ಟೊಯೊಟಾ, ಮಾರುತಿಯ ಈ ಎಸ್‍ಯುವಿಗಳಿಗೆ ಭಾರೀ ಬೇಡಿಕೆ: ಗ್ರಾಹಕರು ಮತ್ತಷ್ಟು ಕಾಯಬೇಕು

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ ಮತ್ತು ಜಪಾನ್ ಮೂಲದ ಮತ್ತೊಂದು ದೈತ ಕಂಪನಿಯಾದ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯನ್ನು ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಎರಡು ಎಸ್‍ಯುವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

ಭಾರತದ ರಸ್ತೆಗಳಲ್ಲಿ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಗಳು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಈ ಎರಡು ಎಸ್‍ಯುವಿಗಳು ಕಡಿಮೆ ಅವಧಿಯಲ್ಲಿ ಎಷ್ಟು ಜನಪ್ರಿಯವಾಗಿದೆ ಎಂದು ತೋರಿಸುತ್ತದೆ. ಹೊಸ ವರದಿಗಳ ಪ್ರಕಾರ, ಹೊಸ ಎರಡೂ ಎಸ್‌ಯುವಿಗಳ ಕಾಯುವ ಅವಧಿ (ವೈಟಿಂಗ್ ಪಿರೇಡ್) ಹೆಚ್ಚಾಗಿದೆ. ನೀವು ಕೂಡ ಈ ಎರಡು ಎಸ್‍ಯುವಿಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದ್ದರೆ, ನೀವು ಕೂಡ ತಿಂಗಳುಗಳ ಕಾಲ ಕಾಯಬೇಕು.

ವರದಿಯ ಪ್ರಕಾರ ವೈಟಿಂಗ್ ಪಿರೇಡ್ 15 ತಿಂಗಳವರೆಗೆ ಇರುತ್ತದೆ. ನೀವು ಈ ಎರಡೂ ಎಸ್‍ಯುವಿಗಳ ರೂಪಾಂತರವನ್ನು ಅವಲಂಬಿಸಿ, ವೈಟಿಂಗ್ ಪಿರೇಡ್ ಅಥವಾ ಕಾಯುವ ಅವಧಿ ಅವಲಂಭಿಸಿದೆ. ಇನ್ನು ಮಾರುತಿಯ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರ ಗಮನಕ್ಕೆ, ಈ ಎಸ್‍ಯುವಿಗೆ ಕೆಲವು ಮೆಟ್ರೋ ನಗರಗಳಲ್ಲಿ 9 ತಿಂಗಳವರೆಗೆ ಕಾಯುವ ಅವಧಿ ಹೊಂದಿದೆ. ಇನ್ನು ನೋಯ್ಡಾ, ಗುರುಗ್ರಾಮ್ ಮತ್ತು ಫರಿದಾಬಾದ್ ನಂತಹ ನಗರಗಳಲ್ಲಿ ಹೆಚ್ಚಿನ ಕಾಯುವ ಅವಧಿಯನ್ನು ಹೊಂದಿದೆ.

ಟೊಯೊಟಾ ಹೈರೈಡರ್ ಎಸ್‍ಯುವಿ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯ ಮೈಲ್ಡ್ ಹೈಬ್ರಿಡ್ ರೂಪಾಂತರಕ್ಕೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಈ ಮಾದರಿಗೆ ಗರಿಷ್ಠ 15 ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಇನ್ನು ಮತ್ತೊಂದೆಡೆ ಸ್ಟ್ರಾಂಡ್ ಹೈಬ್ರಿಡ್ ಆವೃತ್ತಿಯು 6 ರಿಂದ 7 ತಿಂಗಳ ನಡುವೆ ಕಾಯುವ ಅವಧಿಯನ್ನು ಹೊಂದಿದೆ. ಈ ಟೊಯೊಟಾ ಹೈರೈಡರ್ ಎಸ್‍ಯುವಿಯು E, S, G ಮತ್ತು V ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಇನ್ನು ಜಿ ಮ್ಯಾನುವಲ್ ರೂಪಾಂತರವು 15 ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ.

