ಸೆಕೆಂಡ್‌ ಹ್ಯಾಂಡ್‌ ಕಾರ್‌ನ ಈ 5 ಉಪಯೋಗ ತಿಳಿದರೆ ನೀವು ಹೊಸ ಕಾರಿಗೆ ಹೇಳ್ತೀರಿ ಗುಡ್‌ ಬೈ

ಭಾರತದಂತಹ ದೇಶದಲ್ಲಿ ಒಂದು ಕಾರು ಕೊಳ್ಳಬೇಕು ಎಂಬ ಕನಸು ಪ್ರತಿಯೊಂದು ಮಧ್ಯಮ ವರ್ಗದ ಕುಟುಂಬಕ್ಕೂ ಇರುತ್ತದೆ. ಇಂತಹ ಸಂಧರ್ಭದಲ್ಲಿ ಹೊಸ ಕಾರಿಗೆ ಬಡವಾಳ ಹೂಡಲು ತಯಾರಿಲ್ಲದೇ ಇರುವವರೂ ಇದ್ದಾರೆ. ಬಹುತೇಕ ಮಂದಿ ಕೆಲವೊಮ್ಮೆ ಸೆಕೆಂಡ್‌ ಹ್ಯಾಂಡ್‌ ಕಾರು ತೆಗೆದುಕೊಳ್ಳುವ ಸಂಧರ್ಭದಲ್ಲಿ ಗಮನಿಸಬೇಕಾದ ಅಂಶಗಳನ್ನು ಗಮನಿಸುವುದೇ ಇಲ್ಲ.

ಇನ್ನು ಸೆಕೆಂಡ್‌ ಹ್ಯಾಂಡ್‌ ಕಾರು ಕೊಳ್ಳುವುದರಿಂದ ಹಲವಾರು ಗುಣಗಳಿವೆ. ಹೆಚ್ಚಿನ ಬಂಡವಾಳ ಇಲ್ಲದೆ ಕಾರನ್ನು ಕೊಳ್ಳಬಹುದು. ಗಮನವಿಟ್ಟು ಸೆಕೆಂಡ್‌ ಹ್ಯಾಂಡ್‌ ಕಾರನ್ನು ಕೊಳ್ಳುವಾಗ ನಿಮಗೆ ಅಧಿಕ ಬಳಸದೇ ಇರುವಂತಹ, ಕಡಿಮೆ ರಿಪೇರಿ ಮಾಡಿರುವಂತಹ ಕಾರುಗಳು ಸಹ ಇರುತ್ತದೆ. ಇಂದಿನ ಲೇಖನದಲ್ಲಿ ನಾವು ಸೆಕೆಂಡ್ ಹ್ಯಾಂಡ್‌ ಕಾರುಗಳನ್ನು ಕೊಳ್ಳುವುದರಿಂದ ಆಗುವ ಗುಣಗಳೇನು ಎಂಬುದನ್ನು ನೊಡೋಣ.

Top Five Advantages Of Buying Used Cars

. ಬಂಡವಾಳದ ಉಳಿತಾಯ: ಸರಿಯಾಗಿ ಸಲಹೆಗಳನ್ನು ತೆಗೆದುಕೊಂಡು ಎಚ್ಚರಿಕೆಯಿಂದ ಸೆಕೆಂಡ್‌ ಹ್ಯಾಂಡ್‌ ಕಾರನ್ನು (Used Cars) ತೆಗೆದುಕೊಂಡರೆ ಒಂದು ದೊಡ್ಡ ಮೊತ್ತವನ್ನು ನೀವು ಉಳಿಸಿಕೊಳ್ಳಬಹುದು ಎಂದರೆ ನೀವು ನಂಬಲೇ ಬೇಕು. ಒಂದೊಳ್ಳೆ ಸೆಕೆಂಡ್‌ ಹ್ಯಾಂಡ್‌ ಕಾರಿಂದ ನೀವು ಕಾರನ್ನು ಪಡೆಯಬಹುದು ಜೊತೆಗೆ ಹಣವನ್ನು ಉಳಿಸಿಒಳ್ಳಬಹುದು.

