ಭಾರೀ ವೇಗದಲ್ಲಿ ಮುನ್ನುಗುತ್ತಿದೆ ಮಹೀಂದ್ರಾ ಸ್ಕಾರ್ಪಿಯೊ: ಅದನ್ನು ತಡೆಯಲು ಸಾಧ್ಯವೇ ಇಲ್ಲ!

ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಮಹೀಂದ್ರಾ, 2023ರ ಫೆಬ್ರವರಿ ಮಾರಾಟ ವರದಿಯನ್ನು ಪ್ರಕಟಿಸಿದ್ದು, ಉತ್ತಮ ಪ್ರಗತಿಯನ್ನು ಸಾಧಿಸಿದೆ. ಕಳೆದ ತಿಂಗಳು 30,358 ಯುನಿಟ್ ಮಾರಾಟ ಮಾಡಿದ್ದು, ವರ್ಷದಿಂದ ವರ್ಷಕ್ಕೆ 10% ಬೆಳೆವಣಿಗೆ ಕಂಡಿದೆ. 2022ರ ಫೆಬ್ರವರಿಯಲ್ಲಿ 27,663 ಯುನಿಟ್ ಸೇಲ್ ಮಾಡಿತ್ತು. ಆ ಬಗ್ಗೆ ಇಲ್ಲಿದೆ ವಿವರ.

ಮೊದಲಿಗೆ ಫೆಬ್ರವರಿ ತಿಂಗಳ ಮಹೀಂದ್ರಾ ಬೊಲೆರೋ ಮಾರಾಟ ಬೆಳವಣಿಗೆ ಬಗ್ಗೆ ಹೇಳುವುದಾದರೆ, ಕಂಪನಿಯು 9,782 ಯುನಿಟ್ ಬೊಲೆರೋ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. ಕಳೆದ 2022ರ ಫೆಬ್ರವರಿ ತಿಂಗಳಲ್ಲಿ 11,045 ಯುನಿಟ್ ಸೇಲ್ ಮಾಡಿತ್ತು. ಅದಕ್ಕೆ ಹೋಲಿಸಿದರೆ, ಶೇಕಡ 11% ಕುಸಿತವನ್ನು ಕಂಡಿದೆ. ಮುಂಬರುವ ದಿನಗಳಲ್ಲಿ ಹಬ್ಬದ ಸೀಸನ್ ಇರುವುದರಿಂದ ಬೊಲೆರೋ ಮಾರಾಟದಲ್ಲಿ ಮತ್ತಷ್ಟು ಪ್ರಗತಿ ಕಾಣಬಹುದು.

ಭಾರೀ ವೇಗದಲ್ಲಿ ಮುನ್ನುಗುತ್ತಿದೆ ಮಹೀಂದ್ರಾ ಸ್ಕಾರ್ಪಿಯೊ: ಅದನ್ನು ತಡೆಯಲು ಸಾಧ್ಯವೇ ಇಲ್ಲ!

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಬೊಲೆರೋ ನಿಯೋ, 7 ಹಾಗೂ 9 ಆಸನ ವ್ಯವಸ್ಥೆಯಲ್ಲಿ ರೂ.9.48 ಲಕ್ಷದಿಂದ ರೂ.11.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗಲಿದೆ. ಇದು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 100 PS ಗರಿಷ್ಠ ಪವರ್ ಹಾಗೂ 260 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 17.29 kmpl ಮೈಲೇಜ್ ನೀಡಲಿದೆ.

ಮಹೀಂದ್ರಾ ಕಂಪನಿ ಸ್ಕಾರ್ಪಿಯೊ ಮಾರಾಟದಲ್ಲಿ ಉತ್ತಮವಾದ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಹೇಳಬಹುದು. ಸ್ಕಾರ್ಪಿಯೊ ಎನ್ ಹಾಗೂ ಕ್ಲಾಸಿಕ್ ಎಸ್‌ಯುವಿಗಳನ್ನು ಒಳಗೊಂಡು ಫೆಬ್ರವರಿಯಲ್ಲಿ ಬರೋಬ್ಬರಿ 6,950 ಯುನಿಟ್ ಮಾರಾಟ ಮಾಡಿದ್ದು, 166% ಪ್ರಗತಿ ಸಾಧಿಸಿದೆ. 2022ರ ಫೆಬ್ರವರಿಯಲ್ಲಿ ಕೇವಲ 2,610 ಯುನಿಟ್ ಸೇಲ್ ಮಾಡಿತ್ತು. ಅಲ್ಲದೆ, ಸ್ಕಾರ್ಪಿಯೊ ಎಸ್‌ಯುವಿಗಳಿಗೆ ಈಗಲೂ ಬಹುಬೇಡಿಕೆ ಇದ್ದು, ಕೆಲವು ರೂಪಾಂತರಗಳಿಗೆ ತಿಂಗಳು ಗಟ್ಟಲೇ ಕಾಯಬೇಕು.

ಭಾರೀ ವೇಗದಲ್ಲಿ ಮುನ್ನುಗುತ್ತಿದೆ ಮಹೀಂದ್ರಾ ಸ್ಕಾರ್ಪಿಯೊ: ಅದನ್ನು ತಡೆಯಲು ಸಾಧ್ಯವೇ ಇಲ್ಲ!

ಮಹೀಂದ್ರಾ ಸ್ಕಾರ್ಪಿಯೊ ಎನ್ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 132 bhp ಗರಿಷ್ಠ ಪವರ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿರುವ ಎಸ್‌ಯುವಿ 175 bhp ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಸ್ಕಾರ್ಪಿಯೊ ಕ್ಲಾಸಿಕ್, 132 bhp ಪವರ್ ಉತ್ಪಾದಿಸುವ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ.

ಮಹೀಂದ್ರಾದ ಬಹುನಿರೀಕ್ಷಿತ ಥಾರ್ 3 ಡೋರ್ ಎಸ್‌ಯುವಿ ಕೂಡ ಒಳ್ಳೆಯ ಮಾರಾಟ ಪ್ರಗತಿಯನ್ನು ದಾಖಲಿಸಿದ್ದು, ಕಳೆದ ಫೆಬ್ರವರಿಯಲ್ಲಿ 5,004 ಯುನಿಟ್ ಮಾರಾಟ ಮಾಡಿದ್ದು, ಕೇವಲ 1% ಕುಸಿತ ದಾಖಲಿಸಿದೆ. ಈ ಮಹೀಂದ್ರಾ ಥಾರ್ 3 ಡೋರ್ ಎಸ್‌ಯುವಿ 2.0 ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಹಾಗೂ 2.2 ಲೀಟರ್ 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ರೂ.9.99 ಲಕ್ಷದಿಂದ ರೂ.16.49 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ.

ಮಹೀಂದ್ರಾ ಕಂಪನಿ ಬಹುನೀರಿಕ್ಷಿತ XUV700 ಎಸ್‌ಯುವಿಯನ್ನು ಕಳೆದ ಫೆಬ್ರವರಿ ತಿಂಗಳಲ್ಲಿ ಗ್ರಾಹಕರು ಇಷ್ಟಪಟ್ಟೆ ಖರೀದಿ ಮಾಡಿದ್ದಾರೆ. ಬರೋಬ್ಬರಿ 4,505 ಯುನಿಟ್ ಸೇಲ್ ಮಾಡಿದ್ದು, ವರ್ಷದಿಂದ ವರ್ಷಕ್ಕೆ 9% ಬೆಳವಣಿಗೆಯನ್ನು ಸಾಧಿಸಿದೆ. ಇದು 200 bhp ಪವರ್ ಉತ್ಪಾದಿಸುವ 2.0 ಲೀಟರ್ ಟರ್ಬೊ ಪೆಟ್ರೋಲ್, 155 bhp/185 bhp ಪವರ್ ಉತ್ಪಾದಿಸುವ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ.

ಮಹೀಂದ್ರಾ ಕಂಪನಿಯ 2023ರ ಫೆಬ್ರವರಿ ಮಾರಾಟ ವರದಿಯನ್ನು ಗಮನಿಸಿದಾಗ ಒಳ್ಳೆಯ ಸಾಧನೆಯನ್ನು ಮಾಡಿದೆ ಎಂದು ಹೇಳಬಹುದು. ಸ್ಕಾರ್ಪಿಯೊ ಮಾತ್ರ ಭಾರೀ ವೇಗದಲ್ಲಿ ಮುಗ್ಗುತ್ತಿದೆ. ಆದರೆ, ಬೊಲೆರೋ ಹಾಗೂ ಥಾರ್ 3 ಡೋರ್ ಎಸ್‌ಯುವಿಗಳು ಕೊಂಚ ಹಿನ್ನಡೆ ಅನುಭವಿಸಿದ್ದು, ಮುಂಬರುವ ದಿನಗಳಲ್ಲಿ ಸುಧಾರಿಸಲಿದೆ. ಬಹುತೇಕ ಗ್ರಾಹಕರು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವುದರಿಂದ ಮಹೀಂದ್ರಾ ಕಾರುಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ ಎಂದು ಹೇಳಬಹುದು.

Article Published On: Thursday, March 9, 2023, 17:30 [IST]
English summary
Top selling mahindra suvs in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+