ಬೆಲೆ ಕೇವಲ 500 ರೂ... ಖಂಡಿತ ಪ್ರತಿ ಕಾರಿನಲ್ಲೂ ಇರಬೇಕಾದ ಟಾಪ್ 5 ಅಕ್ಸೆಸೊರಿಗಳಿವು!

ಕಾರು ಮಾಲೀಕರು ತಮ್ಮ ಕಾರುಗಳು ಯಾವಾಗಲೂ ಅಂದವಾಗಿ ಹಾಗೂ ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಇದಕ್ಕಾಗಿ ಕಾರನ್ನು ನಿತ್ಯ ತೊಳಿಯುವುದು ಮಾತ್ರವಲ್ಲದೇ ಒಂದಷ್ಟು ಅಕ್ಸೆಸೊರಿಗಳನ್ನು ಬಳಸಬೇಕಾಗುತ್ತದೆ. ನಿಮ್ಮಲ್ಲಿ ಹಲವರು ವಿವಿಧ ಉತ್ಪನ್ನಗಳನ್ನು ಬಳಸಿ ಯಾವುದೇ ಪ್ರಯೋಜನವಿಲ್ಲದೇ ಬೇಸತ್ತ ಉದಾಹರಣೆಗಳು ಇವೆಯಲ್ಲವೇ? ಹಾಗಾದ್ರೆ ಈ ಸಲಹೆಗಳು ನಿಮಗೆ ಉಪಯೋಗವಾಗಬಹುದು.

ನಿಮ್ಮ ಕಾರುಗಳ ಹೊರಾಂಗಣ ಹಾಗೂ ಒಳಾಂಗಣಕ್ಕೆ ಉಪಯುಕ್ತವಾದ ಟಾಪ್ 5 ಅಕ್ಸೆಸೊರಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ. ಜೊತೆಗೆ ಇವೆಲ್ಲವೂ ಕೇವಲ 500 ರೂ. ಒಳಗೆ ಸಿಗುವಂತಹ ಉತ್ಪನ್ನಗಳಾದ್ದರಿಂದ ನಿಮಗೆ ಬಹಳ ಉಪಯುಕ್ತವಾಗಬಹುದು. ಈ ಎಲ್ಲಾ ಉತ್ಪನ್ನಗಳ ಬಗ್ಗೆ ಯಾವುದೇ ಸಂದೇಹವಿಲ್ಲದೇ ಖರೀದಿಸಿ ಬಳಸಬಹುದು. ಇಲ್ಲಿ ಯಾವುದೇ ಉತ್ಪನ್ನಗಳ ಬ್ರಾಂಡ್‌ ಅನ್ನು ಪ್ರತ್ಯೇಕವಾಗಿ ಹೆಸರಿಸಿಲ್ಲ. ಒಂದು ವೇಳೆ ಹೆಸರಿಸಿದ್ದರೂ ಅವುಗಳಿಂದ ಖಂಡಿತ ಉಪಯೋಗವಿದೆ ಎಂದರ್ಥ ಎಂಬುದನ್ನು ಗಮನಿಸಿ.

Priced at just Rs 500... Definitely the top 5 car accessories every car should have

ಕಾರ್ ಫಾಸ್ಟ್ ಚಾರ್ಜರ್:
ನಾವು ನಮ್ಮ ಮೊಬೈಲ್ ಫೋನ್‌ಗಳನ್ನು ಆತುರದಲ್ಲಿ ಚಾರ್ಜ್‌ ಮಾಡದೇ ಆಫೀಸ್ ಅಥವಾ ದೂರದ ಪ್ರಯಾಣಕ್ಕೆ ಹೊರಟಿರುತ್ತೇವೆ. ಇಂತಹ ಸಂದರ್ಭದಲ್ಲಿ ಕಾರಿನಲ್ಲಿ ಚಾರ್ಜ್ ಮಾಡುವ ಆಯ್ಕೆ ಮಾತ್ರ ನಮಗಿರುತ್ತದೆ. ಸಾಮಾನ್ಯ ಕನೆಕ್ಟರ್‌ಗಳಿಂದ ನಮ್ಮ ಮೊಬೈಲ್‌ಗೆ ಎಷ್ಟೇ ಚಾರ್ಜ್ ಮಾಡಿದ್ರು ಉಪಯೋಗವಿಲ್ಲ. ಆದ್ರೆ ಫಾಸ್ಟ್‌ ಚಾರ್ಜರ್ ಅನ್ನು ಬಳಸಿಕೊಂಡು ವೇಗವಾಗಿ ಚಾರ್ಜ್‌ ಮಾಡಿಕೊಳ್ಳಬಹುದು. ಹಲವರಿಗೆ ಫಾಸ್ಟ್‌ ಚಾರ್ಜರ್ ಕೇವಲ 500 ರೂ. ಒಳಗೆ ಸಿಗಲಿದೆ ಎಂದು ತಿಳಿದೇ ಇಲ್ಲ. ಆನ್‌ಲೈನ್‌ನಲ್ಲಿ ಸುಲಭವಾಗಿ ಸಿಗುತ್ತವೆ.