. ಕಡಿಮೆ ಇನ್ಸ್ಯೂರೆನ್ಸ್‌ ವ್ಯಯ: ಹೊಸ ಕಾರನ್ನು ಕೊಳ್ಳುವ ಸಂಧರ್ಭದಲ್ಲಿ ಇನ್ಸ್ಯೂರೆನ್ಸ್‌ ಪ್ರೀಮಿಯಂ ಎಲ್ಲವೂ ತುಂಬಾ ಹೆಚ್ಚು ಇರುತ್ತದೆ. ಇದಕ್ಕಾಗಿ ನೀವು ಅಧಿಕ ಮೊತ್ತವನ್ನು ಕೊಡಬೇಕಾಗುತ್ತದೆ. ಆದರೆ ಸೆಕೆಂಡ್‌ ಹ್ಯಾಂಡ್‌ ಕಾರನ್ನು ತೆಗೆದುಕೊಳ್ಳುವಾಗ ನೀವು ಇದನ್ನು ತಪ್ಪಿಸಿಕೊಳ್ಳಬಹುದಾಗಿದೆ. ಸೆಕೆಂಡ್‌ ಹ್ಯಾಂಡ್‌ ಕಾರುಗಳ ಇನ್ಸ್ಯೂರೆನ್ಸ್‌ ಪ್ರೀಮಿಯಂ ಗಮನಾರ್ಹ ಮಟ್ಟದಲ್ಲಿ ಕಮ್ಮಿ ಇರುತ್ತದೆ.

Top Five Advantages Of Buying Used Cars

. ಸರ್ಟಿಫೈಡ್‌ ಕಾರುಗಳು & ಉತ್ತಮ ಸೇವೆ: ಇತ್ತೀಚೆಗೆ ಆನ್‌ಲೈನ್ ನಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟ ಹೆಚ್ಚಾಗುತ್ತಿದೆ. ಇದರಲ್ಲಿ ನಿಮಗೆ ಆನ್‌ಲೈನ್‌ ನಲ್ಲಿ ಕಾರುಗಳ ಬಹಳಷ್ಟು ಆಯ್ಕೆಗಳಿರುತ್ತವೆ. ಜೊತೆಗೆ ನೀವು ಒಂದು ಹೊಸ ಕಾರನ್ನು ತೆಗೆದುಕೊಳ್ಳುವಾಗ ನಿಮಗೆ ಸಿಗುವಂತಹ ಸೇವೆಯನ್ನು ಕಂಪನಿಗಳು ನೀಡುತ್ತದೆ.

. ನಿಮ್ಮ ಬಜೆಟ್‌ನಲ್ಲಿ ಬಹಳಷ್ಟು ಆಯ್ಕೆಗಳು: ನೀವು ಯಾವ ಕಾರನ್ನು ಕೊಳಬೇಕು ಎಂದು ಬಯಸಿದ್ದೀರೋ ಕಾರಿನ ಸೆಕೆಂಡ್‌ ಹ್ಯಾಂಡ್‌ ಕಾರನ್ನು ಕೊಳ್ಳಲು ನೊಡಿದರೆ ನಿಮಗೆ ಬಹಳಷ್ಟು ಆಯ್ಕೆಗಳು ಲಭ್ಯವಿರುತ್ತದೆ. ನಿಮ್ಮ ಬಜೆಟ್‌ಗೆ ಒಗ್ಗಿಕೊಳ್ಳುವ ಹಾಗೆ ಬಹಳಷ್ಟು ಆಯ್ಕೆಗಳು ನಿಮ್ಮ ಮುಂದಿರುತ್ತದೆ.

. ಕಡಿಮೆ ರಿಜಿಸ್ಟ್ರೇಷನ್‌ ಮೊತ್ತ: ಸೆಕೆಂಡ್ ಹ್ಯಾಂಡ್ ಕಾರನ್ನು ಕೊಳ್ಳುವಾಗ ನೀವು ಕಡಿಮೆ ರಿಜಿಸ್ಟ್ರೇಷನ್‌ ಮೊತ್ತವನ್ನು ಭರಿಸುವ ಅವಕಾಶ ಇರುತ್ತದೆ. ಮಾಹಿತಿಗಳ ಪ್ರಕಾರ ಹೊಸ ಕಾರುಗಳಿಗಿಂತ ಸುಮಾರು ನಾಲ್ಕು ಪಟ್ಟ ಕಡಿಮೆ ಇರುತ್ತದೆ ಎಂದು ತಿಳಿದು ಬಂದಿದೆ. ಹಾಗಾಗಿ ಸೆಕೆಂಡ್‌ ಹ್ಯಾಂಡ್‌ ಕಾರನ್ನು ಕೊಳ್ಳುವುದು ಒಂದು ಉತ್ತಮ ಯೋಚನೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, July 8, 2023, 11:41 [IST]
English summary
Top five advantages of buying used cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+