ್ಣದ ಆಯ್ಕೆಗಳನ್ನು ನೀಡುವ ಸಾಧ್ಯತೆಯಿದೆ.

ಇತರ ಪ್ರಮುಖ ಬದಲಾವಣೆಗಳಲ್ಲಿ, ಹೊಸ ಟಚ್‌ಸ್ಕ್ರೀನ್ ಮಹೀಂದ್ರಾದಿಂದ ಇತ್ತೀಚಿನ UI ಅನ್ನು ಸಹ ಪಡೆಯಲಿದೆ. ಮತ್ತೊಂದು ಸಾಧ್ಯತೆಯೆಂದರೆ 5-ಬಾಗಿಲಿನ ಥಾರ್‌ಗೆ ಹೊಸ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಕೂಡ ನೀಡಬಹುದು. 5-ಬಾಗಿಲಿನ ಥಾರ್‌ನ ಇತರ ವಿಶಿಷ್ಟ ಅಂಶಗಳೆಂದರೆ ಸನ್‌ರೂಫ್ ಮತ್ತು ಹೊಸ ಮುಂಭಾಗದ ಆರ್ಮ್ ರೆಸ್ಟ್ ಸೇರಿದಂತೆ ಎ ಮತ್ತು ಬಿ ಪಿಲ್ಲರ್‌ಗಳು ಗ್ರಾಬ್ ಹ್ಯಾಂಡಲ್‌ಗಳನ್ನು ಪಡೆಯಲಿವೆ.

thar-5-door-dashboard-images-leak-ahead-of-launch

ಈಗಿರುವ ಸ್ಟ್ಯಾಂಡರ್ಡ್ ಥಾರ್‌ಗೆ ಹೋಲಿಸಿದರೆ 5-ಡೋರ್ ಆವೃತ್ತಿಯು ಟೋನ್-ಡೌನ್ ನೋಟವನ್ನು ಹೊಂದಿರಬಹುದು. ಮಹೀಂದ್ರಾ 5-ಡೋರ್ ಥಾರ್‌ನೊಂದಿಗೆ 4×2 ಮತ್ತು 4×4 ಎರಡನ್ನೂ ನೀಡುವ ಸಾಧ್ಯತೆಯಿದೆ. ಉದ್ದವಾದ ಬಾಡಿ ಮತ್ತು ವೀಲ್‌ಬೇಸ್‌ನಿಂದಾಗಿ ಕೆಲವು ಆಫ್-ರೋಡಿಂಗ್ ಸಾಮರ್ಥ್ಯಗಳು ಪರಿಣಾಮ ಬೀರುತ್ತವೆಯೇ ಎಂದು ನೋಡಬೇಕಾಗಿದೆ.

ಎಂಜಿನ್ ಆಯ್ಕೆ ವಿಷಯಕ್ಕೆ ಬಂದರೆ 2.0-ಲೀಟರ್ ಪೆಟ್ರೋಲ್ ಎಂಜಿನ್ 150 ಪಿಎಸ್ ಗರಿಷ್ಠ ಪವರ್ ಮತ್ತು 300 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 2.2-ಲೀಟರ್ ಡೀಸೆಲ್ 130 PS ಪವರ್ ಮತ್ತು 300 Nm ಟಾರ್ಕ್ ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿವೆ.

thar-5-door-dashboard-images-leak-ahead-of-launch

ಮಹೀಂದ್ರಾ 5-ಡೋರ್ ಅನ್ನು 16 ಲಕ್ಷದಿಂದ 20 ಲಕ್ಷದವರೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಸ್ತಿತ್ವದಲ್ಲಿರುವ 3-ಬಾಗಿಲಿನ ಥಾರ್ ರೂ. 10.98 ಲಕ್ಷ (RWD) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಟಾಪ್-ಸ್ಪೆಕ್ ಡೀಸೆಲ್ AT 4WD ರೂಪಾಂತರದ ಬೆಲೆ 16.94 ಲಕ್ಷ ರೂ. (ಇವು ಎಕ್ಸ್‌ ಶೋರೂಂ ಬೆಲೆಗಳು) ಇದೆ.

More from DriveSpark

Article Published On: Thursday, December 28, 2023, 16:22 [IST]
English summary
Thar 5 door dashboard images leak ahead of launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+