WD40:
WD40 ಬಹುಮುಖ ಬಹುಪಯೋಗಿ ಲೂಬ್ರಿಕಂಟ್ ಮತ್ತು ಕ್ಲೀನರ್ ಆಗಿದ್ದು, ಕಾರ್ ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸಲು ಇದನ್ನು ಬಳಸಬಹುದು. ಇದು ಬೋಲ್ಟ್ ಗಳನ್ನು ಸಡಿಲಗೊಳಿಸಲು, ತುಕ್ಕು ತಡೆಯಲು ಮತ್ತು ಅಂಟಿಕೊಳ್ಳುವ ಕೊಳೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದನ್ನು ಪ್ರತಿಯೊಬ್ಬ ಕಾರ್ ಮಾಲೀಕ ತನ್ನ ಟೂಲ್‌ಕಿಟ್‌ನಲ್ಲಿ ಹೊಂದಿರಬೇಕು ಮತ್ತು 500 ರೂ. ಒಳಗೆ ಇದನ್ನು ಖರೀದಿಸಬಹುದು. ಖಂಡಿತ ನಿಮ್ಮ ವಾಹನಗಳಿಗೆ ಈ ಉತ್ಪನ್ನವು ಬಹಳ ಉಪಯುಕ್ತವಾಗಿರುತ್ತದೆ.

Priced at just Rs 500... Definitely the top 5 car accessories every car should have

ಕಾರ್ ಪರ್ಫ್ಯೂಮ್:
ನಾವು ಎಷ್ಟೇ ಒತ್ತಡದಲ್ಲಿ ಕೆಲಸ ಮುಗಿಸಿ ಬಂದರೂ ಕಾರಿಗೆ ಏರಿದ ತಕ್ಷಣ ತಣ್ಣಗೆ ಎಸಿಯೊಂದಿಗೆ ಒಂದೊಳ್ಳೆಯ ಸುವಾಸನೆ ಬಂದರೆ ಮನಸ್ಸಿಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಕಾರ್ ಪರ್ಫ್ಯೂಮ್ ನಿಮ್ಮ ಕಾರನ್ನು ತಾಜಾ ಮತ್ತು ಆಹ್ಲಾದಕರವಾಗಿ ಮಾಡುವ ಮೂಲಕ ನಮಗೆ ಉತ್ತಮ ಡ್ರೈವಿಂಗ್ ಅನುಭವ ನೀಡುತ್ತದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಕೈಗೆಟುಕುವ ಬೆಲೆಯಲ್ಲಿ ಕಾರ್ ಪರ್ಫ್ಯೂಮ್ ಲಭ್ಯವಿದ್ದು, ಅವುಗಳನ್ನು ಕೇವಲ 500 ರೂ. ಒಳಗೆ ಖರೀದಿಸಬಹುದು. ನಿಮಗಿಷ್ಟವಾದ ಸುವಾಸನೆಯನ್ನು ಆಯ್ಕೆ ಮಾಡಿಕೊಳ್ಳಿ.

ಕಾರ್ ಬಿನ್:
ನಿಮ್ಮ ಕಾರಿನ ಒಳಭಾಗವನ್ನು ಅಸ್ತವ್ಯಸ್ತಗೊಳಿಸುವಂತಹ ಕಸ, ಹೊದಿಕೆಗಳು ಅಥವಾ ಇತರ ಸಣ್ಣ ವಸ್ತುಗಳನ್ನು ಸಂಗ್ರಹಿಸಲು ಕಾರ್ ಬಿನ್ ಬಳಸಬಹುದು. ಇದು ಪ್ರತಿ ಕಾರಿನಲ್ಲಿ ಇರಬೇಕಾದ ಸೂಕ್ತ ಪರಿಕರವಾಗಿದ್ದು ನಿಮ್ಮ ಕಾರನ್ನು ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿಡಲು ಸಹಾಯ ಮಾಡುತ್ತದೆ. ಡ್ಯಾಶ್‌ಬೋರ್ಡ್ ಅಥವಾ ಡೋರ್ ಪಾಕೆಟ್‌ನಲ್ಲಿ ಅಳವಡಿಸಬಹುದಾದ ಈ ಕಾರ್ ಬಿನ್ ಅನ್ನು 500 ರೂ. ಒಳಗೆ ಖರೀದಿಸಬಹುದು. ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಯ ಕಾರ್ ಬಿನ್ ಅನ್ನು ನೀವು ಸುಲಭವಾಗಿ ಕಾಣಬಹುದು.

Priced at just Rs 500... Definitely the top 5 car accessories every car should have

ಮೈಕ್ರೋಫೈಬರ್ ಬಟ್ಟೆ:
ಮೈಕ್ರೋಫೈಬರ್ ಬಟ್ಟೆಯು ನಿಮ್ಮ ಕಾರಿನ ಹೊರಭಾಗ ಮತ್ತು ಒಳಭಾಗವನ್ನು ಸ್ವಚ್ಛಗೊಳಿಸಲು ಉತ್ತಮವಾದ ಪರಿಕರವಾಗಿದೆ. ಇದು ನಿಮ್ಮ ಕಾರಿನ ಬಣ್ಣದ ಮೇಲೆ ಯಾವುದೇ ಕಠಿಣವಾದ ಒತ್ತಡ ನೀಡುವುದಿಲ್ಲ. ಬದಲಾಗಿ ತುಂಬಾ ಮೃದುವಾಗಿ ಮತ್ತು ಸುಲಭವಾಗಿ ಕೊಳೆಯನ್ನು ತೆಗೆಯುತ್ತದೆ. ಇದು ಮರುಬಳಕೆ ಮಾಡಬಹುದಾದ ಮತ್ತು ತೊಳೆಯಲು ಸುಲಭವಾದ ಬಟ್ಟೆಯಾಗಿದೆ, ಇದು ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿದೆ. ಈ ಐದು ಕಾರ್ ಆಕ್ಸೆಸೊರಿಗಳು ನಿಮ್ಮ ಕಾರನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವವರೆಗೆ ಕೈಗೆಟುಕುವ ಬೆಲೆಯಲ್ಲಿ ಪ್ರಾಯೋಗಿಕತೆ ಮತ್ತು ಅನುಕೂಲತೆಯನ್ನು ನೀಡುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Tuesday, April 25, 2023, 12:20 [IST]
English summary
Top 5 car accessories under 500 rs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+