ಇನ್ನು ಆಟೋಮ್ಯಾಟಿಕ್ ಆವೃತ್ತಿಯು ಕೇವಲ 2 ತಿಂಗಳ ಕಾಯುವ ಅವಧಿಯನ್ನು ಹೊಂದಿದೆ. ಇನ್ನು ಟಾಪ್-ಸ್ಪೆಕ್ ರೂಪಾಂತರವು 10 ತಿಂಗಳವರೆಗೂ ಕಾಯುವ ಅವಧಿಯನ್ನು ಕೂಡ ಹೊಂದಿದೆ. ಇನ್ನು ಆಟೋಮ್ಯಾಟಿಕ್ ರೂಪಾಂತರಕ್ಕೆ 2 ತಿಂಗಳುಗಳ ಕಾಯುವ ಅವಧಿಯನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು AWD ರುಪಾಂತರವು 3-4 ತಿಂಗಳವರೆಗಿ ಕಾಯುವ ಅವಧಿಯನ್ನು ಹೊಂದಿದೆ. ಇನ್ನು ಈ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯು CNG ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಗಳಲ್ಲಿ ಒಂದೇ ರೀತಿಯ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. ಈ ಎರಡೂ ಎಸ್‍ಯುವಿಗಳು ಮೈಲ್ಡ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿವೆ. ಮೈಲ್ಡ್ ಆವೃತ್ತಿಯು 1.5 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ ಆಗಿದ್ದು, ಈ ಎಂಜಿನ್ 103 ಬಿಹೆಚ್‍ಪಿ ಪವರ್ ಮತ್ತು 136 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.

ಇನ್ನು 1.5 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಸ್ಟ್ರಾಂಗ್ ಹೈಬ್ರಿಡ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ. ಈ ಸಿಸ್ಟಂನಲ್ಲಿ ಪೆಟ್ರೋಲ್ ಎಂಜಿನ್ ಎಲೆಕ್ಟ್ರಿಕ್ ಮೋಟಾರ್ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಈ ಎಂಜಿನ್ 93 ಬಿಹೆಚ್‍ಪಿ ಪವರ್ ಮತ್ತು 122 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು eCVT ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಗಳ ಮ್ಯಾನುವಲ್ ರೂಪಾಂತರವು ಅಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಬರುತ್ತಿದೆ.

ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಎಸ್‍ಯುವಿಗಳಲ್ಲಿ ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಈ ಎಸ್‍ಯುವಿಗಳಲ್ಲಿ ಪನೋರಮಿಕ್ ಸನ್ ರೂಫ್, ಡ್ಯುಯಲ್ ಟೋನ್ ಲೆಥರೆಟ್ ಅಫೋಲ್ಶರಿ, ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಕ್ರೂಸ್ ಕಂಟ್ರೋಲ್ ಮತ್ತು ಇತರ ಫೀಚರ್ಸ್ ಗಳನ್ನು ಒಳಗೊಂಡಿವೆ. ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ಸುಜುಕಿಯು ತನ್ನ ಗ್ಲೋಬಲ್ ಸಿ ಫ್ಲಾಟ್ ಫಾರ್ಮ್ ಅನ್ನು ಬಳಿಸಿ ಅಭಿವೃಧಿಪಡಿಸಲಾಗಿದೆ. ಈ ಎಸ್‍ಯುವಿಯು ಮಾರುತಿ ಸುಜುಕಿ ಕಂಪನಿಯು ನೆಕ್ಸಾ ಡೀಲರ್ ಶಿಪ್ ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Toyota hyryder and maruti grand vitara suvs waiting period increased details in kannada
Story first published: Wednesday, January 25, 2023, 13:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X