Maruti Suzuki: ಈ ವರ್ಷ ಬಿಡುಗಡೆಯಾದ ಮಾರುತಿ ಸುಜುಕಿ ಕಾರುಗಳಿವು.. ಮೈಲೇಜ್‌ನಲ್ಲಿ ಅವುಗಳದ್ದೇ ಹವಾ!

ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಜನಪ್ರಿಯತೆ ಗಳಿಸಿದೆ. 2023ರಲ್ಲಿ ಕಂಪನಿಯು ಹಲವು ಕಾರುಗಳ ಬಿಡುಗಡೆಗೆ ಸಾಕ್ಷಿಯಾಗಿತ್ತು. ಪ್ರಮುಖವಾಗಿ ಬ್ರೆಜ್ಜಾ ಸಿಎನ್‌ಜಿ, ಗ್ರ್ಯಾಂಡ್ ವಿಟಾರಾ ಸಿಎನ್‌ಜಿ, ಜಿಮ್ನಿ 5-ಡೋರ್, ಫ್ರಾಂಕ್ಸ್ ಎಸ್‌ಯುವಿ ಹಾಗೂ ಇನ್ವಿಕ್ಟೊ ಎಂಪಿವಿಗಳನ್ನು ಬಿಡುಗಡೆಗೊಳಿಸಿತ್ತು.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಸಿಎನ್‌ಜಿ ಮಾದರಿಯನ್ನು ಜನವರಿಯಲ್ಲಿ ಲಾಂಚ್ ಮಾಡಲಾಗಿತ್ತು. ಈ ಕಾರು, ರೂ.13.05 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 1.5-ಲೀಟರ್ ಸಾಮರ್ಥ್ಯದ ಎಂಜಿನ್ 87.83 PS ಗರಿಷ್ಠ ಪವರ್, 121.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯುತ್ತದೆ.

Maruti Suzuki: ಈ ವರ್ಷ ಬಿಡುಗಡೆಯಾದ ಮಾರುತಿ ಸುಜುಕಿ ಕಾರುಗಳಿವು.. ಮೈಲೇಜ್‌ನಲ್ಲಿ ಅವುಗಳದ್ದೇ ಹವಾ!

ಗ್ರ್ಯಾಂಡ್ ವಿಟಾರಾ 26.6 km/kg ಮೈಲೇಜ್ ನೀಡಲಿದ್ದು, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಹೆಡ್ಸ್-ಅಪ್ ಡಿಸ್ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬ್ಯಾಗ್ ಅನ್ನು ಪಡೆದುಕೊಂಡಿದೆ.

ಮಾರುತಿ ಸುಜುಕಿ ಬ್ರೆಜ್ಜಾ ಸಿಎನ್‌ಜಿ (Brezza CNG) ಮಾದರಿಯನ್ನು ಮಾರ್ಚ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಸದ್ಯ, ಈ ಕಾರು, ರೂ.10.60 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದರ 1.5-ಲೀಟರ್ ಎಂಜಿನ್, 88 PS ಪವರ್, 121.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, 25.51 km ಮೈಲೇಜ್ ನೀಡುತ್ತದೆ.

Maruti Suzuki: ಈ ವರ್ಷ ಬಿಡುಗಡೆಯಾದ ಮಾರುತಿ ಸುಜುಕಿ ಕಾರುಗಳಿವು.. ಮೈಲೇಜ್‌ನಲ್ಲಿ ಅವುಗಳದ್ದೇ ಹವಾ!

ಈ ಕಾರು, 5 ಆಸನ ಆಯ್ಕೆಯನ್ನು ಹೊಂದಿದ್ದು, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ರೇರ್ ವ್ಯೂ ಮಿರರ್, ಟಚ್ ಸ್ಕ್ರೀನ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ - ಸ್ಟಾಪ್ ಬಟನ್, ABS (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಅಲಾಯ್ ವೀಲ್ಸ್, ಫ್ರಂಟ್ ಫಾಗ್ ಲೈಟ್ಸ್, ಪವರ್ ವಿಂಡೋಸ್ ಅನ್ನು ಹೊಂದಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki FRONX), ಏಪ್ರಿಲ್ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಿತ್ತು. ಈ ಕಾರು, ರೂ.7.46 ಲಕ್ಷದಿಂದ ರೂ.13.13 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, ಪೆಟ್ರೋಲ್ ರೂಪಾಂತರ 20.1 kmpl - 22.89 kmpl, ಸಿಎನ್‌ಜಿ ರೂಪಾಂತರ 28.51 km/kg ಮೇಲೆಜ್ ನೀಡುತ್ತದೆ.

Maruti Suzuki: ಈ ವರ್ಷ ಬಿಡುಗಡೆಯಾದ ಮಾರುತಿ ಸುಜುಕಿ ಕಾರುಗಳಿವು.. ಮೈಲೇಜ್‌ನಲ್ಲಿ ಅವುಗಳದ್ದೇ ಹವಾ!

ಮಾರುತಿ ಸುಜುಕಿಯ ಬಹುನೀರಿಕ್ಷಿತ ಆಫ್-ರೋಡ್ ಎಸ್‌ಯುವಿ ಜಿಮ್ನಿ (Jimny), ಜೂನ್ ನಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ರೂ.12.74 ಲಕ್ಷದಿಂದ ರೂ.15.05 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗುವ ಈ ಕಾರು, 16.39 - 16.94 kmpl ಮೈಲೇಜ್ ನೀಡುತ್ತದೆ. 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.

ಮಾರುತಿ ಸುಜುಕಿ ಇನ್ವಿಕ್ಟೋ (Invicto) ಎಂಪಿವಿ, ಜುಲೈ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಈ ಕಾರು, ರೂ.24.82 ಲಕ್ಷದಿಂದ ರೂ.28.42 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಈ ಎಂಪಿವಿ 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 23.24 kmpl ಮೈಲೇಜ್ ಕೊಡುತ್ತದೆ. 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, December 24, 2023, 10:30 [IST]
English summary
Top maruti suzuki cars launched 2023 grand vitara brezza cng fronx jimny invicto
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+