ಬಹುನೀರಿಕ್ಷಿತ ಹ್ಯುಂಡೈ ಕ್ರೆಟಾ ವಿತರಣೆ ಪಡೆಯಲು 30 ವಾರ ಕಾಯಲೇಬೇಕು

ಭಾರತದ ಮಾರುಕಟ್ಟೆಯಲ್ಲಿ ಕೆಲವು ಕಾರುಗಳು ಭಾರೀ ಜನಪ್ರಿಯತೆಯನ್ನು ಗಳಿಸಿವೆ. ಅವುಗಳ ವಿತರಣೆ ಪಡೆಯಲು ವರ್ಷಗಟ್ಟಲೇ ಕಾಯಲೇಬೇಕು. ಪ್ರಮುಖವಾಗಿ ಟೊಯೊಟಾದ ಇನ್ನೋವಾ ಹೈಕ್ರಾಸ್, ಮಹೀಂದ್ರಾದ ಸ್ಕಾರ್ಪಿಯೋ ಹಾಗೂ ಹ್ಯುಂಡೈನ ಕ್ರೆಟಾ ಎಸ್‌ಯುವಿಗಳು ಸೇರಿವೆ. ಅದರಲ್ಲೂ ಕ್ರೆಟಾಗಾಗಿ ಕನಿಷ್ಠವೆಂದರೂ 7 ತಿಂಗಳು ಕಾಯುವುದು ಅನಿವಾರ್ಯವಾಗಿದೆ

ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹ್ಯುಂಡೈ, ದೇಶೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕ್ರೆಟಾ ಎಸ್‌ಯುವಿಯನ್ನು ರೂ.10.84 ಲಕ್ಷ ಆರಂಭ ಬೆಲೆಯಲ್ಲಿ (ಎಕ್ಸ್ ಶೋರೂಂ) ಬಿಡುಗಡೆ ಮಾಡಿತ್ತು. ಟಾಪ್ ಎಂಡ್ ಮಾದರಿ ದರ ರೂ.19.13 ಲಕ್ಷವಿದೆ. ಮುಂಬರಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಇದರ ಎಂಜಿನ್ ಅನ್ನು ಕಂಪನಿ ನವೀಕರಿಸಿದ್ದು, 6 ಏರ್‌ಬ್ಯಾಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಕ್ರೆಟಾದ ಕೆಲವು ಮಾದರಿ ವಿತರಣೆ ಪಡೆಯಲು 30 ವಾರ ಕಾಯಬೇಕು.

ಬಹುನೀರಿಕ್ಷಿತ ಹ್ಯುಂಡೈ ಕ್ರೆಟಾ ವಿತರಣೆ ಪಡೆಯಲು 30 ವಾರ ಕಾಯಲೇಬೇಕು

ಹ್ಯುಂಡೈ ಕ್ರೆಟಾದ ಡೀಸೆಲ್ ರೂಪಾಂತರಗಳಾದ ಇ, ಇಎಕ್ಸ್ ಹಾಗೂ ಎಸ್ ಕಾರುಗಳನ್ನು ವಿತರಣೆ ಪಡೆಯಲು ಗ್ರಾಹಕರು ಕನಿಷ್ಠವೆಂದರೂ 6 ರಿಂದ 7 ತಿಂಗಳು ಕಾಯುವುದು ಅನಿವಾರ್ಯವಾಗಿದೆ. ಎಸ್ ಪ್ಲಸ್, ಎಸ್ಎಕ್ಸ್ (ಒ) ಎಟಿ ರೂಪಾಂತರಗಳು ಖರೀದಿಸಲು ನೀವು ಬುಕಿಂಗ್ ಮಾಡಿದರೆ, 6 ತಿಂಗಳ ಬಳಿಕ ವಿತರಣೆಯಾಗಲಿದೆ. ಎಸ್ಎಕ್ಸ್ ರೂಪಾಂತರದ ಕಾಯುವಿಕೆ ಅವಧಿ 5 ತಿಂಗಳಿದೆ ಎಂದು ಹೇಳಬಹುದು.

ಹ್ಯುಂಡೈ ಕ್ರೆಟಾ ಎಸ್‌ಯುವಿಯ ಪೆಟ್ರೋಲ್ ರೂಪಾಂತರಗಳು ಯಾವಾಗ ವಿತರಣೆಯಾಗಲಿದೆ ಎಂದು ನೋಡುವುದಾದರೆ, ಎಸ್ ರೂಪಾಂತರವು 7 ತಿಂಗಳ ಬಳಿಕ ನಿಮಗೆ ಸಿಗಲಿದೆ. ಎಸ್ಎಕ್ಸ್ (ಒ) iVT ರೂಪಾಂತರವು ಕೇವಲ 5 ತಿಂಗಳ ಬಳಿಕ ವಿತರಣೆಯಾಗಲಿದೆ. ಇ ರೂಪಾಂತರವು ಬುಕಿಂಗ್ ಮಾಡಿದ 4 ತಿಂಗಳಲ್ಲಿ ದೊರೆಯಲಿದೆ. ಇಎಕ್ಸ್ ಹಾಗೂ ಎಸ್ಎಕ್ಸ್ iVT ರೂಪಾಂತರಗಳು ಕೇವಲ ಮೂರು ತಿಂಗಳಲ್ಲಿ ಗ್ರಾಹಕರ ಕೈ ಸೇರಲಿದೆ.

ಹ್ಯುಂಡೈ ಕ್ರೆಟಾ ಎಸ್‌ಯುವಿಯ ಆರಂಭಿಕ ಆವೃತ್ತಿಗಳಾದ ಎಸ್ ಪ್ಲಸ್, ಎಸ್ಇ ಹಾಗೂ ಎಸ್ಎಕ್ಸ್ ಕೇವಲ ಎರಡು ತಿಂಗಳಲ್ಲೇ ವಿತರಣೆಯಾಗಲಿದೆ. ಆಸಕ್ತ ಗ್ರಾಹಕರು ಅಧಿಕೃತ ಡೀಲರ್ ಶಿಪ್ ಗೆ ಭೇಟಿ ನೀಡುವ ಮೂಲಕ ರೂ.25,000 ಪಾವತಿಸುವ ಮೂಲಕ ಹ್ಯುಂಡೈ ಕ್ರೆಟಾ ಎಸ್‌ಯುವಿಯನ್ನು ಬುಕಿಂಗ್ ಮಾಡಬಹುದು. ಇದು ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಬಹುತೇಕ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ ಎಂದು ಹೇಳಬಹುದು.

ಹ್ಯುಂಡೈ ಕ್ರೆಟಾ ಎಸ್‌ಯುವಿ ಐದು ಆಸನಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದ್ದು, 16.8 kmpl ಮೈಲೇಜ್ ನೀಡುತ್ತದೆ. ಇದರ 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 PS ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.5-ಲೀಟರ್ ಡೀಸೆಲ್ ಎಂಜಿನ್ 115 PS ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ.

ಈ ಕ್ರೆಟಾ ಎಸ್‌ಯುವಿ ಖರೀದಿದಾರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಕರ್ಷಕ ಸನ್ ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಅಡ್ಜಸ್ಟ್ಏಬಾಲ್ ಡ್ರೈವರ್ ಸೀಟ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರೇರ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ಹ್ಯುಂಡೈ ಕ್ರೆಟಾ ಎಸ್‌ಯುವಿ, ಕಿಯಾ ಸೆಲ್ಟೋಸ್, ಟೊಯೊಟಾ ಹೈರಿಡರ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್, ಟಾಟಾ ಹ್ಯಾರಿಯರ್ ಮತ್ತು ಎಂಜಿ ಹೆಕ್ಟರ್‌ಗೆ ಪ್ರತಿಸ್ಪರ್ಧಿಯಾಗಿದ್ದು, ಹ್ಯುಂಡೈ ಕಂಪನಿಯು ಕ್ರೆಟಾದ ನವೀಕರಿಸಿದ ಆವೃತ್ತಿಯನ್ನು ಮುಂದಿನ ವರ್ಷ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ. ಈ ಕಾರು ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ ಎಂದು ವರದಿಯಾಗಿದೆ.

Article Published On: Saturday, February 25, 2023, 8:30 [IST]
English summary
Top hyundai creta waiting period extend 30 weeks details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+