ಹೊಸ 2023 ಹುಂಡೈ i20 ಫೇಸ್‌ಲಿಫ್ಟ್ ಕುರಿತ ಟಾಪ್-5 ವಿಶೇಷತೆಗಳು
ಹ್ಯುಂಡೈ i20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಭಾರತದಲ್ಲಿ ದಕ್ಷಿಣ ಕೊರಿಯಾದ ವಾಹನ ತಯಾರಕರಿಗೆ ಸ್ಥಿರವಾದ ಮಾರಾಟವನ್ನು ಈ ವಾಹನ ತಂದುಕೊಟ್ಟಿದೆ. ಹಾಗಾಗಿ, ಮಾರಾಟವನ್ನು ಹೆಚ್ಚಿಸಲು ಹಬ್ಬದ ಸೀಸನ್‌ನಲ್ಲಿ i20 ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸಿದ್ದಾರೆ. ಹೊಸ ಹ್ಯಾಚ್‌ಬ್ಯಾಕ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ.
ಬೆಲೆ: ನವೀಕರಿಸಿದ ಹ್ಯುಂಡೈ i20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬೆಲೆಗಳು ರೂ. 6.99 ಲಕ್ಷ (ಎಕ್ಸ್-ಶೋರೂಮ್) ದಿಂದ ಆರಂಭವಾಗಿ ರೂ. 9.98 ಲಕ್ಷ (ಎಕ್ಸ್-ಶೋರೂಮ್) ವರೆಗೆ ಹೋಗುತ್ತದೆ. ಈ ಬೆಲೆಗಳು ಮ್ಯಾನುವಲ್ ರೂಪಾಂತರಗಳದ್ದಾಗಿದೆ. ಮತ್ತೊಂದೆಡೆ ಆಟೋಮ್ಯಾಟಿಕ್ ರೂಪಾಂತರಗಳ ಬೆಲೆಗಳು ರೂ. 9.38 ಲಕ್ಷ ದಿಂದ ರೂ. 11.01 ಲಕ್ಷದ (ಎಕ್ಸ್-ಶೋರೂಮ್) ನಡುವೆ ಇದೆ.

ವಿನ್ಯಾಸ: ನವೀಕರಿಸಿದ ಹ್ಯುಂಡೈ i20 ವಿನ್ಯಾಸವು ಅದರ ಹಳೆಯ ಮಾದರಿಗೆ ಹೋಲುತ್ತದೆ. ಆದರೂ ಹೊಸ ರಿಫ್ಲೆಕ್ಟರ್ ಮಾದರಿಯ LED ಹೆಡ್‌ಲೈಟ್‌ಗಳು, ನವೀಕರಿಸಿದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಅಲಾಯ್ ವೀಲ್‌ಗಳು ಸೇರಿದಂತೆ ಸಾಕಷ್ಟು ಬದಲಾವಣೆಗಳು ಮತ್ತು ನವೀಕರಣಗಳನ್ನು ಹೊಸ ಫೇಸ್‌ಲಿಫ್ಟ್ ಮಾದರಿಗೆ ನೀಡಲಾಗಿದೆ.
ಪವರ್‌ಟ್ರೇನ್: ನವೀಕರಿಸಿದ ಹ್ಯುಂಡೈ i20 ಪ್ರೀಮಿಯಂ ಹ್ಯಾಚ್‌ಬ್ಯಾಕ್ 1.2-ಲೀಟರ್, ನ್ಯಾಚುರಲ್ಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಹ್ಯುಂಡೈ i20 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿರುವ ಈ ಎಂಜಿನ್ ಅನ್ನು 6,000rpm ನಲ್ಲಿ 81.9bhp ಮತ್ತು 4,200rpm ನಲ್ಲಿ 117Nm ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ.

ಸಿವಿಟಿ ಟ್ರಾನ್ಸ್‌ಮಿಷನ್ ಹೊಂದಿರುವ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ 6,000 ಆರ್‌ಪಿಎಮ್ ನಲ್ಲಿ ಸ್ವಲ್ಪ ಆರೋಗ್ಯಕರವಾದ 86.8ಬಿಎಚ್‌ಪಿ ಮತ್ತು 4,200ಆರ್‌ಪಿಎಂನಲ್ಲಿ 117 ಎನ್‌ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ ಎಂಬುದನ್ನು ಸಹ ಉಲ್ಲೇಖಿಸಬೇಕಾದ ಅಂಶವಾಗಿದೆ. ಇವು ಸಿಟಿ ಕಾರಿಗೆ ಉತ್ತಮ ಪವರ್ ಔಟ್ ಪುಟ್ ಆಗಿದೆ.
ಸುರಕ್ಷತೆ: ಹೊಸ ಹ್ಯುಂಡೈ i20 ಹ್ಯಾಚ್‌ಬ್ಯಾಕ್ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಅಸಿಸ್ಟ್ ಕಂಟ್ರೋಲ್ (HAC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM), ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ ಸೇರಿದಂತೆ 26 ಗುಣಮಟ್ಟದ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ವೈಶಿಷ್ಟ್ಯಗಳು: ಹೊಸ ಹ್ಯುಂಡೈ i20 ಹ್ಯಾಚ್‌ಬ್ಯಾಕ್‌ನಲ್ಲಿನ ಗಮನಾರ್ಹ ವೈಶಿಷ್ಟ್ಯಗಳೆಂದರೆ ನ್ಯಾವಿಗೇಷನ್‌ನೊಂದಿಗೆ ದೊಡ್ಡ 10.25-ಇಂಚಿನ ಇನ್ಫೋಟೈನ್‌ಮೆಂಟ್ ಯುನಿಟ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಕೂಲ್ಡ್ ಗ್ಲೋವ್‌ಬಾಕ್ಸ್, 120W ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 7-ಸ್ಪೀಕರ್ BOSE ಮ್ಯೂಸಿಕ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಹಲವನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಹೊಸದಾಗಿ ಬಿಡುಗಡೆಯಾದ ಹ್ಯುಂಡೈ i20 ಫೇಸ್‌ಲಿಫ್ಟ್ ಮಾದರಿಯನ್ನು ಹೆಚ್ಚು ಆಧುನಿಕವಾಗಿ ಕಾಣುವಂತೆ ಮಾಡಲಾಗಿದೆ. ಸಂಪೂರ್ಣ ನವೀಕರಣವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಹೇಳುವುದಾದರೆ, ನವೀಕರಿಸಿದ ಮಾದರಿಯು ದಕ್ಷಿಣ ಕೊರಿಯಾದ ವಾಹನ ತಯಾರಕರಿಗೆ ಮುಂಬರುವ ತಿಂಗಳುಗಳಲ್ಲಿ ತನ್ನ ಮಾರಾಟದ ಅಂಕಿಅಂಶಗಳನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications