ವಿಮಾನದಂತ ಅತ್ಯಾಧುನಿಕ ವೈಶಿಷ್ಟ್ಯ, 600 ಕಿ.ಮೀ ರೇಂಜ್‌ನ ಲೋಟಸ್ ಎಲೆಕ್ಟ್ರಿಕ್ ಎಸ್‍ಯುವಿಯ ವಿಶೇಷತೆಗಳು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಲೋಟಸ್ ತನ್ನ ಲೋಟಸ್ ಎಲೆಟ್ರೆ (Lotus Eletre) ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೂಲಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಹೊಸ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ. 2.55 ಕೋಟಿಯಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಈ ಹೊಸ ಲೋಟಸ್ ಎಲೆಕ್ಟ್ರಿಕ್ ಕಾರು ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಹೊಸ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯ ಬಗ್ಗೆ ಹೇಳಿವುದಾದರೆ. ಪ್ರಾರಂಭಿಕ ಬೆಲೆಯು ರೂ. 2.55 ಕೋಟಿ, ಎಸ್‍ಯುವಿಯ ಮಿಡ್-ಸ್ಪೆಕ್ ಬೆಲೆಯು ರೂ.2.75 ಕೋಟಿಯಾದರೆ, ಟಾಪ್-ಸ್ಪೆಕ್ ಬೆಲೆಯು ರೂ. 2.99 ಕೋಟಯಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

Lotus Eletre Electric SUV

ಪರ್ಫಾಮೆನ್ಸ್: ಲೋಟಸ್ ಪ್ರಕಾರ, ಟಾಪ್-ಸ್ಪೆಕ್ ಎಲೆಟ್ರೆ R ವಿಶ್ವದ ಅತ್ಯಂತ ವೇಗದ ಡ್ಯುಯಲ್-ಮೋಟರ್ ಪ್ಯೂರ್ ಎಲೆಕ್ಟ್ರಿಕ್ ಎಸ್‍ಯುವಿಯಾಗಿದೆ. ಈ ಹೊಸ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಎಸ್‍ಯುವಿ 265 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯು 2.95 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆಯಬಹುದು.

ಲೋಟಸ್ ಎಲೆಟ್ರೆ R ಎಲೆಕ್ಟ್ರಿಕ್ ಎಸ್‍ಯುವಿಯು ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಸೆಟಪ್ ನೊಂದಿಗೆ 905 bhp ಪವರ್ ಮತ್ತು 985 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಲೋಟಸ್ ಎಲೆಟ್ರೆ R ಎಲೆಕ್ಟ್ರಿಕ್ ಎಸ್‍ಯುವಿ 112kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದು ಸಂಪೂರ್ಣ ಚಾರ್ಜ್‌ ಮಾಡಿದರೆ 490 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಹುದು.ಲೋಟಸ್ ಎಲೆಟ್ರೆ ಎಸ್‍ಯುವಿಯ ಲೋ ಸ್ಪೆಕ್ S ಮಾದರಿಯು 112kWh ಬ್ಯಾಟರಿ ಪ್ಯಾಕ್‌ನಲ್ಲಿ ಪ್ಯಾಕ್ ಹೊಂದಿದೆ.

Lotus Eletre Electric SUV

ಈ ರೂಪಾಂತರವು 603 bhp ಪವರ್ ಮತ್ತು 710 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಎಸ್‍ಯುವಿಯ ಈ ಲೋ ಸ್ಪೆಕ್ ರೂಪಾಂತರವನ್ನು ಸಂಪೂರ್ಣ ಚಾರ್ಜ್‌ ಮಾಡಿದರೆ 600 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿವೆ. ಲೋ-ಸ್ಪೆಕ್ ಲೋಟಸ್ ಎಲೆಟ್ರೆ ಮತ್ತು ಎಲೆಟ್ರೆ ಎಸ್ ಸಿಂಗಲ್ ಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುವುದರಿಂದ RWD ಮಾದರಿಯಾಗಿದೆ. ಈ ಮಾದರಿಯು 4.5-ಸೆಕೆಂಡ್ ಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಚಾರ್ಜಿಂಗ್: ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಎಸ್‍ಯುವಿ ಎಲ್ಲಾ ರೂಪಾಂತರಗಳು ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು ಕೇವಲ 20 ನಿಮಿಷಗಳಲ್ಲಿ 10% ರಿಂದ 80% ವರೆಗೆ ಚಾರ್ಜ್ ಮಾಡಬಹುದು. ಲೋಟಸ್ ಎಲೆಟ್ರೆ ತನ್ನದೇ ಆದ ಆಪರೇಟಿಂಗ್ ಸಿಸ್ಟಮ್, ಲೋಟಸ್ ಹೈಪರ್ ಓಎಸ್ನೊಂದಿಗೆ ಬರುತ್ತದೆ. ಅಲ್ಲದೆ, ಲೋಟಸ್ ಗೇಮಿಂಗ್ ಉದ್ಯಮದಿಂದ 'ಅನ್‌ರಿಯಲ್ ಎಂಜಿನ್' ತಂತ್ರಜ್ಞಾನವನ್ನು ಬಳಸುತ್ತಿದೆ. ಸ್ಟ್ಯಾಂಡರ್ಡ್ ಸ್ಪೆಕ್ ಎಲೆಟ್ರೆ ಎಲೆಕ್ಟ್ರಿಕ್ ಎಸ್‍ಯುವಿಯು ಐದು ಡ್ರೈವ್ ಮೋಡ್‌ಗಳನ್ನು ಹೊಂದಿವೆ.

Lotus Eletre Electric SUV

ವೈಶಿಷ್ಟ್ಯಗಳು: ಈ ಎಲೆಕ್ಟ್ರಿಕ್ ಎಸ್‍ಯುವಿಯು ಆಕ್ಟಿವ್ ಏರ್ ಸಸ್ಪೆನ್ಷನ್, ಟಾರ್ಕ್ ವೆಕ್ಟರಿಂಗ್, ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲೈಟ್‌ಗಳು, ಆಕ್ಟಿವ್ ಫ್ರಂಟ್ ಗ್ರಿಲ್ ಮತ್ತು 22-ಇಂಚಿನ 10-ಸ್ಪೋಕ್ ಫೋರ್ಜ್ಡ್ ವೀಲ್‌ಗಳನ್ನು ಒಳಗೊಂಡಿದೆ. ಇತರ ಗಮನಾರ್ಹ ತಂತ್ರಜ್ಞಾನವೆಂದರೆ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್, 12-ವೇ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಸೀಟುಗಳು, ಫೋರ್ ಝೂನ್ ಆಟೋಮ್ಯಾಟಿಕ್ ಕ್ಲೈಮೆಂಟಿಕ್ ಕಂಟ್ರೋಲ್ ಮತ್ತು ಇತರ ಹಲವು ವೈಶಿಷ್ಟ್ಯಗಳನ್ನು ಹೊಂದಿವೆ.

ಸ್ಟ್ಯಾಂಡರ್ಡ್ ಎಲೆಟ್ರೆ 1.380-ವ್ಯಾಟ್ 15-ಸ್ಪೀಕರ್ KEF ಪ್ರೀಮಿಯಂ ಆಡಿಯೊ, 15.1-ಇಂಚಿನ FHD OLED ಸೆಂಟರ್ ಸ್ರ್ಕೀನ್ ಬರುತ್ತದೆ. ಇದಲ್ಲದೆ, ಎಲೆಟ್ರೆ ಎಸ್‍ಯುವಿಯ ಎಲ್ಲಾ ರೂಪಾಂತರಗಳು 5 ಸೀಟುಗಳನ್ನು ಸ್ಟ್ಯಾಂಡರ್ಡ್ಆಗಿದೆ. ನಾಲ್ಕು-ಸೀಟುಗಳ ಆವೃತ್ತಿಯು ಕಾರ್ಯನಿರ್ವಾಹಕ ಸೀಟ್ ಪ್ಯಾಕ್‌ನ ಭಾಗವಾಗಿ ಲಭ್ಯವಿದೆ. ಈ ಎಲೆಕ್ತ್ರಿಕ್ ಎಸ್‍ಯುವಿಯು ನ್ಯಾಟ್ರಾನ್ ರೆಡ್, ಗ್ಯಾಲೋವೇ ಗ್ರೀನ್, ಸ್ಟೆಲ್ಲರ್ ಬ್ಲ್ಯಾಕ್, ಕೈಮು ಗ್ರೇ, ಬ್ಲಾಸಮ್ ಗ್ರೇ ಮತ್ತು ಸೋಲಾರ್ ಯೆಲ್ಲೋ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

Lotus Eletre Electric SUV

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Saturday, November 11, 2023, 11:41 [IST]
English summary
Top things you need to know about lotus eletre electric suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+